ದಿನದ ಸುದ್ದಿ

ಬ್ರೇಕಿಂಗ್: ಮಾದಕ ದ್ರವ್ಯ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಬಂಧನ

Published

on

Pc: The Hindu

ಸುದ್ದಿದಿನ ಡೆಸ್ಕ್: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್ ಸಿಐಡಿ (ಕ್ರೈಮ್) ಪೊಲೀಸರು ಬಂಧಿಸಿದ್ದಾರೆ. 1996ರಲ್ಲಿ ಬನಸ್ಕಾಂತ ಠಾಣೆ ಪೊಲೀಸರು ಮಾದಕ ದ್ರವ್ಯದ ಪ್ರಕರಣ ದಾಖಲಿಸಿದ್ದರು. ಈ ವೇಳೆ ಅವರು ಪೊಲೀಸ್ ಅಧೀಕ್ಷಕರಾಗಿದ್ದರು.

ಈ ವರ್ಷದ ಜನವರಿಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶದಂತೆ ಸಿಐಡಿ ತನಿಖೆ ನಡೆಸುತ್ತಿದೆ. ಭಟ್ ಅವರನ್ನು ಸೇರಿ ಅನೇಕ ಪೊಲೀಸ್ ಅಧಿಕಾರಿಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ. ಭಟ್ ಮತ್ತು ಇತರರ ವಿಚಾರಣೆ ಕುರಿತಂತೆ ಹೇಳಿಕೆ ನೀಡಿದ್ದು ಬಿಟ್ಟರೆ ಸಿಐಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜಸ್ಥಾನದ ವಕೀಲರೊಬ್ಬರು 1.5 ಕೆಜಿ ಮಾದಕದ್ರವ್ಯ ಹೊಂದಿದ್ದಾರೆ ಎಂಬ ಆರೋಪದಡಿ 1996ರಲ್ಲಿ ಬನಸ್ಕಾಂತದ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕಣರದ ತನಿಖೆ ನಡೆಸುವಂತೆ ಹೈಕೋರ್ಟ್ ಈ ವರ್ಷ ಜನವರಿಯಲ್ಲಿ ಸಿಐಡಿ (ಕ್ರೈಮ್)ಗೆ ತಿಳಿಸಿತ್ತು. ಈ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ರಾಮನ್ಲಾಲ್ ಜೈನ್ ಸಹ ಸೇರಿದ್ದಾರೆ ಎಂಬ ಅರೋಪವಿದೆ.

1996ರಲ್ಲಿ ಪಾಲನ್ಪುರದ ಲಜ್ವಂತಿ ಸಿಟಿಯ ಹೊಟೇಲ್ ಕೊಠಡಿ ತಂಗಿದ್ದ ವಕೀಲ ಸುಮೇರ್ ಸಿಂಗ್ ರಾಜ್ಪುರೋಹಿತ್ ಅವರಿಂದ 1.5 ಕೆಜಿ ಮಾದಕದ್ರವ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ಆರೋಪಿಸಿದಡಿ ಪ್ರಕರಣ ದಾಖಲಾಗಿತ್ತು.

ಪಾಲಿನಲ್ಲಿರುವ ರಾಜಾಪುರೋಹಿತ್ ಅವರ ಮನೆಯಿಂದ ಕಳವು ಮಾಡಿರುವುದಾಗಿ ಆರೋಪಿಸಲಾಗಿದೆ. ಮಾದಕದ್ಯವ್ಯವನ್ನು ಬನಸ್ಕಾಂತ ಪೊಲೀಸರು ಠಾಣೆಯಲ್ಲಿ ಇಟ್ಟುಕೊಂಡಿದ್ದರು ಎಂಬ ಆತೋಪವಿದೆ.

Leave a Reply

Your email address will not be published. Required fields are marked *

Trending

Exit mobile version