/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ನ.22 ಕ್ಕೆ ಸಭೆ ಮುಂದೂಡುವ ಅವಶ್ಯಕತೆ ಇಲ್ಲ : ಕಬ್ಬು ಬೆಳೆಗಾರರ ಅಹೋರಾತ್ರಿ ಪ್ರತಿಭಟನೆ

Published

on

ಸುದ್ದಿದಿನ, ಬೆಳಗಾವಿ : ಕಬ್ಬಿನ ದರ ನಿಗದಿಗಾಗಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಭೆ ನ. 22 ಕ್ಕೆ ಸಭೆ ಮುಂದುಡಿಕೆ ಹಿನ್ನೆಲೆ ಧರಣಿ ಕುಳಿತ ರೈತರಿಂದ ಅಹೋರಾತ್ರಿ ಧರಣಿ ಮುಂದುವರಿದಿದೆ.

ರಾತ್ರಿ ಜಿಲ್ಲಾಧಿಕಾರಿ ಕಚೇರಿ ಎದುರು ಊಟ ಮಾಡಿ ಅಲ್ಲೇ ಮಲಗಿದ ರೈತರು, ಭಾರತೀಯ ಕೃಷಿಕ ಸಮಾಜ ರೈತರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಧರಣಿಯಲ್ಲಿ ನ. 22ಕ್ಕೆ ಸಭೆ ಮುಂದುಡಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಮಾತು ಕೇಳದ ಕಾರ್ಖಾನೆಗಳ ಲೈಸೆನ್ಸ್ ರದ್ದು ಮಾಡಬೇಕು ಎಂದು ರೈತರು ಸಿಎಂ ನಡೆ ತೃಪ್ತಿ ತರದ ಹಿನ್ನೆಲೆ ಮುಂದುವರೆದ ಧರಣಿ ನಡೆಸುತ್ತಿದ್ದು, ಸಿಎಂ ತೀರ್ಮಾನ ತೆಗೆದುಕೊಳ್ಳುವವರೆಗು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.

ಇಂದು ಮತ್ತೆ ಚರ್ಚೆ ನಡೆಸಲಿರುವ ಎಲ್ಲಾ ರೈತ ಸಂಘಟನೆಗಳ ಮುಖಂಡರುಗಳು ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆನಡೆಸಲಿದ್ದು, ಇಂದು ಬೆಳಗಾವಿಗೆ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಬರುವ ಸಾದ್ಯತೆ ಇದೆ.

ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮತ್ತು ಬಾಕಿ ಬಿಲ್ ಗಾಗಿ ಆಗ್ರಹಿಸಿ ಧರಣಿಕೂತಿರುವ ರೈತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ
ರಾಜ್ಯ ರೈತ ಸಂಘ ರೈತರಿಂದ ಮತ್ತೆ ಪ್ರತಿಭಟನೆ ನಡೆಯುತ್ತಲೇ ಇದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಮುಖಂಡ ಅಶೋಕಯಮಕನಮರಡಿ ಅವರು ಪೊಲೀಸರಿಂದ ಹಲ್ಲೆಗೊಳಗಾಗಿದ್ದಾರೆ ಇವರನ್ನು
ಪ್ರತಿಭಟೆನೆಗೂ ಮುನ್ನ ಭೇಟಿ‌ ಮಾಡಲಿದ್ದಾರೆ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಅವರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version