ದಿನದ ಸುದ್ದಿ

ಹಳೇ‌ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ‌ ಕೆಲಸಗಳು ಉತ್ತಮ‌ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್

Published

on

ಸುದ್ದಿದಿನ,ದಾವಣಗೆರೆ : ಯುವಕರು ಸಮಾಜ ಮುಖಿ‌ ಕೆಲಸದಲ್ಲಿ ತೊಡಗಿಸಿಕೊಂಡರೆ ಉತ್ತಮ‌ ನಾಯಕರು ಆಗಲು ಅದು ಬುನಾದಿ ಆಗುತ್ತದೆ ಎಂದು ಮೇಯರ್ ಎಸ್ ಟಿ ವೀರೇಶ್ ತಿಳಿಸಿದರು.

ನಗರದ ಹಳೇ‌ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ, ಕುಂದುವಾಡ ಯುವ ರತ್ನ ಪ್ರಶಸ್ತಿ, ಕೆಎಪಿಎಲ್ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಸಮಯದಲ್ಲಿ ಯುವಕರು ಬೇರೆ ಬೇರೆ ದಾರಿ ಕಡೇ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಸಾಮಾಜಿಕ ಸೇವೆಗಳು, ಸಹಾಯ ಹಸ್ತ ಚಾಚುವಂತ ಯುವ ಮನಸ್ಸುಗಳು ಸಿಗುವುದೇ ವಿರಳವಾಗಿದೆ.

ಇಂತಹ ಕಾಲದಲ್ಲಿ ಮನಾ ಯುವ ಬ್ರಿಗೇಡ್ ಯುವಕರು, 44 ನೇ ವಾರ್ಡಿನಲ್ಲಿ ಅತ್ಯುತ್ತಮ‌ ಸಾಮಾಜಿಕ ಸೇವೆ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದಾರೆ.. ಯಾವುದೇ ಸಮಾಜ ಸೇವೆಗಳು ಮಾಡಬೇಕೆಂದರು ಸವಾಲುಗಳು ಜಾಸ್ತಿ, ಎಲ್ಲಾ ಸವಾಲು ಮೆಟ್ಟಿನಿಂತು ಯುವಕರು ಸಮಾಜ ಸೇವೆಗಳಲ್ಲಿ ತೊಡಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ದಿ. ಜೆಎಂ ಹನುಮಂತಪ್ಪ ಅವರಿಗೆ ಮರಣೋತ್ತರ ಕುಂದುವಾಡ ರತ್ನ ಪ್ರಶಸ್ತಿ ಹಾಗೂ ಸಿಆರ್ ಪಿಎಫ್ ಯೋಧ ಆನಂದ್ ಎಸ್ ಎಚ್, ಎಸ್ ಎಸ್ ಬಿ ಯೋಧ ಭರ್ಮಪ್ಪ, ಸಮಾಜ ಸೇವಕ ರಾಜು ಕರೂರು ಅವರಿಗೆ ಕುಂದುವಾಡ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಕೆಪಿಎಲ್ ಚಾಂಪಿಯನ್ ಪವರ್ ಫೈಟರ್ಸ್ ತಂಡಕ್ಕೆ ಟ್ರೋಫಿ ವಿತರಿಸಲಾಯಿತು..

ಈ ಸಂದರ್ಭದಲ್ಲಿ ವರ್ತಕರಾದ ರಾಘವೇಂದ್ರ ಎನ್ ದಿವಾಕರ್, ಪಾಲಿಕೆ ಮಾಜಿ ಸದಸ್ಯ ಹೆಚ್ ತಿಪ್ಪಣ್ಣ, ಮುಖಂಡರಾದ ಬಾಡದ ಆನಂದರಾಜ್, ನಾಗಭೂಷಣ್ ವಾಣಿ, ಮಿಟ್ಲಕಟ್ಟೆ ಚಂದ್ರಪ್ಪ, ಶಿವಪ್ಪ, ಜೆಸಿ ದೇವರಾಜ್, ಎನ್ ಟಿ ನಾಗರಾಜ್, ಸಣ್ಣಿಂಗಪ್ಪ, ಮಂಜಪ್ಪ, ಗಿರೀಶ್ ದೇವರಮನೆ, ಪತ್ರಕರ್ತ ಮಧುನಾಗರಾಜ್ ಕುಂದುವಾಡ ಸೇರಿದಂತೆ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version