ಕ್ರೀಡೆ

ಫ್ರೆಂಚ್ ಓಪನ್ ಟೆನಿಸ್ ; ಕರ್ನಾಟಕದ ರೋಹನ್ ಬೋಪಣ್ಣ ಜೋಡಿ ಪುರುಷರ ಡಬಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶ

Published

on

ಸುದ್ದಿದಿನ ಡೆಸ್ಕ್ : ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಜತೆಗಾರ ಹಾಲೆಂಡ್ ನ ಮ್ಯಾಟ್ವೆ ಮಿಡೆಲ್ಕೂಪ್ ಜೋಡಿ ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ- ನೆದರ್ಲೆಂಡ್ಸ್ ಜೋಡಿ, 4-6, 6-4, 7-6 ಸೆಟ್ ಗಳಿಂದ ಬ್ರಿಟನ್ ಮತ್ತು ಫಿನ್ಲೆಂಡ್ ಜೋಡಿ ಲಾಯ್ಡ್ ಗ್ಲಾಸ್ ಪೂಲ್ ಮತ್ತು ಹ್ಯಾರ್ರಿ ಹೆಲಿಓವಾರ್ ಜೋಡಿ ವಿರುದ್ಧ ಜಯ ಗಳಿಸಿ ಮುಂದಿನ ಸುತ್ತಿಗೆ ತೇರ್ಗಡೆ ಹೊಂದಿದೆ.

16ನೇ ಶ್ರೇಯಾಂಕಿತ ಬೋಪಣ್ಣ ಮತ್ತು ಮಿಡೆಲ್ಕೂಪ್ ಮೂರನೇ ಸೆಟ್ ಸೂಪರ್ ಟೈ ಬ್ರೇಕರ್ ನಲ್ಲಿ 0-3 ಅಂತರದಲ್ಲಿ ಹಿನ್ನಡೆ ಅನುಭವಿಸಿದರೂ ಕೆಚ್ಚೆದೆಯ ಹೋರಾಟದೊಂದಿಗೆ ಉಪಾಂತ್ಯ ತಲುಪಿದ್ದಾರೆ.

ಕಳೆದ 7 ವರ್ಷಗಳ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಬೋಪಣ್ಣ ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕರ್ನಾಟಕದ ರೋಹನ್ ಬೋಪಣ್ಣ ೨೦೧೫ರಲ್ಲಿ ಫ್ಲೋರಿನ್ ಮೆರ್ಗಾ ಜತೆ ಕೊನೆಯದಾಗಿ ವಿಂಬಲ್ಡನ್ ನಲ್ಲಿ ನಾಲ್ಕರ ಘಟ್ಟ ತಲುಪಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version