ದಿನದ ಸುದ್ದಿ
ಮೊಟ್ಟ ಮೊದಲ ಲತಾ ದೀನಾನಾಥ್ ಮಂಗೇಷ್ಕರ್ ಪುರಸ್ಕಾರ ಪಡೆದ ಪ್ರಧಾನಿ ಮೋದಿ
ಸುದ್ದಿದಿನ, ಮುಂಬೈ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಂಬೈನಲ್ಲಿ ಭಾನುವಾರ ಮೊಟ್ಟ ಮೊದಲ ಲತಾ ದೀನಾನಾಥ್ ಮಂಗೇಷ್ಕರ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಳೆದ ಫೆಬ್ರವರಿಯಲ್ಲಿ ಅಗಲಿದ ಗಾನ ಕೋಗಿಲೆ, ಭಾರತರತ್ನ ದಿವಂಗತ ಲತಾ ಮಂಗೇಷ್ಕರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
ಹಿರಿಯ ಗಾಯಕರಾದ ಆಶಾಬೋಸ್ಲೆ, ಉಷಾ ಮಂಗೇಷ್ಕರ್ ಹಾಗೂ ಮೀನಾ ಮಂಗೇಷ್ಕರ್-ಖಡಿಕಾರ್ ಹಾಗೂ ಆದಿನಾಥ್ ಮಂಗೇಷ್ಕರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಗೀತದ ಜೊತೆಗೆ ಲತಾ ಮಂಗೇಷ್ಕರ್ ಅವರೊಳಗಿದ್ದ ದೇಶಭಕ್ತಿಯ ಪ್ರಜ್ಞೆಯ ಮೂಲ ಅವರ ತಂದೆಯಾಗಿದ್ದರು. ವೀರ್ ಸಾವರ್‌ಕರ್ ಬರೆದ ಗೀತೆಯನ್ನು ದೀನಾನಾಥ್‌ಜಿ ಹಾಡಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು ಎಂದು ಪ್ರಧಾನಿ ಹೇಳಿದರು.
ಭಾರತವನ್ನು ಜಾಗತಿಕ ನಾಯಕತ್ವದ ಪಥದಲ್ಲಿರಿಸಿದ ಅಂತಾರಾಷ್ಟ್ರೀಯ ಮುತ್ಸದ್ಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಮಾಸ್ಟರ್ ದಿನಾನಾಥ್ ಮಂಗೇಷ್ಕರ್ ಸ್ಮೃತಿ ಪ್ರತಿಷ್ಠಾನ ಹೇಳಿದೆ. ಭಾರತ ತನ್ನ ವೈಭವಯುತ ಇತಿಹಾಸದಲ್ಲಿ ಕಂಡ ಮಹಾನ್ ನಾಯಕರ ಪೈಕಿ ನರೇಂದ್ರ ಮೋದಿ ಒಬ್ಬರಾಗಿದ್ದು, ಅವರು ಸದಾ ಪ್ರೇರಣಾದಾಯಕರಾಗಿದ್ದಾರೆ ಎಂದು ಪ್ರತಿಷ್ಠಾನ ತಿಳಿಸಿದೆ.
ದೇಶ ಹಾಗೂ ದೇಶದ ಜನತೆಗೆ ವಿಶಿಷ್ಟ ಕೊಡುಗೆ ನೀಡುವ ವ್ಯಕ್ತಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಹಿರಿಯ ನಟಿ ಆಶಾಪರೇಕ್, ಜಾಕಿಶ್ರಾಫ್, ಗಾಯಕ ರಾಹುಲ್ ದೇಶಪಾಂಡೆ ಅವರಿಗೆ ಮಾಸ್ಟರ್ ದೀನಾನಾಥ್ ಪ್ರಶಸ್ತಿ ನೀಡಲಾಯಿತು. ಇದರ ಜೊತೆಗೆ ಮುಂಬೈ ಡಬ್ಬಾವಾಲಾಗಳಿಗೆ ಆನಂದಮಯಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
Maharashtra | Prime Minister Narendra Modi receives the first Lata Deenanath Mangeshkar Award in Mumbai pic.twitter.com/RpgaAKetnC
— ANI (@ANI) April 24, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243