ಲೈಫ್ ಸ್ಟೈಲ್

ಕೊರೋನ ರೋಗವನ್ನೆದುರಿಸಲು ಆಹಾರ ನಿಯಂತ್ರಣ

Published

on

  • ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಎಂಡಿ, ತಜ್ಞ ವೈದ್ಯರು, ಡಾ. ಬಾಲಸರಸ್ವತಿ, ಡಿಎನ್‌ಬಿ, ಚರ್ಮ ತಜ್ಞರು

ಕೊರೋನ ರೋಗವು ಆಧುನಿಕ ಆಹಾರ ಮತ್ತು ಆಧುನಿಕ ಜೀವನಶೈಲಿಗಳೊಂದಿಗೆ ಮತ್ತು ಅವುಗಳಿಂದುಂಟಾಗುವ ಆಧುನಿಕ ರೋಗಗಳೊಂದಿಗೆ ಬಹು ನಿಕಟವಾಗಿ ಬೆಸೆದುಕೊಂಡಿದೆ – ಈ ರೋಗಗಳು ಕೊರೋನ ರೋಗವನ್ನು ಬಿಗಡಾಯಿಸುತ್ತವೆ, ಕೊರೋನ ರೋಗವು ಈ ಆಧುನಿಕ ರೋಗಗಳನ್ನು ಬಿಗಡಾಯಿಸುತ್ತದೆ. ನಮ್ಮ ಆಹಾರ ಮತ್ತು ಜೀವನಶೈಲಿಗಳನ್ನು ಬದಲಿಸಿಕೊಳ್ಳುವ ಮೂಲಕ ನಮ್ಮ ದೇಹದ ಉಪಾಪಚಯವನ್ನು ಸುಸ್ಥಿತಿಯಲ್ಲಿಟ್ಟರೆ ಕೊರೋನವನ್ನು ಸುಲಭವಾಗಿ ಸೋಲಿಸಬಹುದು.

ಆರೋಗ್ಯಕರ ಆಹಾರ ತಿನ್ನಿ – ನಿಯತ ವ್ಯಾಯಾಮ ಮಾಡಿ – ಬೇಕಷ್ಟು ನಿದ್ದೆ ಮಾಡಿ!

  • ಕೊರೋನ ರೋಗದಿಂದ ಬೇಗನೆ ಚೇತರಿಸಿಕೊಳ್ಳಲು ಒಳ್ಳೆಯ ಆಹಾರ

ದಿನಕ್ಕೆ 2-3 ಮೊಟ್ಟೆ (ಬೇಯಿಸಿ/ಆಮ್ಲೆಟ್/ಪಲ್ಯ/ಬುರ್ಜಿ), ಬಿಸಿಯಾದ, ಸೌಮ್ಯ ಮಸಾಲೆಗಳುಳ್ಳ ಕೋಳಿ ಸೂಪ್ ಅಥವಾ ಬೇಳೆ ಸೂಪ್, ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಮತ್ತು ವಾಲ್ನಟ್, ಜೊತೆಗೆ ಮೀನು, ಮಾಂಸ ಮತ್ತು ಯಥೇಷ್ಟವಾಗಿ ತರಕಾರಿಗಳು.ಇವಿಷ್ಟನ್ಣೇ ಸೇವಿಸುವುದರಿಂದ ಕೊರೋನ ರೋಗದಿಂದ ಬೇಗನೇ ಚೇತರಿಸಿಕೊಳ್ಳಬಹುದು, ತೀವ್ರ ಸಮಸ್ಯೆಗಳನ್ನು ತಡೆಯಲೂಬಹುದು.

  • ಕಡ್ಡಾಯವಾಗಿ ತ್ಯಜಿಸಿ

ಹಣ್ಣುಗಳು (ತಾಜಾ ಅಥವಾ ಒಣಗಿದ್ದು), ಸಕ್ಕರೆ, ಎಲ್ಲಾ ಸಿಹಿ ತಿನಿಸುಗಳು, ಜೇನು ಮತ್ತು ಬೆಲ್ಲ. ಹಾಲಿನ ಉತ್ಪನ್ನಗಳನ್ನು ಮಿತಿಗೊಳಿಸಿ. ಸಿದ್ಧ ತಿನಿಸುಗಳು, ಬೇಕರಿ ಉತ್ಪನ್ನಗಳು, ಸಂಸ್ಕರಿತ ತಿನಿಸುಗಳನ್ನು ಸಂಪೂರ್ಣವಾಗಿ ತ್ಯಜಿಸಿ.

ಸೈಟೋಕೈನ್ ಬಿರುದಾಳಿಯನ್ನು ತಡೆಯುವುದಕ್ಕೆ ಸಕ್ಕರೆ ಮತ್ತು ಸಂಸ್ಕರಿತ ಆಹಾರವನ್ನು ಮಿತಿಗೊಳಿಸುವುದೇ ಅತ್ಯುತ್ತಮ ಉಪಾಯವಾಗಿದೆ. ಹಣ್ಣುಗಳಲ್ಲಿರುವ ಫ್ರಕ್ಟೋಸ್ ಸಕ್ಕರೆಯು ಉತ್ಕರ್ಷಣದ ಒತ್ತಡಗಳನ್ನು ಹೆಚ್ಚಿಸಿ ಉರಿಯೂತವನ್ನು ಹೆಚ್ಚಿಸುವುದರಿಂದ ಹಣ್ಣುಗಳಿಂದ ಅದೇನೇ ಲಾಭಗಳಿದ್ದರೂ ನಷ್ಟವೇ ಹೆಚ್ಚಾಗುತ್ತದೆ!

  • ಆಹಾರಕ್ರಮದ ಉದಾಹರಣೆ

ಬೆಳಗ್ಗಿನ ಉಪಾಹಾರ :8 ಗಂಟೆಗೆ: 2-3 ಬೇಯಿಸಿದ ಮೊಟ್ಟೆ/ 2-3 ಇಡ್ಲಿ ಅಥವಾ 1-2 ರಾಗಿ ದೋಸೆ, ಜೊತೆಗೆ ತೆಂಗಿನಕಾಯಿ ಚಟ್ನಿ ಅಥವಾ ಬೇಳೆ ಸಾರು, ಜೊತೆಗೆ ಕಾಫಿ/ಚಹಾ (ಹಾಲುು ಬೇಡ ಯಾ ಅತ್ಯಲ್ಪ, ಸಕ್ಕರೆ/ಬೆಲ್ಲ ಬೇಡ)

ಪೂ 11ಗಂಟೆ: ಬಿಸಿನೀರಲ್ಲಿ ಉಪ್ಪು ಬೆರೆಸಿ ನಿಂಬೆ ಹಣ್ಣಿನ ರಸ, ಜೊತೆಗೆ ಗೋಡಂಬಿ, ಬಾದಾಮಿ, ವಾಲ್ನಟ್ ಅಥವಾ ಪಿಸ್ತಾ (ನೆಲಕಡಲೆ ಬೇಡ)

ಅಪರಾಹ್ನ ಊಟ : 2 ಗಂಟೆ: ಕುಚ್ಚಲಕ್ಕಿ ಅನ್ನ (ಒಂದು ಕಪ್), ಯಥೇಷ್ಟ ತರಕಾರಿಗಳು, ಬೇಳೆ ಅಥವಾ ತೆಂಗಿನಕಾಯಿ ಬೆರೆಸಿದ ಪದಾರ್ಥಗಳು/ ಕೋಳಿ ಅಥವಾ ಮೀನಿನ ಪದಾರ್ಥ; ಹಬೆಯಲ್ಲಿ ಅಥವಾ ನವಿರಾಗಿ ಕಾಯಿಸಿದ ತರಕಾರಿ ಖಾದ್ಯ (ಬಟಾಟೆ, ಬೀಟ್‌ರೂಟ್, ಕ್ಯಾರೆಟ್, ಸುವರ್ಣಗೆಡ್ಡೆ, ಸಿಹಿಕುಂಬಳಕಾಯಿ ಬೇಡ)

ಸಂಜೆ 5 ಗಂಟೆ: ಬೀಜಗಳು, ಜೊತೆಗೆ ಕಾಫಿ/ಚಹಾ (ಕಪ್ಪು/ಹಸಿರು), ಅದರಲ್ಲಿ ನಿಂಬೆ/ಶುಂಠಿ ಬೆರೆಸಬಹುದು, ಸಕ್ಕರೆ ಅಥವಾ ಬೆಲ್ಲ ಕೂಡದು

ರಾತ್ರಿಯ ಊಟ : 8 ಗಂಟೆ: ಬಿಸಿಯಾದ ಕೋಳಿ ಅಥವಾ ತರಕಾರಿ ಸೂಪ್ (ಜೋಳದ ಪುಡಿ ಬೆರೆಸಬಾರದು); ಸ್ವಲ್ಪ ಅನ್ನ, ಸಾರು ಅಥವಾ ಚಪಾತಿ ಪಲ್ಯ/ ಕೋಳಿ, ಮೀನು, ಜೊತೆಗೆ ತರಕಾರಿಗಳು

ತಂಪಾಗಿಸದ ನೀರನ್ನು ಒಂದೆರಡು ಗಂಟೆಗೊಮ್ಮೆಯಂತೆ ದಿನಕ್ಕೆ ಒಟ್ಟು ಮೂರು ಲೀಟರ್ ಆದರೂ ಕುಡಿಯಿರಿ.
ಮಾಂಸವನ್ನು ಎರಡು ದಿನಕ್ಕೊಮ್ಮೆಯಾದರೂ ತಿನ್ನಬಹುದು!
ಅಡುಗೆಗೆ ತೆಂಗಿನೆಣ್ಣೆ ಅಥವಾ ತುಪ್ಪವನ್ನು ಬಳಸಿ.
ಈ ಆಹಾರಕ್ರಮವನ್ನು 4-6 ವಾರಗಳವರೆಗಾದರೂ, ಕೊರೋನ ರೋಗವಿರುವಾಗ ಮತ್ತು ಚೇತರಿಸಿಕೊಂಡ ಬಳಿಕವೂ, ಸೇವಿಸಿ. ಸಕ್ಕರೆ ಕಾಯಿಲೆ, ಬೊಜ್ಜು ಮತ್ತಿತರ ಸಮಸ್ಯೆಗಳುಳ್ಳವರು ಇನ್ನಷ್ಟು ಕಠಿಣವಾಗಿ ಆಹಾರಕ್ರಮವನ್ನು ಪಾಲಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version