ದಿನದ ಸುದ್ದಿ
ನಂಜುಂಡೇಶ್ವರನ ಸನ್ನಿಧಿಗೆ ಪ್ರವಾಹ
ಸುದ್ದಿದಿನ ಡೆಸ್ಕ್: ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಬೆನ್ನಿಗೇ ನಂಜನಗೂಡಿಗೆ ಪ್ರವಾಹ ಮುಟ್ಟಿದೆ.
ಅದರಲ್ಲೂ ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇಗುಲದ ಬಾಗಿಲಿಗೆ ಪ್ರವಾಹ ಮುಟ್ಟಿದ್ದು, ಭಕ್ತರು ನಂಜುಂಡನ ದರ್ಶನಕ್ಕೆ ಹರಸಾಹಸಪಡುತ್ತಿದ್ದಾರೆ.
ಕಪಿಲೆ ಉಕ್ಕಿ ಹರಿಯುತ್ತಿರುವ ಪರಿಣಾಮ ಈಗಾಗಲೆ ನಂಜನಗೂಡು ಸೇತುವೆ ಮೇಲೆ ನೀರು ಬಂದಿದೆ. ಕ್ರಮೇಣ ಅದು ದೇಗುಲದತ್ತ ಬಂದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ದೇಗುಲದ ಬಳಿ ಇರುವ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದ ಪಂಚ ಬೃಂದಾವನ ಸಹ ಮುಳುಗಿದೆ.