ಲೈಫ್ ಸ್ಟೈಲ್

ಕಿವಿಗೆ ‘ಹೂ’ವಿಟ್ಟಳಾ ಸುಂದರಿ..!

Published

on

ನಿರೂಪಕಿ ಅನುಶ್ರೀ

ಕಿವಿ ಮೇಲೆ ಫ್ಲವರ್ ಕಮಾಲ್..!

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೂ ಎಂದರೆ ಪಂಚಪ್ರಾಣ. ಬಣ್ಣ ಬಣ್ಣದ ಆಕರ್ಷಕ ಹೂಗಳು ಎಲ್ಲರ ಗಮನ ಸೆಳೆಯುತ್ತವೆ. ಹೆಣ್ಣು ಮಕ್ಕಳು ಮುಡಿಗೆ ಮಲ್ಲೆ, ಕನಕಾಂಬರ, ಜಾಜಿ, ಸೇವಂತಿ ಕುಡಿಯುವುದು ಸರ್ವೇಸಾಮಾನ್ಯ. ಹಿಂದೆಲ್ಲ ಹೆಣ್ಣು ಮಕ್ಕಳು ಸೈಡ್ ರೋಸ್ ಮುಡಿಯುತ್ತಿದ್ದರು.ಕಾಲ ಬದಲಾದಂತೆ ಹೆಣ್ಣು ಮಕ್ಕಳು ಹೂ ಮುಡಿಯುವುದನ್ನೇ ಮರೆತರೇನೋ ಅನ್ನುವಷ್ಟರಲ್ಲಿ ಹೆಂಗಳೆಯರ ಕಿವಿ ಮೇಲೆ ಫ್ಲವರ್ ಅರಳಿದೆ.

ಲೂಸ್ ವೆಟ್ ಹೇರ್ ಜೊತೆ ಸಮುದ್ರದ ಬಳಿ ಸಿಗುವ ಬಿಳಿ ಹೂಗಳನ್ನು ಕಿವಿಯ ಹಿಂಬದಿಯಲ್ಲಿ ಸಿಕ್ಕಿಸಿಕೊಂಡು  ಫೋಟೋ ಕ್ಲಿಕ್ಕಿಸುವುದು ಈಗ  ವೈರಲ್ ಆಗಿದೆ. ಬೀಚ್ ಫೋಟೋ ಶೂಟ್ ಗಳಲ್ಲಂತೂ ಕಿವಿ ಮೇಲೆ ಫ್ಲವರ್ ಅರಳಿದ ಮೇಲೇ ಕ್ಲಿಕ್ ಬಟನ್ ಒತ್ತುವುದು.

ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ನ ನಟೀಮಣಿಯರೂ ಈ ಬೀಚ್ ಫ್ಲವರ್ ಗೆ ಫುಲ್ ಫಿದಾ ಆದಂತಿದೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

ಇಲಿಯಾನ

ರಾಧಿಕಾ ಪಂಡಿತ್

ದಿಶಾ

ರುಮಾನ

ಚಾರ್ಮಿ

ಪಂಚಭಾಷಾ ನಟಿ  ಚಾರ್ಮೀ, ಇಲಿಯಾನಾ, ತ್ರಿಶಾ, ಕನ್ನಡ ದ ಅನುಶ್ರೀ, ಸಂಗೀತ, ರಾಧಿಕಾ ಪಂಡಿತ್  ರಮ್ಯಾ… ಹಲವಾರು ನಟಿಯರ ಕಿವಿಯ ಮೇಲೆ ಫ್ಲವರ್ ಅರಳಿದೆ.

ಸ್ವಿಮ್ಮಿಂಗ್ ಪೂಲ್, ಬೀಚ್ ಫೋಟೋ ಶೂಟ್ ಗಳ ಪ್ಲಾನ್ ನಿಮ್ಮದಾದಲ್ಲಿ ಕಿವಿಯ ಮೇಲಿನ ಫ್ಲವರ್ ಮರೆಯದಿರಿ.

Leave a Reply

Your email address will not be published. Required fields are marked *

Trending

Exit mobile version