ರಾಜಕೀಯ
ಲೂಟಿ ಮಾಡುವ ಏಕೈಕ ಉದ್ದೇಶಕ್ಕೆ ಬಿಜೆಪಿಗರು ಅಧಿಕಾರ ಬಯಸುತ್ತಾರೆ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಡೆಸ್ಕ್ : ನಮ್ಮ ಪಕ್ಷದ ಶಾಸಕರು ಅಭಿಮಾನದಿಂದ ನಾನು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಅಷ್ಟು ಸಮಂಜಸವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಅಧಿಕಾರ ಸಿಕ್ಕಾಗ ಜನಪರ, ಭ್ರಷ್ಟಾಚಾರ ರಹಿತ, ಸುಭದ್ರ ಸರ್ಕಾರ ನೀಡಲಿಲ್ಲ. ಮೂವರು ಮುಖ್ಯಮಂತ್ರಿ ಬದಲಾದರು, ಆರು ಮಂತ್ರಿಗಳು ಜೈಲಿಗೆ ಹೋಗಿದ್ದರು. ಇವರಿಗೆ ಯಾವ ಕಾರಣಕ್ಕೆ ಮತ್ತೆ ಅಧಿಕಾರ ನೀಡಬೇಕು? ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಬಿಜೆಪಿಯವರು ಲೂಟಿ ಮಾಡುವ ಏಕೈಕ ಉದ್ದೇಶದಿಂದ ಅಧಿಕಾರ ಬಯಸುತ್ತಾರೆ.
ರಾಜ್ಯದಲ್ಲಿ ಜನತೆ ಅವರಿಗೆ ಮತ್ತೆ ಅಧಿಕಾರ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243