ದಿನದ ಸುದ್ದಿ

ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಕುಟುಂಬಕ್ಕೆ ಪೊಲೀಸರಿಂದ ಕಿರುಕುಳ ಆರೋಪ

Published

on

ಸುದ್ದಿದಿನ, ಬೆಂಗಳೂರು : ವೈಟ್‌ಫೀಲ್ಡ್ ಪೊಲೀಸರಿಂದ ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ವ್ಯಕ್ತ ಪಡಿಸಿದ್ದಾರೆ.

ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಎಸಿಪಿ ಸುಧಾಮನಾಯಕ್ ಹಾಗೂ ಸಬ್ ಇನ್ಸಪೆಕ್ಟರ್ ಸೋಮಶೇಖರ್ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದು, ಈಗಾಗಲೇ ಎಸಿಪಿ ಮೂರನೆ ‌ವೈಕ್ತಿ ಇಂದ 5ಲಕ್ಷ ಹಾಗೂ ಸಬ್ ಇನ್ಸಪೆಕ್ಟರ್ ಗೆ 2ಲಕ್ಷ ನೀಡಿದರೂ ಮತ್ತೆ ದುಡ್ಡಿಗಾಗಿ ಕಿರುಕುಳ‌ ನೀಡುತ್ತಿರುವುದಾಗಿ ಲಕ್ಷ್ಮಿ ಜತ್ತಿ‌ ತಿಳಿಸಿದ್ದಾರೆ.

ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಲ್ಲಾ ವಿಚಾರವಾಗಿ ಜತ್ತಿ ಕುಟುಂಬಕ್ಕೆ ಮತ್ತು ವಿಲ್ಲಾ ಓನರ್ ಗಳ ನಡುವೆ ಜಗಳ ನಡೆಯುತ್ತಿತ್ತು, ಇದೇ ವಿಚಾರದ ಜಗಳ‌ ಕೂಡ‌ ಕೋರ್ಟ್ ಮೆಟ್ಟಿಲಲ್ಲೂ ಇದೆ. ವಿಲ್ಲಾ ಓನರ್ ಗಳು ದೂರು ನೀಡಿದರೆ ಎಫ ಐ ಆರ್ ದಾಖಲಿಸಿ ನಮ್ಮನ್ನ ತನಿಖೆ ಮಾಡ್ತಾರೆ. ನಾವು ದೂರು ನೀಡಿದರೆ ಎನ್ ಸಿ ಆರ್ ಹಾಕಿ ಕಳಿಸುತ್ತಾರೆ. ಆದರೂ ವಿಲ್ಲಾ ಓನರ್ ಗಳಿಂದಾಗುವ ಕಿರುಕುಳದ ಕುರಿತು ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕುತ್ತಿರುವ ಪೊಲೀಸರು, ಎಫ್ ಐ ಆರ್ ದಾಖಲಿಸಲು ದುಡ್ಡಿಗಾಗಿ ಎಸಿಪಿ ಹಣವನ್ನು ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ.

ತಮ್ಮ ವಿಲ್ಲಾ ಗಳಲ್ಲಿ ಒಂದು ವಿಲ್ಲಾ ನೀಡುವಂತೆ ಎಸಿಪಿ ಸುಧಾಮನಾಯಕನಿಂದ ಕಿರುಕುಳ ಕೊಟ್ಟಿದ್ದು, ಸದ್ಯ ಈ ಕುರಿತು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ ಅವರಿಗೆ ಮಾಹಿತಿಯನ್ನು ಲಕ್ಷ್ಮೀ ಜತ್ತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version