ದಿನದ ಸುದ್ದಿ
ಮೀನುಮರಿ ಖರೀದಿಗೆ ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ ಡೆಸ್ಕ್ : ಜಿಲ್ಲಾ ಮೀನುಗಾರಿಕೆ ಇಲಾಖೆಯು ವಿವೀಧ ಯೋಜನೆಗಳಡಿ ಇಲಾಖೆ ಕೆರೆಗಳು, ಗ್ರಾ.ಪಂ. ಕೆರೆಗಳು, ಜಲಾಶಯಗಳಿಗೆ ಮತ್ತು ನದಿ ಭಾಗಗಳಿಗೆ 70-80 ಎಂ.ಎಂ. ಗಾತ್ರದ ಬಲಿತ ಬಿತ್ತನೆ ಮೀನುಮರಿಗಳನ್ನು ಸರ್ಕಾರ ನಿಗಧಿಪಡಿಸಿರುವ ದರಗಳಲ್ಲಿ ರಾಜ್ಯದ ನೊಂದಾಯಿತ ಖಾಸಗಿ ಮೀನು ಕೃಷಿಕರಿಂದ ಖರೀದಿ ಮಾಡಿ ದಾಸ್ತಾನು ಮಾಡಲು ಮೀನುಮರಿ ಪಾಲನೆದಾರರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ದಿ: 30/06/2022 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243