ದಿನದ ಸುದ್ದಿ
ಪ್ರವಾಹದಿಂದ ಹಾಸನದ ರಾಮನಾಥಪುರ ದಲ್ಲಿ ಆದ ನಷ್ಟವೆಷ್ಟು ಗೊತ್ತಾ ?
ಸುದ್ದಿದಿನ ಡೆಸ್ಕ್: ಪ್ರವಾಹದಿಂದ ಹಾಸನದ ರಾಮನಾಥಪುರ ಅಂದಾಜು 72 ಕೋಟಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಪ್ರವಾಹದಿಂದ 201 ಮನೆಗಳ 670 ಜನ ನಿರಾಶ್ರಿತರಾಗಿದ್ದು, ಒಂದು ಸಾವಿರ ಮನೆಗಳು ಕುಸಿದು 5 ಕೋಟಿ ನಷ್ಟ ಸಂಭವಿಸಿದೆ. ಇನ್ನು 23.95 ಕೋಟಿ ವೆಚ್ಚದ PWD ರಸ್ತೆ ಹಾನಿಯಾಗಿದೆ, 22.64 ಕೋಟಿ ವೆಚ್ಚದ ಶಾಲೆ, ಆಸ್ಪತ್ರೆ ಕೆರೆ ಹಾನಿಗೊಳಗಾಗಿವೆ.
8750 ಎಕರೆಯ ಬೆಳೆ ನೀರಿನಲ್ಲಿ ಮುಳುಗಿದ್ದು, 20.60 ಕೋಟಿ ಯಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳ ಸರ್ವೇಯಿಂದ ಮಾಹಿತಿ ಬಹಿರಂಗವಾಗಿದೆ.
ಜಿಲ್ಲೆಯಲ್ಲಿ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಸಂತ್ರಸ್ಥರ ರಕ್ಷಣಾ ಕಾರ್ಯ ಬಹುತೇಕ ಪೂರ್ಣವಾಗಿದೆ.ತಮ್ಮ ಮನೆಗಳ ಪರಿಶೀಲನೆಗೆ ಪ್ರವಾಹ ಸಂತ್ರಸ್ಥರು ತೆರಳುತ್ತಿದ್ದಾರೆ.
ಸಾಕು ಪ್ರಾಣಿಗಳ ಮೂಕ ರೋದನ !
ವಾರದಿಂದ ಮೇವುಗಳಿಲ್ಲದೆ ಬಡವಾಗಿರುವ ಸಾಕು ಪ್ರಾಣಿಗಳು.ಗ್ರಾಮ ತೊರೆದಾಗ ಇದ್ದ ಮನೆ ಈಗ ಕಾಣದೆ ಹಲವರು ಕಂಗಾಲಾಗಿದ್ದಾರೆ.ಸಂತ್ರಸ್ಥರು ಗ್ರಾಮ ತೊರೆದ ಬಳಿಕ ಕೊಚ್ಚಿ ಹೋಗಿರುವ ಹಲವು ಮನೆಗಳು.ವಾಹನ, ಸಾಕು ಪ್ರಾಣಿಗಳು ಕೂಡ ನಾಪತ್ತೆ. ಇನ್ನು ಮಡಿಕೇರಿ- ಮಂಗಳೂರು ರಸ್ತೆ ವಾರದಿಂದ ಬಂದ್ ಆಗಿದೆ.