ದಿನದ ಸುದ್ದಿ

‘ಫಸ್ಟ್ ಲೇಡಿ ಆಫ್ ಯೋಗ’; ಇಂದ್ರಾ ದೇವಿ

Published

on

ಸುದ್ದಿದಿನ ವಿಶೇಷ : ಜೂನ್ 21 ವಿಶ್ವ ಯೋಗ ದಿನ. ಭಾರತದಲ್ಲಿ ಯೋಗ ಬಹು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇದೊಂದು ನಿತ್ಯ ಜೀವನ ದಿನಚರಿ. ಯೋಗ ಮಾಡುವ ಮೂಲಕ ದಿನ ಆರಂಭವಾಗುತ್ತದೆ. ಈ ಯೋಗ ಈಗಲ್ಲ 50ರ ದಶಕದಲ್ಲೇ ಪ್ರಪಂಚದ ವಿವಿಧ ದೇಶಗಳಲ್ಲಿ ಚಾಲ್ತಿಯಲ್ಲಿತ್ತು.

ಹಾಲಿವುಡ್ ಖ್ಯಾತ ನಟಿ ಮರ್ಲಿನ್ ಮನ್ರೋ ಯೋಗಾಭ್ಯಾಸ ಮಾಡುತ್ತಿದ್ದರು. ತಮ್ಮ ಜೀವನದಲ್ಲಿ ಯೋಗ ಮಾಡಿಕೊಂಡು ಸೌಂದರ್ಯ, ಉತ್ತಮ ಆರೋಗ್ಯ ಸ್ಥಿತಿ ಹೊಂದಿದ್ದರು. ಇಂದ್ರಾ ದೇವಿ ಹೇಳಿಕೊಡುತ್ತಿದ್ದರು.

ರಷ್ಯಾದ ಯುಜೆನಿ ಪೀಟರ್ ಸನ್ ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗದ ಮಹತ್ವ ಸಾರಿದವರು. ಆದ್ದರಿಂದ ಇವರನ್ನು “ಫಸ್ಟ್ ಲೇಡಿ ಆಫ್ ಯೋಗ” ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರು ಹುಟ್ಟಿದ್ದು ರಷ್ಯಾದಲ್ಲಿ.

ಯಾರೀ ಇಂದ್ರಾ ದೇವಿ

ಮೂಲತಃ ರಷ್ಯಾದ ದೇಶದವರಾದ ಇಂದಿರಾ ದೇವಿ, ಮೊದಲ ಹೆಸರು ಯುಜಿನಿ ಪೀಟರ್ ಸನ್ ಎಂದು. ಬ್ಯಾಂಕ್ ಅಧಿಕಾರಿಯ ಮಗಳಾದ ಇಂದ್ರಾ ದೇವಿ, ರವೀಂದ್ರನಾಥ ಟಾಗೋರ್ ಮತ್ತು ಯೋಗಿ ರಾಮಚರಕ ಅವರ ಬರೆದ ಕೃತಿಗಳಿಂದ ಪ್ರಭಾವಿತರಾಗಿ 15ನೇ ವಯಸ್ಸಿನಲ್ಲಿ ಭಾರತದ ಸಂಸ್ಕೃತಿ, ಪರಂಪರೆಗೆ ಶರಣಾದರು. 1927ರಲ್ಲಿ ತಮ್ಮ ಹೆಸರನ್ನು ಇಂದ್ರಾ ದೇವಿ ಎಂದು ಬದಲಾಯಿಸಿಕೊಂಡರು.

ಹೆಸರಾಂತ ಯೋಗ ಶಿಕ್ಷಕ ಮೈಸೂರಿನ ಶ್ರೀ ತಿರುಮಲೈ ಕೃಷ್ಣಂ ಆಚಾರ್ಯ ಅವರ ಶಿಷ್ಯರಾಗಿ ಯೋಗಾಭ್ಯಾಸ ಮಾಡಿದರು. ವಿದೇಶಿ ಮಹಿಳೆಯರಲ್ಲಿ ಯೋಗ ಕಲಿತ ಮೊದಲ ಮಹಿಳೆ ಎಂದು ಮೈಸೂರಿನ ಮಹಾರಾಜರು ಶ್ಲಾಘಿಸಿದರು.

ಬಿಕೆಎಸ್ ಐಯ್ಯಂಗಾರ್, ಕೆ. ಪಟ್ಟಾಭಿ ಜೋಯಿಸ್ ಅವರ ಬಳಿಯೂ ಯೋಗಾಭ್ಯಾಸ ಮಾಡಿದರು. ಯೋಗಗುರು ಕೃಷ್ಣಂ ಆಚಾರ್ಯ ಅವರ ನುಡಿಯಂತೆ ಇಂದ್ರಾ ದೇವಿ ಜಗತ್ತಿನಲ್ಲಿ ಯೋಗ ಪಸರಿಸಲು ಕೆಲಸ ಮಾಡಿದರು.

ಸುದ್ದಿದಿನ.ಕಾಂ| ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version