ದಿನದ ಸುದ್ದಿ
ಮಲೆಗಾಂವ್ ಸ್ಪೋಟ ಸಮರ್ಥನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ವಿರುದ್ಧ ದೂರು ದಾಖಲು
ಸುದ್ದಿದಿನ, ಉಡುಪಿ : ಮಲೆಗಾಂವ್ ಬಾಂಬ್ ಸ್ಪೋಟವನ್ನು ಸಮರ್ಥಿಸಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈಯವರು ಸಾಮಾಜಿಕ ತಾಣದಲ್ಲಿ ಮಾಲೆಗಾಂವ್ ಬಾಂಬ್ ಸ್ಪೋಟವನ್ನು ಸಮರ್ಥಿಸಿ ಬರೆದುಕೊಂಡಿದ್ದರು. ಅವರ ಈ ಬರಹವು ವಿವಾದಕ್ಕೀಡಾಗುತ್ತಿದ್ದಂತೆಯೇ ತನ್ನ ಪೋಸ್ಟ್ ಅನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದರು. ಆದರೆ ಈ ಬರಹದ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಅವರು ಕೆಲದಿನಗಳ ಹಿಂದೆ ಮಲೆಗಾಂವ್ ಬಾಂಬ್ ಸ್ಪೋಟವನ್ನು ಸಮರ್ಥಿಸಿದಲ್ಲದೆ, ಈ ಸ್ಪೋಟದ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ ಅವರದ್ದು ಹೋರಾಟ ಎಂದು ಬರೆದುಕೊಂಡಿದ್ದರು. ಈ ಬರಹ ವೈರಲ್ ಆಗಿ ವಿವಾದಕ್ಕೀಡಾಗುತ್ತಲೇ ತಮ್ಮ ಫೇಸ್ ಬುಕ್ ಖಾತೆಯಿಂದ ಈ ಫೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ಆದರೆ ಈ ಬರಹದ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ಹನೀಫ್ ಅವರು ದೂರು ನೀಡಿದ್ದಾರೆ. ಇವರ ದೂರಿನನ್ವಯ ಐಪಿಸಿ ಸೆಕ್ಷನ್ 153(A), 295(A), 505(2) ಪ್ರಕಾರ ಪ್ರಕರಣ ದಾಖಲಾಗಿದೆ.
ಅನುಪಮಾ ಶೆಣೈ ಅವರ ಫೇಸ್ ಬುಕ್ ಪೇಜ್ ಪೋಸ್ಟ್ ಗಳ ಲಿಂಕ್ ಗಳು
https://m.facebook.com/story.php?story_fbid=349915712190185&id=100015152763494
https://m.facebook.com/story.php?story_fbid=349533675561722&id=100015152763494
ಸುದ್ದಿದಿನ.ಕಾಂ|ವಾಟ್ಸಾಪ್|9980346243