ದಿನದ ಸುದ್ದಿ

ಬಂಡೀಪುರ ಅರಣ್ಯದಲ್ಲಿ ಮುಂದುವರಿದ ಅಗ್ನಿ ನರ್ತನ..!

Published

on

ಸುದ್ದಿದಿನ,ಚಾಮರಾಜನಗರ : ಬಂಡೀಪುರದಲ್ಲಿ ಅಗ್ನಿ ನರ್ತನ ಮುಂದುವರಿದಿದೆ.ಬೆಳಗಿನ ಜಾವ ಹತೋಟಿಯಲ್ಲಿದ್ದ ಬೆಂಕಿ, ಮಧ್ಯಾಹ್ನದ ವೇಳೆಗೆ ಮತ್ತೆ ಹೆಚ್ಚಾಗೋ ಸಾಧ್ಯತೆ ಇದೆ.

ಬೆಳಗಿನ ಜಾವ ಮಂಜು ಬೀಳುತ್ತಿದ್ದ ಕಾರಣ ಬೆಂಕಿ ಹತೋಟಿಗೆ ಬಂದಿತ್ತು. ಕೆಲವೆಡೆ ಕಾಡ್ಗಿಚ್ಚು ತಣ್ಣಗಾಗಿ ಶಾಂತವಾಗಿ ಕಾಣುತ್ತಿದೆ ಬಂಡಿಪುರ ಅರಣ್ಯ ಪ್ರದೇಶ. ಬಿಸಿಲು ಮತ್ತು ಗಾಳಿ‌ ಹೆಚ್ಚಾದ್ರೆ ಮತ್ತೆ ಬೆಂಕಿ ಹರಡುವ ಸಾಧ್ಯತೆಯೂ ಇದೆ.

ಬೆಂಕಿ ನಂದಿಸಲು ಮೈಸೂರು , ಮಂಡ್ಯ ಜಿಲ್ಲೆಗಳಿಂದ ಅಗ್ನಿ ಶಾಮಕ ವಾಹನಗಳ ಆಗಮಿಸಿದ್ದು, ಇಪ್ಪತ್ತಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಗೆ ಸಜ್ಜುಗೊಳಿಸಲಾಗಿದೆ.ಬೆಂಕಿ ನಂದಿಸಲು ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ವಾಲೆಂಟಿಯರ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಬೀಡುಬಿಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version