ಲೈಫ್ ಸ್ಟೈಲ್
ಪಾದದ ಆರೈಕೆ ಹೇಗೆ !
ಚೆಂದದ ಮುಖ, ನುಣುಪು ತ್ವಚೆ, ನೀಳವಾದ ಬೆರಳು ಗಳು, ನೀಟಾಗಿ ಕತ್ತರಿಸಿ ಶೇಪ್ ಕೊಟ್ಟ ಉಗುರುಗಳು, ಅದಕ್ಕೆ ತಕ್ಕಂತಹ ಉಗುರು ಬಣ್ಣ. ಹೆಣ್ಣು ಸುಂದರಿಯಾಗಲು ಇಷ್ಟು ಸಾಕೆ?
ಸಾಲದು ಇದರ ಜೊತೆಗೆ ಅಂದದ ಪಾದ ಪಾದದ ಆರೈಕೆ. ಕಾಲಿನ ಉಗುರುಗಳ ಕಾಳಜಿಯೂ ಮುಖ್ಯ. ಇದಕ್ಕಾಗಿಯೇ ‘ಪೆಡಿಕ್ಯೂರ್’ (pedicure in kannada) ಕಾನ್ಸೆಪ್ಟ್ ಸೌಂದರ್ಯ ಜಗತ್ತಿನಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡಿದೆ. ಕೈಗಳ, ಉಗುರುಗಳ ಆರೈಕೆಯೂ ಮುಖ್ಯ ಎನ್ನುವುದು ಸೌಂದರ್ಯ ಪ್ರಿಯರ ಅಭಿಮತ.
ಪಾದದ ಆರೈಕೆ ಅಥವಾ ಪೆಡಿಕ್ಯೂರ್ ಎಂಬುದು ಎರಡು ಲ್ಯಾಟಿನ್ ಪದಗಳಿಂದ ಬಂದ ಪದ. ‘ಪೆಡಿ’ (pedi) ಎಂದರೆ ಪಾದ ಮತ್ತು ‘ಕ್ಯೂರ್’ (cure) ಎಂದರೆ ಕೇಋ ಅಥವಾ ಕಾಳಜಿ. ಪೆಡಿಕ್ಯೂರ್‍ನಿಂದ ಕಾಳು, ಪಾದ ಮತ್ತು ಉಗುರುಗಳ ಅಮದದದ ಜತೆಗೆ ಇವುಗಳ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎನ್ನುತ್ತಾರೆ ಸೌಂದರ್ಯ ತಜ್ಞೆಯರು. ಪಾದದ ಆರೈಕೆ ಮಾಡುವಾಗ ಪಾರ್ಲರ್ಗಳಲ್ಲಿ ಸಾಮಾನ್ಯವಾಗಿ ಉಗುರು, ಪಾದದ ತಳಭಾಗದಲ್ಲಿರಿವ ನಿರ್ಜೀವ ಜೀವಕೋಶಗಳನ್ನು ತೆಗೆದು ಹಾಕಲಾಗುತ್ತದೆ. ಪಾದವನ್ನು ಬಿರುಕು, ಒರಟುತನದಿಂದ ಕಾಪಾಡಿ ಇದರ ಸೌಂದರ್ಯ ಕಾಪಾಡಲಾಗುತ್ತದೆ.
ಮೊಣಕಾಳಿನಿಂದ ಕೆಳಗಿನ ಭಾಗವನ್ನು ಮಸಾಜ್ ಮಾಡಿ ವ್ಯಾಕ್ಸಿಂಗ್ ಮೂಲಕ ನಯನಗೊಳಿಸಲಾಗುತ್ತದೆ. ಮಾಯಿಶ್ಚರ್ ಕ್ರೀಂ ಬಳಸಿ ತ್ವಚೆಯನ್ನು ಹೊಳಪುಗೊಳಿಸುವ ವಿದಾನವೂ ಪೆಡಿಕ್ಯೂರ್‍ನ ವಿಧಾನ. ಪಾದಗಳ ಮಸಾಜ್‍ನಿಂದ ಕಾಲು, ಪಾದಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ.
ಸೌದರ್ಯ ಜಗತ್ತಿನಲ್ಲಿ ಕೈಗಳ ಮತ್ತು ಕಲುಗಳ ಉಗುರುಗಳ ಆರೈಕೆ ಇಂದು ನಿನ್ನೆಯದಲ್ಲಿ. ಇದಕ್ಕೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ದಕ್ಷಿಣ ಬ್ಯಾಬಿಲೋನೊಯಾದಲ್ಲಿ ಮೊತ್ತ ಮೊದಲಿಗೆ ಮಹಿಳೆಯರು ಉಗುರುಗಳಿಗೆ ಶೇಪ್ ನೀಡಲು ಆರಂಭಿಸಿದರು. ನಂತರ ನೈಲ್ ಪಾಲಿಶ್ ಬಳಕೆ ಆರಂಭವಾಯಿತು. ಬಳಿಕ ಚೀನಾದಲ್ಲಿ ಉಗುರುಗಳಿಗೆ ಬಣ್ಣ ಹಚ್ಚುವುದನ್ನು ಆರಂಭಿಸಿದರು. ಪ್ರಾಚೀನ ಈಜಿಪ್ಟಿಯನ್ನರು ಸಹ ಪಾದಗಳ ಆರೈಕೆಗೆ ವಿಶೇಷ ಗಮನ ನೀಡುತ್ತಿದ್ದರು. ಉಗುರುಗಳನ್ನು ನೀಟಾಗಿ ಕತ್ತರಿಸಿ, ಶೇಪ್ ಕೊಟ್ಟು ಆಕರ್ಷಕ ಬಣ್ಣ ಹಚ್ಚಿಕೊಂಡು ಯುದ್ಧ ತಾಲೀಮಿಗೆ ಸಿದ್ಧರಾಗುತಿದ್ದರು ಎನ್ನುತ್ತದೆ ಇತಿಹಾಸ.
ಇದೀಗ ಪೆಡಿಕ್ಯೂರ್ ಎಂಬುದು ಸೌಂದರ್ಯ ಪ್ರಪಂಚದಲ್ಲಿ ಖಾಯಂ ಆಗಿ ನೆಲೆ ನಿಂತಿದೆ. ಪಾದದ ಆರೈಕೆಯನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಚಳಿಗಲ್ಲಿಪಾದ ಅದರಲ್ಲೂ ಹಿಮ್ಮಡಿ ಬಿರುಕು ಬಿಟ್ಟಾಗ ಧೂಳು, ಕೊಳೆ ತುಂಬಿ ನೋವು ಉಂಟಾಗುತ್ತದೆ. ಇದನ್ನು ತಡೆಯಲು ಮನೆಯಲ್ಲಿ ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅರ್ಧ ಗಂಟೆ ಕಾಲ ನೆನಸಿಡಬೇಕು. ನಂತರ ತೆಳೂವಾದ ಹತ್ತಿ ಬಟ್ಟೆ ಅಥವಾ ಹ್ತಿ ಉಂಡೆಯಿಂದ, ಹಿಮ್ಮಡಿಯನ್ನು ಮೃದುವಾಗಿ ಒರೆಸಿಕೊಂಡರೆ. ಸ್ವಚ್ಛವಾಗುತ್ತದೆ. ನಂತರ ಕ್ರೀಂ ಅಥವಾ ವ್ಯಾಸಲೀನ್, ಬಯೋಲೀನ್ ಯಾವುದಾದರೂ ಹಚ್ಚಿಕೊಡರೆ ಪರಿಹಾರವಾಗುತ್ತದೆ.
ಪಾದವನ್ನು ಬೆಚ್ಚನೆಯ ನೀರಿನಲ್ಲಿ ನೆನೆಸಿ ತೆಗೆದು ಒರೆಸಿದ ನಂತರ ಸತ್ತ ಚರ್ಮವನ್ನು ತೆಗೆಯುವ ಸ್ಕ್ರಬ್ ಹಚ್ಚಿ ಚೆನ್ನಗಿ ಉಜ್ಜಿಕೊಳ್ಳಬೇಕು. ಹಿಮ್ಮಡಿ ಹಾಗೂ ಕಾಳಿನ ಕೆಳಗಿನ ಗಟ್ಟಿ ಪ್ರದೇಶವನ್ನು ನಿಯತವಾಗಿ ಉಜ್ಜಿಕೊಳ್ಳುತ್ತಿದ್ದರೆ ಹಿಮ್ಮಡಿ ಬಿರುಕು ಮೂಡುವುದಿಲ್ಲ. ಬಿರುಕು ತಡೆಯುವ ಅನೇಕ ಕ್ರೀಂಗಳು ಲಭ್ಯ. ಇದರ ಬಳಕೆ ಪಾದೋಪಚಾರಕ್ಕೆ. ಸೂಕ್ತ ಎನ್ನುತ್ತಾರೆ. ಬ್ಯೂಟಿಷಿಯನ್ಸ್.
ಪಾದಗಳಿಗಾಗಿಯೇ ಸಿಗುವ ಕ್ರೀಂ ಹಚ್ಚುತ್ತಿದ್ದರೆ. ಹಿಮ್ಮಡಿ ಬಿರುಕು ಮೂಡುವುದೂ ಇಲ್ಲ. ನಂತರ ಪಾದವನ್ನು ಲೋಷನ್ ಬಳಸಿ ಮಸಾಜ್ ಮಾಡಿಕೊಳ್ಳಬೇಕು. ಲೋಷನ್ ಇಲ್ಲದಿದ್ದರೆ ಮಾಯಿಶ್ಚರೈಸರ್ ಸಹ ಬಳಸಬಹುದು.ಹೆಬ್ಬೆರಳಿನಿಂದ ಹಿಮ್ಮಡಿಯವರೆಗೂ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಪದ ಅಂದವಾಗಿ ಕಾಣುತ್ತದೆ. ಪದದಲ್ಲಿ ಸತ್ತ ಚರ್ಮಕೋಶಗಳನ್ನು ‘ಫ್ಯೂಮಿಕ್ ಸ್ಟೋನ್’ ಬಳಸಿ ತೆಗೆದುಹಾಕಬಹುದು. ಇದನ್ನು ಪಾರ್ಲರ್‍ಗಳಲ್ಲಿ ಬಳಸುತ್ತಾರೆ.
ಫಾನ್ಸಿಸ್ಟೋರ್ಗಳಲ್ಲೂ ಇದು ಸಿಗುತ್ತದೆ.
ಚಳಿಗಾಲದಲ್ಲಿ ಆದಷ್ಟೂ ಶೂ ಮತ್ತು ಸಾಕ್ಸ್‍ಗಳ ಬಳಕೆ ಒಳ್ಳೆಯದು. ಒಂದೇ ಸಾಕ್ಸ್ ಅನ್ನು ದಿನಾ ಬಳಸಬೇಡಿ. ಪಾದದ ಪೌಡರ್ ಬಳಕೆಯೂ ಒಳ್ಳೆಯದೇ. ಹೈಹೀಲ್ಡ್, ಬಿಗಿಯಾದ, ಚಪ್ಪಲಿ ಬಳಕೆ ಬೇಡ. ಗಾಳಿಯಾಡುವ ಅಥಾವಾ ಅರ್ಧ ತೆರೆದ ಶೂ, ಸಾಫ್ಟ್ ಆಗಿರುವ ಚಪ್ಪಲಿ ಬಳಕೆಂಯಿಂದ ಪಾದವನ್ನು ಕಾಪಾಡಿಕೊಳ್ಳಬಹುದು.
ಉಗುರು ಬಣ್ಣ ಬಳಸುವಾಗ ಕಳಪೆ ಗುಣಮಟ್ಟದ ನೈಲ್‍ಪಾಲಿರ್ಶ ಬಳಸದೇ ಉತ್ತಮ ಗುಣಮಟ್ಟದ ನೈಲ್ ಪಾಲಿಶ್ ಬಳಸಿದರೆ ಒಳ್ಳೆಯದು. ಬಣ್ಣಗಳ ಆಯ್ಕೆಯೂ ಕೂಡ ಬಹಳ ಮುಖ್ಯ. ಡ್ರೆಸ್, ಚಪ್ಪಲಿಗಳಿಗೆ ಮ್ಯಾಚ್ ಆಗುವಂತಹ ಉಗುರು ಬಣ್ಣ ಸಖತ್ ಲುಕ್ ಕೊಡುತ್ತದೆ.
ಪಾದದ ಕಾಳಜಿ, ರಕ್ಷಣೆ,ಕಾಳುಗಳ ಉಗುರುಗಳಿಗೆ ಶೇಪ್ ಕೊಟ್ಟು ನೀಟಾಗಿ ಇಟ್ಟುಕೊಳ್ಳುವುದು ಕೂಡ ಸೌಂದರ್ಯದ ಒಂದು ಭಾಗ.
English summary: foot care tips in Kannada. Most important thing is pedicure. Here we point out useful tips about pedicure in Kannada.