ದಿನದ ಸುದ್ದಿ

ದಲಿತರು ಮಾಡಿದ ಆಹಾರ ತಿನ್ನದ ಪ್ರವಾಹ ಸಂತ್ರಸ್ತರು

Published

on

ಸುದ್ದಿದಿನ ಡೆಸ್ಕ್: ಕೇರಳದ ಅಲಪ್ಪುಳ ಜಿಲ್ಲೆಯ ಕ್ಯಾಂಪ್‍ವೊಂದರಲ್ಲಿ ಮೇಲ್ವರ್ಗದ ಜನರು ಪ್ರತ್ಯೇಕ ಕ್ಯಾಂಪ್ ಮಾಡಿಕೊಂಡು, ದಲಿತರಿಗೆ ಆಹಾರ ನೀಡಲು ನಿರಾಕರಿಸುತ್ತಿರುವುದಾಗಿ ಕ್ಯಾಂಪ್‍ನ ದಲಿತ ಸದಸ್ಯರೊಬ್ಬರು ದೂರಿದ್ದಾರೆ.
ಜಿಲ್ಲೆಯ ಸ್ಕೂಲ್‍ನಲ್ಲಿ ಹಾಕಿರುವ ನಿರಾಶ್ರಿತರ ಶಿಬಿರದಲ್ಲಿ ಮೇಲ್ಜಾತಿಯವರು ಪ್ರತ್ಯೇಕ ಕ್ಯಾಂಪ್ ಮಾಡಿಕೊಂಡು ನೆರೆ ಪರಿಹಾರವಾಗಿ ಬಂದ ಅರ್ಧ ದಿನಸಿಯನ್ನು ಪಡೆದು ದಲಿತರಿಗೆ ಊಟ ಕೊಡಲು ನಿರಾಕರಿಸಿದ್ದಾರೆ. ಇನ್ನು ಕೆಲವೆಡೆ ದಲಿತರು ಅಡುಗೆ ಮಾಡಿದ್ದನ್ನು ತಿನ್ನಲು ನಿರಾಕರಿಸುತ್ತಿದ್ದಾರೆ ಎಂದು ಕ್ಯಾಂಪ್‍ನ ಸದಸ್ಯರು ಆರೋಪಿಸಿದ್ದಾರೆ.
ಅಲಪ್ಪುಳ ಜಿಲ್ಲೆಯ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ದಲಿತ ಸಮುದಾಯದವರು ಡಿಸಿ ಬಳಿ ದೂರು ನೀಡಿದ್ದಾರೆ. ಎರಡೂ ಸಮುದಾಯದವರ ದೂರುಗಳನ್ನು ಆಲಿಸಿರುವ ಜಿಲ್ಲಾಧಿಕಾರಿಗಳು ಈ ಕುರಿತು ವರದಿ ನೀಡುವಂತೆ ತಹಸೀಲ್ದಾರ್‍ಗೆ ಆದೇಶಿಸಿದ್ದಾರೆ.
ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ ಭಾರಿ ನೆರೆ ಆವರಿಸಿದ್ದು, ಜನ ತತ್ತರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version