ದಿನದ ಸುದ್ದಿ
ಬಿಗ್ ಬ್ರೇಕಿಂಗ್; ವಾಜಪೇಯಿ ಸ್ಥಿತಿ ಗಂಭೀರ
ಸುದ್ದಿದಿನ ಡೆಸ್ಕ್: ದೇಶ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಹೆಸರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭಿರವಾಗಿದ್ದು, ಜೀವ ರಕ್ಷಕಗಳನ್ನು ನೀಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದಾಖಲಾಗಿದ್ದರು. ಮೂತ್ರಪಿಂಡದ ಸೋಂಕು, ಎದೆ ನೋವಿನಿಂದ ಬಳಲುತ್ತಿರುವ ಮುತ್ಸದ್ಧಿ ವಾಜಪೇಯಿ ಜೂನ್ 11ರಂದು ಏಮ್ಸ್ ಗೆ ದಾಖಲಾಗಿದ್ದಾರೆ. 93 ವರ್ಷ ವಯಸ್ಸಿನ ಅಜಾತಶತ್ರು ವಾಜಪೇಯಿ ಮಧುಮೇಹವನ್ನು ಎದುರಿಸುತ್ತಿದ್ದಾರೆ.