ದಿನದ ಸುದ್ದಿ

ಬಸ್ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಮಗು ಪತ್ತೆ

Published

on

ಸುದ್ದಿದಿನ,ಚಾಮರಾಜನಗರ: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಒಂದು ವಾರದ ಗಂಡು ಮಗುವು ಪತ್ತೆಯಾಗಿದೆ.

ಭಾನುವಾರ ಸಂಜೆ ವೇಳೆ ಬಸ್ ನಿಲ್ದಾಣದ ಕುರ್ಚಿಗಳ ಮೇಲೆ ಬ್ಯಾಗ್ ಇರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್‍ನ್ನು ತೆರೆದು ಪರಿಶೀಲಿಸಿದಾಗ ಗಂಡು ಮಗು ಬ್ಯಾಗ್ ನಲ್ಲಿ ಇರುವುದು ಪತ್ತೆಯಾಗಿದೆ.

ಗಂಡು ಮಗು ಪತ್ತೆಯಾಗಿರುವ ಸುದ್ದಿ ಪಟ್ಟಣದಾದ್ಯಂತ ತಿಳಿಯುತ್ತಿದ್ದಂತೆ ಸಾರ್ವಜನಿಕರು ಠಾಣೆಗೆ ಆಗಮಿಸಿ ಮಗುವನ್ನು ಪಡೆಯಲು ಮುಗಿಬಿದ್ದರು. ಪೊಲೀಸರು ಮಗುವಿನ ವಾರಸುದಾರರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version