ದಿನದ ಸುದ್ದಿ
ಮಾಜಿ ಸಚಿವ ಟಿಬಿ ಜಯಚಂದ್ರಕಾರು ಅಪಘಾತ ; ಆಸ್ಪತ್ರೆಗೆ ದಾಖಲು
ಸುದ್ದಿದಿನ,ತುಮಕೂರು: ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ತಡರಾತ್ರಿ ಅಪಘಾತಕ್ಕೀಡಾಗಿದ್ದು, ಜಯಚಂದ್ರ ಅವರು ಗಾಯಗೊಂಡಿದ್ದಾರೆ.
ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಬಿ ಕ್ರಾಸ್ ಬಳಿ ಚಾಲಕ ನಿಯಂತ್ರಣ ತಪ್ಪಿದ ಫಾರ್ಚುನರ್ ಕಾರು ರಸ್ತೆ ಬದಿ ಪಲ್ಟಿಯಾಗಿದೆ. ಮಾಜಿ ಸಚಿವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕ ಮತ್ತು ಗನ್ ಮ್ಯಾನ್ ಕೂಡ ಅಪಘಾತದಿಂದ ಪಾರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243