ರಾಜಕೀಯ
ಬ್ರೇಕಿಂಗ್: ಬಿಜೆಪಿ ಮಾಜಿ ಶಾಸಕನಿಗೆ ಕೊಲೆ ಬೆದರಿಕೆ
ಸುದ್ದಿದಿನ, ತುಮಕೂರು: ಬಿಜಿಪಿ ಪಕ್ಷದ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ಪೇಸ್ ಬುಕ್ ನಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಪೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಹಗಲುಕುಂಟೆ ಪ್ರವೀಣ್ ಸೌಮ್ಯ ಎಂಬಾತನನ್ನು ಬಂಧಿಸಿದ ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗಸ್ಟ್ 25 ರಂದು ಮಾಜಿ ಶಾಸಕ ಗೌರಿಶಂಕರ್ ಬೆಂಬಲಿಗನ ಪೋಸ್ಟ್ ವೊಂದಕ್ಕೆ ಕಮೆಂಟ್ ಮಾಡಿದ್ದ ಪ್ರವೀಣ್ ಸೌಮ್ಯ ಬಿಜಿಪಿ ಪಕ್ಷದ ಮಾಜಿ ಸುರೇಶ್ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಕುರಿತು ಬಿಜೆಪಿ ಮುಖಂಡರು ಎಸ್ಪಿಗೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಪ್ರವೀಣ್ ಸೌಮ್ಯ ನನ್ನು ಬಂಧಿಸಿದ ಪೊಲೀಸರು ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನಂತರ ಜಾಮೀನಿ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಸಭೆ ಚುನಾವಣೆ : ಟಿಕೆಟ್ ಗಾಗಿ ಗದ್ದಲ ಮಾಡ್ಕೊಬೇಡಿ : ಡಿಕೆಶಿ ಸೂಚನೆ
ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಪ್ರಕರಣ ಹೆಚ್ಚಳ
ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಪ್ರಕರಣ ಹೆಚ್ಚಳವಾಗಿವೆ. ಸೈಬರ್ ಕ್ರೈಂನಲ್ಲಿ ಕಠಿಣ ಕಾನೂನುಗಳು ಇದ್ದರೂ ಲೆಕ್ಕಿಸದ ಕೆಲವರು ಬೆದರಿಕೆ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವ ಕಾರ್ಯ ಮಾಡುತ್ತಿದ್ದಾರೆ. ಪೊಲೀಸರು ಎಚ್ಚೆತ್ತುಕೊಂಡು ಇಂತಹ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಕೊಳ್ಳಬೇಕಿದೆ.