ದಿನದ ಸುದ್ದಿ

ವಾಟ್ಸ್ ಆಪ್ ಗೆ ಬಂತು ಫಾರ್ವಾಡೆಡ್ ಮೆಸೇಜ್ ಲೇಬಲ್

Published

on

ಸೌಜನ್ಯ: ಗ್ಯಾಜೆಟ್ ಗುರು

ಸುದ್ದಿ ದಿನ ಡೆಸ್ಕ್: ನಿಜವಾದ ಸಂದೇಶ ಯಾವುದು, ಫಾರ್ವಾಡ್ ಮಾಡಲಾಗಿರುವ ಮೆಸೇಜ್ ಯಾವುದು ಎಂಬ ಗೊಂದಲ ನಿವಾರಣೆಗೆ ವಾಟ್ಸ್ ಆಪ್ ಮೆಸೆಂಜರ್ ಹೊಸ ತಂತ್ರಜ್ಞಾನವನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ.

ನೀವು ಯಾರಾದರೂ ಕಳಿಸಿದ ಸಂದೇಶವನ್ನು ಮತ್ತೊಬ್ಬರಿಗೆ ಕಳಿಸಿದರೆ ಆ ಸಂದೇಶದ ಬಲ ಭಾಗದಲ್ಲಿ ‘ ಫಾರ್ವಾಡೆಡ್’ ಎಂಬ ಸಣ್ಣ ಲೇಬಲ್ ಕಾಣಿಸಿಕೊಳ್ಳಲಿದೆ. ನೀವೇ ಕ್ರಿಯೇಟ್ ಮಾಡುವ ಸಂದೇಶಗಳಿಗೆ ಈ ಲೇಬಲ್ ಇರುವುದಿಲ್ಲ.

ಈ ಲೇಬಲ್ ಅನ್ನು ಬಳಕೆದಾರರು ತೆಗೆಯುವ ಆಯ್ಕೆಯನ್ನು ಕೊಟ್ಟಿಲ್ಲ. ಸಂದೇಶ ಕಳಿಸುವವರಿಗೂ ಹಾಗು ಅದನ್ನು ಸ್ವೀಕರಿಸುವವರಿಗೂ ಈ ಲೇಬಲ್ ಕಾಣಿಸುತ್ತದೆ.

ವಾಟ್ಸ್ ಆಪ್ ನ ಹೊಸ ಬೆಟಾ ವರ್ಷನ್ ನಲ್ಲಿ ಮಾತ್ರ ಈ ಆಯ್ಕೆ ಬಂದಿದೆ. ನಿಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ವಾಟ್ಸ್ ಆಪ್ ಬೆಟಾ ವರ್ಷನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವಾ ಅಪ್ ಡೇಟ್ ಮಾಡಬಹುದು.

ಸೌಜನ್ಯ: ಗ್ಯಾಡ್ಜೆಟ್ ಗುರು

Leave a Reply

Your email address will not be published. Required fields are marked *

Trending

Exit mobile version