ಕ್ರೀಡೆ
ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್; ಪುರುಷರ ಸಿಂಗಲ್ಸ್‌ನಲ್ಲಿ ರಾಫೆಲ್ ನಡಾಲ್ ಫೈನಲ್ ಪ್ರವೇಶ; ಇಂದು ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಐಗಾ ಸ್ವಿಯಾಟೆಕ್ ಮತ್ತು ಕೊಕೊ ಗಾಫ್ ಪ್ರಶಸ್ತಿಗಾಗಿ ಸೆಣಸು
ಸುದ್ದಿದಿನ ಡೆಸ್ಕ್ : ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನಿನ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ.
ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಆಟಗಾರ ಜರ್ಮನಿಯ ಅಲೆಗ್ಸಾಂಡರ್ ಜ್ವರೇವ್ ಅವರು 2ನೇ ಸೆಟ್ ಹೋರಾಟದ ವೇಳೆ ಗಾಯಗೊಂಡು ನಿವೃತ್ತಿ ಘೋಷಿಸಿದರು.
ಇದರೊಂದಿಗೆ 5ನೇ ಕ್ರಮಾಂಕದ ಆಟಗಾರ ನಡಾಲ್ ಪೂರ್ಣ ಹೋರಾಟವಿಲ್ಲದೆ ಫೈನಲ್ ತಲುಪಿದರು. ಮೊದಲ ಸೆಟ್‌ಅನ್ನು ಟೈಬ್ರೇಕರ್ ಮೂಲಕ ಗೆದ್ದುಕೊಂಡು, ಶುಭಾರಂಭ ಮಾಡಿದ್ದ ನಡಾಲ್, ಎರಡನೇ ಸೆಟ್‌ನಲ್ಲಿ 6-6ರ ಸಮಸ್ಥಿತಿಯಲ್ಲಿದ್ದಾಗ ಜ್ವರೇವ್ ನಿವೃತ್ತಿ ಘೋಷಿಸಿದರು.
ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಅವರು 8ನೇ ಶ್ರೇಯಾಂಕಿತ ಆಟಗಾರ ನಾರ್ವೆಯ ಕಾಸ್ಪರ್ ರೂಡ್ ಅವರ ವಿರುದ್ಧ ಟ್ರೋಫಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಇಂದು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಅಗ್ರಶ್ರೇಯಾಂಕಿತ ಆಟಗಾರ್ತಿ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಮತ್ತು ಅಮೆರಿಕದ ಕೊಕೊ ಗಾಫ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದ್ದಾರೆ.
ಐಗಾ ಸ್ವಿಯಾಟೆಕ್ ಎರಡನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದರೆ, 23ನೇ ಕೊಕೊ ಗಾಫ್ ಚೊಚ್ಚಲ ಬಾರಿಗೆ ಈ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿ, ಉಭಯ ಆಟಗಾರ್ತಿಯರ ನಡುವೆ ಉತ್ತಮ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243