ದಿನದ ಸುದ್ದಿ
ಶಿಕ್ಷಕ ಸನಾವುಲ್ಲಾ ಅವರಿಂದ ನವಿಲೇಹಾಳಿನಲ್ಲಿ ‘ಉಚಿತ ಗ್ರಂಥಾಲಯ ಸೇವೆ’
ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾವಂತರಿರುವ ಊರು ನಮ್ಮ ನವಿಲೇಹಾಳು. ಈ ಹಿನ್ನೆಲೆಯಲ್ಲಿ, ಸರ್ಕಾರಿ ಉದ್ಯೋಗಕ್ಕಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕ -ಯುವತಿಯರೂ ಇದ್ದಾರೆ. ಇವರೆಲ್ಲರಿಗೂ ಅನುಕೂಲ ಆಗಲಿ ಎಂದು ನನ್ನಲ್ಲಿ ಇರುವ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ ಗಳನ್ನು ಹಾಗು ಇತ್ತೀಚಿನ ಇನ್ನೂ ಹೆಚ್ಚು ಉಪಯುಕ್ತ ವಾದ ಪುಸ್ತಕ ಗಳನ್ನು ಖರೀದಿಸಿ ಸಾರ್ವಜನಿಕ ವಲಯಕ್ಕೆ ಅರ್ಪಿಸುತ್ತಿದ್ದೇನೆ ಎಂದು ಶಿಕ್ಷಕ ಸನಾವುಲ್ಲಾ ನವಿಲೇಹಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ನಾನು ಈ ಮೊದಲು ವಾಸವಿದ್ದ ಮನೆಯಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತಿದ್ದು, ಈ ಗ್ರಂಥಾಲಯ ದಲ್ಲಿ ಶಿಕ್ಷಕರ TET, CET, SDA, FDA, PDO, NET, KSET, PHD. ಇನ್ನೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳ ಪುಸ್ತಕ ಗಳು, magazine ಗಳು ಲಭ್ಯವಿರುತ್ತವೆ .ಆಸಕ್ತರು ಇವುಗಳ ಸದುಪಯೋಗ ಪಡೆದುಕೊಳ್ಳಬಹುದು.ಮತ್ತು ಕನ್ನಡ ಸಾಹಿತ್ಯಕುರಿತ ಪುಸ್ತಕ ಗಳು ಓದುಗರಿಗೆ ಲಭ್ಯವಿರುತ್ತವೆ ಎಂದಿದ್ದಾರೆ.
ಗ್ರಂಥಾಲಯ ದಿಂದ ಪಡೆದ ಪುಸ್ತಕ ಗಳನ್ನು ಹತ್ತರಿಂದ ಹದಿನೈದು ದಿನಗಳಲ್ಲಿ ಹಿಂದಿರುಗಿಸಿ ಪುನಃ ಬೇರೆ ಪುಸ್ತಕ ಗಳನ್ನು ಪಡೆಯಬಹುದು .ಆಸಕ್ತ ಓದುಗರು ಗ್ರಂಥಾಲಯ ದಲ್ಲಿ ಇಲ್ಲದೆ ಇರುವ ಯಾವುದಾದರು ಪುಸ್ತಕ ಗಳನ್ನು ಅಪೇಕ್ಷೆ ಪಟ್ಟು ಸಲಹೆ ಕೊಟ್ಟರೆ ಅವುಗಳನ್ನು ತರಿಸಿಕೊಡಲಾಗುವುದು. ಗ್ರಂಥಾಲಯ ದ ಸೇವೆ ಉಚಿತವಾಗಿದ್ದು,ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ಕೋರಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9481411880, 7975597086