ದಿನದ ಸುದ್ದಿ

ರಾಯಚೂರು | ಅಲೆಮಾರಿ ಕುಟುಂಬಗಳಿಗೆ ದಿನಸಿ‌ ಕಿಟ್ ವಿತರಣೆ

Published

on

ಸುದ್ದಿದಿನ,ರಾಯಚೂರು : ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ ಪಾಮನಕಲ್ಲೂರ ಕ್ರಾಸ್ ಹಾಗೂ ಕೋಠಾ ಕ್ರಾಸ್ ಹತ್ತಿರವಿರುವ ಅಲೆಮಾರಿ ಕುಟುಂಬಗಳಿಗೂ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಸೋಮವಾರ ತುಮಕೂರಿನ ಅಮೃತಹಸ್ತ ತಂಡ ಮನವಿಗೆ ಪೊರ್ತು ಚಾರಿಟೇಬಲ್ ಟ್ರಸ್ಟ್ ನೀಡಿದೆ ಎಂದು ಸಮಾಜ ಸೇವಕ ಶಿವರಾಜ್ ಮೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

21 ಅಲೆಮಾರಿ ಕುಟುಂಬಗಳಿಗೆ ಸುಮಾರು 15 ಸಾವಿರ ರೂಪಾಯಿಯ ದಿನಸಿ ಕಿಟ್ ಗಳನ್ನು ತಲುಪಿಸ‌ಲು ವಿನಾಯಕ ವಿದ್ಯಾಸಂಸ್ಥೆ ಹಟ್ಟಿಯ ನರಸಪ್ಪ ಮತ್ತು ರಡ್ಡೆಪ್ಪ ಜೆಸ್ಕಾಂ ಅವರು ಈ ಕುಟುಂಬಗಳಿಗೆ ಹೆಚ್ಚಿನ ಅವಶ್ಯ ವಸ್ತುಗಳನ್ನು ನೀಡಲು ಸಹಕಾರ ನೀಡಿದ್ದಾರೆ‌ ಎಂದಿದ್ದಾರೆ.

ಈ ಸಂದರ್ಭದಲ್ಲಿ ಶಿವರಾಜ್ ಮೋತಿ, ಶೇಖರ್,ರವಿಕುಮಾರ್ ಮತ್ತಿತ್ತರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version