/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಜಾನಪದ ಕ್ಷೇತ್ರದಲ್ಲಿ ಅಧ್ಯಯನ ವೇತನಕ್ಕೆ ಎಸ್‌ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ ದಾವಣಗೆರೆ: ಕರ್ನಾಟಕ ಜಾನಪದ ಅಕಾಡೆಮಿಯು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ಜಾನಪದ ಕ್ಷೇತ್ರದಲ್ಲಿ  3 ತಿಂಗಳಿನ ಅವಧಿಗೆ ಹೆಚ್ಚಿನ ಸಂಶೋಧನೆ/ ಅಧ್ಯಯನ ಮಾಡಲು ಫೆಲೋಶಿಪ್ ನೀಡಲು 45 ವಯೋಮಾನದೊಳಗಿನ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಧ್ಯಯನದ ವಿಷಯಗಳು:  ಬಿಡುಗಡೆ ದಾರಿಯಾಗಿ ತಮಟೆ, ಜನಪದರ ಬಾಯಲ್ಲಿ ಸಿಂಧೂರ ಲಕ್ಷಣ, ಖಲಂದರರು ಒಂದು ಅಧ್ಯಯನ, ಜಾನಪದೀಯ ಹಾಗೂ ಆಧುನಿಕ ಮಹಿಳಾ ಪ್ರಜ್ಞೆಗಳ ಸಂಘರ್ಷ, ಜಾನಪದ ಸಾಹಿತ್ಯದಲ್ಲಿ ಸೌಹಾರ್ದತೆ, ಹಾವಾಡಿಗರೂ ಒಂದು ಅಧ್ಯಯನ, ಯುವಕರು ಮತ್ತು ಜಾನಪದ, ಡೋಹರರು ಒಂದು ಅಧ್ಯಯನ, ಸಮೂಹ ಮಾಧ್ಯಮದಲ್ಲಿ ಜಾನಪದ ನೆಲೆಗಳು, ಜಾನಪದದಲ್ಲಿ ಧರ್ಮ.

ಈ ವಿಷಯಗಳಲ್ಲಿ ಅಧ್ಯಯನ ಮಾಡಲು ಆಸಕ್ತಿ ಹೊಂದಿರವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಕರ್ನಾಟಕ ಜಾನಪದ ಅಕಾಡೆಮಿಯಿಂದ ಪಡೆದು ಸೆಪ್ಟೆಂಬರ್ 15ರ ಸಂಜೆ 5 ಗಂಟೆ ಒಳಗೆ ಸಲ್ಲಿಸಬಹುದು. ಅಧ್ಯಯನ ವೇತನದ ಮೊತ್ತವು ರೂ. 1,00,000 (ಒಂದು ಲಕ್ಷ ಮಾತ್ರ)ಗಳಾಗಿದ್ದು, ಇದರಲ್ಲಿ ಅಧ್ಯಯನಕಾರರಿಗೆ 70,000 ರೂ., ಮಾರ್ಗದರ್ಶಕರಿಗೆ 5,000 ರೂ. ಮತ್ತು ಪ್ರಕಟಣೆಗಾಗಿ 25,000 ರೂ.ಗಳನ್ನು ಕಾಯ್ದಿರಿಸಲಾಗಿದೆ. ಆಯ್ಕೆಗೊಂಡವರು 150 ಪುಟಗಳ ಡಿಟಿಪಿ ಮಾಡಿದ ಹಸ್ತ ಪ್ರತಿಯನ್ನು ಹಾಗೂ ವಿಷಯಕ್ಕೆ ಸಂಬಂಧಿಸಿದ ವಿವರಗಳನ್ನು ಸಿಡಿಗೆ ಅಳವಡಿಸಿ ಅಕಾಡೆಮಿಗೆ ಒಪ್ಪಿಸಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಸಲಹಾ ಸಂದರ್ಶನದ ತೀರ್ಮಾನದಂತೆ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್ ಮೂಲಕ ಅರ್ಜಿ ಪಡೆಯಬಹುದು. ರಿಜಿಸ್ಟ್ರಾರ್ ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560002. ದೂ.ಸಂ: 080-22215509 ಇವರನ್ನು ಸಂಪರ್ಕಿಸಬಹುದೆಂದು  ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version