ದಿನದ ಸುದ್ದಿ
2023ರ ಪದ್ಮ ಪ್ರಶಸ್ತಿಗಳಿಗೆ ಹೆಸರು ಶಿಫಾರಸ್ಸು ಮಾಡಲು ನೋಂದಣಿ ಆರಂಭ
ಸುದ್ದಿದಿನ ಡೆಸ್ಕ್ : 2023ರ ಪದ್ಮ ಪ್ರಶಸ್ತಿಗಳಿಗೆ ಹೆಸರು ಶಿಫಾರಸ್ಸು ಮಾಡಲು ಮತ್ತು ನೋಂದಾಯಿಸಲು ಈ ವರ್ಷದ ಸೆಪ್ಟೆಂಬರ್15 ರ ವರೆಗೆ ಅವಕಾಶ ನೀಡಲಾಗಿದೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪುರಸ್ಕಾರಗಳಿಗೆ ಹೆಸರು ಶಿಫಾರಸ್ಸು ಮತ್ತು ನೋಂದಣಿಯನ್ನು ಮೇ 1 ರಿಂದ ಆರಂಭಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಸೇವೆ, ನಾಗರಿಕ ಸೇವೆ, ವಿಜ್ಞಾನ, ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ವ್ಯಾಪಾರ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಅನನ್ಯ ಸಾಧನೆ ಮಾಡಿದವರ ಹೆಸರು ಶಿಫಾರಸ್ಸು ಮಾಡಬಹುದಾಗಿದೆ. ಪದ್ಮ ಪ್ರಶಸ್ತಿಗಳನ್ನು ಜನಸಾಮಾನ್ಯರ ಪುರಸ್ಕಾರವನ್ನಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243