ದಿನದ ಸುದ್ದಿ

ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಭಾರತಕ್ಕೆ ಪಲಾಯನ ಕುರಿತ ವರದಿ ನಿರಾಧಾರ : ಕೊಲಂಬೊದ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ

Published

on

ಸುದ್ದಿದಿನ ಡೆಸ್ಕ್ : ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಳ್ಳಿಹಾಕಿದೆ.

ಈ ಕುರಿತ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳು ನಿರಾಧಾರ. ಸತ್ಯಕ್ಕೆ ದೂರವಾದದು ಎಂದು ರಾಯಭಾರಿ ಕಚೇರಿ ಸ್ಪಷ್ಟಪಡಿಸಿ ಟ್ವೀಟ್ ಮಾಡಿದೆ.

ಭಾರತ, ತನ್ನ ಸೇನಾಪಡೆಗಳನ್ನು ಶ್ರೀಲಂಕಾಕ್ಕೆ ಕಳುಹಿಸುವ ಕುರಿತ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಊಹಾಪೋಹದ ವರದಿಗಳನ್ನೂ ಸಹ ರಾಯಭಾರಿ ಸ್ಪಷ್ಟವಾಗಿ ತಳ್ಳಿಹಾಕಿದೆ. ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತ ನಿನ್ನೆ ಹೇಳಿದೆ.

ಶ್ರೀಲಂಕಾದಲ್ಲಿನ ಬೆಳವಣಿಗೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, ಭಾರತ, ತನ್ನ ನೆರೆಹೊರೆ ನೀತಿಗೆ ಅನುಗುಣವಾಗಿ, ಈ ವರ್ಷವಷ್ಟೇ ಶ್ರೀಲಂಕಾದ ಜನರಿಗೆ 3.5 ಶತಕೋಟಿ ಡಾಲರ್‌ಗೂ ಹೆಚ್ಚು ಮೊತ್ತದ ಬೆಂಬಲವನ್ನು ನೀಡಿದೆ. ಶ್ರೀಲಂಕಾದ ಜನರ ಹಿತದೃಷ್ಟಿಯಿಂದ ಭಾರತ ಸದಾ ನೆರವಿಗೆ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version