ಲೈಫ್ ಸ್ಟೈಲ್
ಗುಮ್ಮಟನಗರಿಯಲ್ಲೊಂದು ಸುಂದರ ‘ಮತ್ಸ್ಯಲೋಕ’..!
ಮನುಷ್ಯನ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುವ ಮೀನುಗಳು ಇದೀಗ ಗುಮ್ಮಟನಗರಿಯ ಜನರನ್ನು ರಂಜಿಸುವ ಅಲಂಕಾರಿಕ ವಸ್ತುವಾಗಿಯು ಪರಿವರ್ತನೆಯಾಗಿವೆ. ಹೌದು ಮೀನು ಪ್ರೀಯರನ್ನು ಕೈ ಬೀಸಿ ಕರೆಯಲೆಂದೆ ಮತ್ಸ್ಯಲೊಂಕದಿಂದ ಮತ್ಸ್ಯಕನ್ಯೆಯರು ಧರೆಗಿಳಿದು ಬಂದು ಗುಮ್ಮಟನಗರಿಯಲ್ಲಿ ಮತ್ಸ್ಯಲೋಕವನ್ನೆ ಸೃಷ್ಠಿಸಿದ್ದಾರೆ.
ವಿಜಯಪುರದ ಡಾ. ಬಿ.ಆರ್.ಅಂಬೇಡ್ಕರ ಕ್ರಿಡಾಂಗಣ ಅಮೀಪದ ಆನ್-ಲೈನ್ ಟ್ರೇಂಡಿಂಗ್ ಸಂಕೀರ್ಣದ ಆವರಣದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ “ಬೃಹತ್ ಮತ್ಸ್ಯ ಮೇಳ 2020”ಯಲ್ಲಿ ನೋಡುಗರ ಕಣ್ಣಿಗೆ ಸಂಭ್ರಮವನ್ನು ಆನಂದಿಸುವಂತೆ ಹಬ್ಬವನ್ನುಂಟು ಮಾಡಿದ್ದವು.
ಮತ್ಸ್ಯ ಮೇಳಕ್ಕೆ ಕೊನೆಯದಿನವಾದ ಜ.14ರಂದು ಜನರಿಂದ ಉತ್ತಮವಾದ ರೀತಿಯಲ್ಲಿ ಸ್ಪಂದನೆ ದೊರೆತಿದೆ. ಹೌದು ಬೆಳಗಿನಿಂದಲೆ ಮತ್ಸ್ಯಕನ್ಯೆಯರನ್ನು ನೋಡಲೆಂದು ಜನರು ತಂಡೊಪ ತಂಡವಾಗಿ ಆಗಮಿಸಿದರು.
ತರಹೇವಾರಿ ಮೀನು
ಮಿಲ್ಕ್ ಮಾರ್ಫ್, ಗ್ರೀನ್‍ಸ್ಕೇಟ್, ರೋಜಿ ಬಾರ್ಬ್, ಪೆನ್ಸಿಲ್ ಟೆಟ್ರಾ, ಪಫರ್, ನಿಯೋನ್ ಟೆಟ್ರಾ, ಸಿಂಗಾಪುರ್ ಗಪ್ಪಿ, ಟೆಟ್ರಾ, ಚೆರ್ರಿ ಬಾರ್ಬ್, ವೆನಿಲ್ಲಾ ಕಾರ್ಫ್, ಹಾಕಿ ಸ್ಟಿಕ್ ಟೆಟ್ರಾ, ಸರ್ಪೆಟೆಟ್ರಾ, ಕೊಯಿಕಾರ್ಪ್, ಆರೆಂಜ್ ಕೊಯಿ, ಆಲ್‍ಬಿನೋ ಗೌರಾಮಿ ಹೆಡ್‍ಗೋಲ್ಡ್, ನಿಯೋನ್ ಟೆಟ್ರಾ, ಗಪ್ಪಿ ಮೀನು, ಆರೇಟಿಸ್, ತಿಲಾಪಿಯ್, ಕಪ್ಪು ಮೋಲಿ.
ಕ್ಲೌನ್ ಬಾರ್ಬ್, ಟೈಗರ್ ಶಾರ್ಕ್, ಸಿಲ್ವರ್ ಶಾರ್ಕ್, ಟೈಗರ್ ಬಾರ್ಬ್, ಕತ್ತಿ ಬಾಲದ ಮೀನು, ಆಲ್ಬಿನೋ ಕ್ಯಾಟ್ ಫಿಶ್, ಸಕ್ಕರ್ ಮೌತ್ ಕ್ಯಾಟ್ ಫಿಶ್, ನೀಲಿ ಮತ್ತು ಹಳದಿ ಮಾಫ, ಬಿಳಿ ಮೋಲಿ, ಗೋಲ್ಡ್ ಫಿಶ್, ಟೈಗರ್ ಬಾರ್ಬ, ಅಲ್ಬನೋ ಶಾರ್ಕ್, ಏಂಜಲ್ ಫಿಶ್(ಗಂಧರ್ವ ಮೀನು).
ಅಬ್ಬಾ ಈ ಮೀನುಗಳ ಹೆಸರು ಹೇಳುವಷ್ಟರಲ್ಲಿ ನನಗೆ ಸುಸ್ತಾಯಿತುರಿ. ಹೀಗೆ ಅನೇಕ ತಳಿಯ ನೂರಕ್ಕೂ ಹೆಚ್ಚು ಬಗೆಯ ದೇಶ-ವಿದೇಶಿಯ ಮೀನುಗಳು ಇಲ್ಲಿ ಒಂದೆ ಸೂರಿನ ಅಡಿಯಲ್ಲಿ ಸೇರಿ ಕಿರಿಯರಿಂದ ಹಿಡಿದು ಹಿರಿಯರವರೆಗೂ ಕೈಬೀಸಿ ಕರೆದು ರಂಜಿಸುತ್ತಿದ್ದವು. ಅಷ್ಟೇ ಅಲ್ಲದೆ ಇವುಗಳಲ್ಲಿ ಮನೆಯಲ್ಲಿ ಸಾಕುವಂತಹ ಮೀನುಗಳು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.
ಈ ಸುಂದರ ಮೀನುಗಳುಗಳಲ್ಲಿ ವಿಶ್ವ ಪ್ರಸಿದ್ಧಿ ಹೊಂದಿರುವ, ಹಾಗೂ ಅಧಿಕ ಬೆಲೆ ಹೊಂದಿರುವ ಅರವಾನ ಮತ್ತು ಫ್ಲವರ್ ಹಾರನ್ ಮೀನುಗಳನ್ನು ಎಲ್ಲರ ಗಮನ ಸೆಳೆದವು. ಆದರೆ ಇನ್ನೂ ಕೆಲವು ಬೆಲೆಗಳ ಮೂಲಕ ಹುಬ್ಬೆರುಸುವಂತೆ ಮಾಡಿದ್ದವು. ಅವುಗಳಲ್ಲಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಒಂದು ಸೆ.ಮೀ ಅಳತೆಯ ‘ಡೈಮಂಡ್ ಸ್ಟ್ರಿಂಗ್ ರೆ’ಗೆ ಒಂದು ಲಕ್ಷ ರೂ.
ಇದೆ, ಅದೇ ಐದು ಸೆ.ಮೀ ಗೆ ಐದು ಲಕ್ಷ ರೂ ಇದೆ, ಅದೆ ಒಂದುವರೆ ಕೆ.ಜಿ 20ಲಕ್ಷ ರೂ ಇದೆ. ‘ಅಲಿಗೇಟರ್‍ಗಾರ್’ ಎಂಬ ಮೀನಿಗೆ 2 ಲಕ್ಷ ರೂ, ‘ಲಿಯೋ ಪಾರ್ಡ್ ಡಿಸ್ಕಸ್’ ಮೀನಿಗೆ 1ಲಕ್ಷ ರೂ, ಚೀನಾದ ವಾಸ್ತುಮೀನು ‘ಪ್ಲವರ್ ಹಾರ್ನ್’ ಬೆಲೆ 70 ಸಾವಿರ ರೂ, ಹೀಗೆ ಅನೇಕ ಮೀನುಗಳು ಬೆಲೆಗಳ ಮೂಲಕ ಜನರನ್ನು ಆಕರ್ಷಣೆ ಮಾಡಿದವು ಇನ್ನು ಕೆಲವು ರಂಗು ರಂಗಾದ ಬಣ್ಣದಿಂದ ಮಕ್ಕಳನ್ನು ಆಕರ್ಷಣೆ ಮಾಡಿದವು. ಇದರ ಜೊತೆಗೆ ಮಕ್ಕಳು ಆಟವಾಡುತ್ತಾ ನಕ್ಕು ನಲಿದರು, ಹಾಗೂ ಯುವಜನರು ಸೆಲ್ಫಿ ಕ್ಲಿಕಿಸಿ ಸಂಭ್ರಮಿಸಿದರು.
ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಯೋಜನೆಗಳು
- ಮೀನುಗಾರಿಕೆ ಮೂಲಭೂತ ಸೌಲಭ್ಯಗಳ ನಿರ್ಮಾಣ ಮತ್ತು ನಿರ್ವಹಣೆ.
- ಸಾರ್ವಜನಿಕ ವೀಕ್ಷಣೆಗಾಗಿ ಮುದ್ದು ಮೀನು ಸಂಗ್ರಹಾಲಯ ನಿರ್ವಹಣೆ.
- ಉಚಿತ ಮೀನುಮರಿಗಳ ಹಂಚಿಕೆಯಿಂದ ರೈತರ ಸ್ವಂತ ಜಮೀನುಗಳಲ್ಲಿ ಸಣ್ಣ ಪ್ರಮಾಣದ ಜಲ ಮೂಲಗಳಲ್ಲಿ ಮೀನು ಉತ್ಪಾದನೆಗೆ ಉತ್ತೇಜನೆ ಮಾಡುವುದು.
- ಮೀನು ಬಲೆ ಮತ್ತು ಹರಿಗೋಲನ್ನು ಉಚಿತವಾಗಿ ನೀಡುವುದು.
- ಮತ್ಸ್ಯವಾಹಿನಿ ಯೋಜನೆಯಡಿ ಸಹಾಯಧನ ರೂಪದಲ್ಲಿ ಮೀನು ಮಾರಾಟ ಸಲಕರಣೆ ವಿತರಣೆ
- ಕೆರೆಗಳಲ್ಲಿ ಬಿತ್ತನೆ ಮಾಡುವ ಮೀನುಮರಿಗಳಿಗೆ ಸಹಾಯಧನ
- ನಿರ್ವಸತಿ ಮೀನುಗಾರರಿಗೆ ಮತ್ಸ್ಯ ಆಶ್ರಯ ಯೋಜನೆಯ ಅಡಿಯಲ್ಲಿ ವಸತಿ ಹೊಂದಲು ಧನ ಸಹಾಯ ಕಲ್ಪಸುವುದು
- ಜಲಾಶಯ ಮತ್ತು ನದಿ ಮೀನುಗಾರರಿಗೆ ಜೀವ ರಕ್ಷಕ ಸಾಧನಗಳ ವಿತರಣೆ
- ಸ್ವಂತ ಜಮೀನಿನಲ್ಲಿ ದೊಡ್ಡ ಪ್ರಮಾಣದ ಕೃಷಿ ಹೊಂಡಗಳನ್ನು ನಿರ್ಮಿಸಿ ಸುಧಾರಿತ ಮೀನುಗಾರಿಕೆ ಮಾಡಲು ಸಹಾಯಧನ ಕಲ್ಪಿಸುವುದು
- ರಾಷ್ಟ್ರೀ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ನೆರವಿಂದ ಜಲಾಶಯಗಳ ಮೀನುಗಾರಿಕೆ ಅಭಿವೃದ್ಧಿ ಹಾಗೂ ತರಬೇತಿ, ವಿಸ್ತರಣೆ ಮತ್ತು ಸಂಶೋಧನೆ ನಡೆಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08352-255734
ಮೀನುಗಾರಿಕೆ ಸಹಾಯಕ ನಿರ್ದೇಶಕ ವಿಜಯಪುರ: 9480822974
ಮೀನುಗಾರಿಕೆ ಸಹಾಯಕ ನಿರ್ದೇಶಕ ಮುದ್ದೇಬಿಹಾಳ: 9480822975
ಅಭಿಪ್ರಾಯಗಳು
- ಈ ಮೀನುಗಳನ್ನು ದೇಶ ವಿದೇಶಗಳಿಂದ ತರಲಾಗಿದೆ. ಸಾರ್ವಜನಿಕರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರೀಯೆ ಸಿಕ್ಕಿದೆ. ಮೀನುಗಳನ್ನು ಶಿವಮೊಗ್ಗ, ಮೈಸುರು, ಬೆಂಗಳೂರು, ಮಂಗಳೂರು, ಅಮೇರಿಕಾ, ಆಸ್ಟ್ರೇಲಿಯಾ, ಹೀಗೆ ಅನೇಕ ದೇಶಗಳಿಂದ ಲಕ್ಷಾಂತರ ಹಣ ಬಂಡವಾಳ ಹಾಕಿ ಇವುಗಳನ್ನು ಇಲ್ಲಿವರೆಗೆ ಆಮ್ಲಜನಕದ ಸಹಾಯದಿಂದ ತಂದಿದ್ದೇವೆ.
| ದಯಾನಂದ ಬಜೆಂತ್ರಿ
ಕ್ಷೇತ್ರಪಾಲಕ ಮೀನುಗಾರಿಗೆ ಇಲಾಖೆ ವಿಜಯಪುರ
- ನಾನು ಈ ರೀತಿಯ ಮೀನುಗಳನ್ನು ವಿದೇಶದಲ್ಲಿ ನೋಡಿದ್ದೆ. ಅಂಟ್ಲಾಟಿಕಾದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜಲವಿಹಾರಕ್ಕೆ ಹೋದಾಗ ಕೈಯಲ್ಲಿ ಹಿಡಿದ್ದು ಸಂಭ್ರಮ ಪಟ್ಟಿದೆ. ಈಗ ಅದೆ ಅನುಭವ ಇಲ್ಲಿ ಮತ್ತೊಂದು ಬಾರಿ ಅನುಭವಿಸಿದೆ. ಮೀನುಗಾರಿಕೆ ಇಲಾಖೆಯವರು ಇಂತಹ ದೊಡ್ಡ ಪ್ರಮಾಣದಲ್ಲಿ ಮತ್ಸ್ಯ ಮೇಳ ಏರ್ಪಡಿಸಿರುವುದರಿಂದ ಎಲ್ಲರ ಜ್ಞಾನವು ಹೆಚ್ಚಿಸಿಕೊಳ್ಳಬಹುದು, ಹಾಗೂ ಮೀನುಗಳಲ್ಲಿ ಎಷ್ಟು ವಿಧಗಳು ಇದೆ ಎಂಬುದು ತಿಳಿದು ತಮ್ಮ ಮಕ್ಕಳಿಗೆ ತಿಳಿಸುವಲ್ಲಿ ಅನುಕೂಲವಾಗಿದೆ.
|ಶೋಭಾ ನಾಯಕ (ಸಾರ್ವಜನಿಕರು)
–ಕಾಂಚನಾ ಬಸವರಾಜ ಪೂಜಾರಿ
3ನೇ ಸೇಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9980346243