ದಿನದ ಸುದ್ದಿ

ಮಾದ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ಯೆ | ಕೇಜ್ರೀವಾಲ್

Published

on

ಸುದ್ದಿದಿನ ಡೆಸ್ಕ್ | ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ (ಇಂಡಿಪೆಂಡೆಂಟ್‌ ಜರ್ನಲಿಸಂ) ಹತ್ಯೆ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಎಮಿನೆಂಟ್ ಪತ್ರಕರ್ತರು ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯ ಹಿಂದೆ ಮೋದಿ ಸರ್ಕಾರದ ಕೈವಾಡವಿದೆ ಎಂದು ದೆಹಲಿ ರಾಜ್ಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.

“ಸ್ವತಂತ್ರ ಮಾಧ್ಯಮವು ಪ್ರಜಾಪ್ರಭುತ್ವದ ಜೀವನಾಡಿ ಇದ್ದಂತೆ. ಆದರೆ, ಮೋದಿ ಸರ್ಕಾರ ಸ್ವತಂತ್ರ ಮಾಧ್ಯಮ ಕೊಲೆಗೈಯಲು ದೃಢಸಂಕಲ್ಪ ತಳೆದಂತೆ ವರ್ತಿಸುತ್ತಿದೆ. ಎಬಿಪಿ ದೃಶ್ಯ ಮಾಧ್ಯಮದ ಇಬ್ಬರು ಎಮಿನೆಂಟ್ ಜರ್ನಲಿಸ್ಟ್ ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ. ಹಾಗಾಗಿ ಮಾಧ್ಯಮಗಳು ಈಗ ಎಚ್ಚೆತ್ತುಕೊಳ್ಳದಿದ್ದರೆ ಗಂಡಾಂತರ ಕಾದಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಎಬಿಪಿಯ ಸಂಪಾದಕೀಯ ವಿಭಾಗದ ಮುಖ್ಯಸ್ಥ ಮನನ ಮಿಲಿಂದ್ ಖಂಡೇಕರ್ ಮತ್ತು ಆ್ಯಂಕರ್ ಪುಣ್ಯ ಪ್ರಸುಣ್ ಬಾಜಪಾಯಿ ಇಬ್ಬರು ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ. ಎಬಿಪಿಯ ಪ್ರಮುಖ ಕಾರ್ಯಕ್ರಮ “ಮಾಸ್ಟರ್ ಸ್ಟ್ರೋಕ್” ಬಂದ್ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚತ್ತೀಸಗಡದ ಮಹಿಳೆಯೊಬ್ಬಳು ಭತ್ತ ಬೆಳೆಯುವುದನ್ನು ಬಿಟ್ಟು ಸೀತಾಫಲ ಬೆಳೆದು ತನ್ನ ಆದಾಯವನ್ನು ದ್ವಿಗುಣ ಮಾಡಿಕೊಂಡಿದ್ದೇನೆ ಎಂದು ಮೋದಿ ಸಂವಾದದಲ್ಲಿ ಹೇಳಿಕೊಂಡಿದ್ದಳು‌. ಈ ಕುರಿತು ಎಬಿಪಿ ಚಾನೆಲ್ ರಿಯಾಲಿಟಿ ಚೆಕ್ ನಡೆಸಿ ಸುದ್ದಿ ಬಿತ್ತರಿಸಿತ್ತು. ಆದರೆ, ಸಂವಾದ ನಡೆಯುವ ಮೊದಲು ದೆಹಲಿ ಅಧಿಕಾರಿಗಳು ಮೋದಿ ಜತೆಗೆ ಹೇಗೆ ಮಾತನಾಡಬೇಕೆಂಬುದನ್ನು ಮಹಿಳೆಗೆ ತರಬೇತಿ ನೀಡಿದ್ದರು. ಆದ್ದರಿಂದ ಆಕೆ ಆದಾಯ ದ್ವಿಗುಣ ಗೊಂಡಿದೆ ಎಂದು ಸುಳ್ಳು ಹೇಳಿದ್ದಾಳೆ ಎಂದು ವರದಿ ಮಾಡಿತ್ತು. ಇದು ಟ್ವಿಟರ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಕೇಂದ್ರ ಸಚಿವ ರಾಜನಾಥ ಸಿಂಗ್ ರಾಥೋರ್ ಚಾನೆಲ್ ನ್ನು ತರಾಟೆಗೆ ತೆಗೆದುಕೊಂಡು ಮಾಧ್ಯಮ ನೀತಿ ಸಂಹಿತೆ ಬಗ್ಗೆಯೂ ಪ್ರಶ್ನಿಸಿದ್ದರು. ವೀಕ್ಷಕರು ಈ ಚಾನೆಲ್ ಬಂದ್ ಮಾಡುವಂತೆ ದೂರು ನೀಡಿದ್ದರು ಎಂದು ಟಿಎನ್ಇಐ ವರದಿ ಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version