ಲೈಫ್ ಸ್ಟೈಲ್
ಸಿಕ್ಕಾಪಟ್ಟೆ ಟ್ರೆಂಡಿಂಗ್ Friendship Day ನೈಲ್ ಆರ್ಟ್..!
“ಸ್ನೇಹ“ಅನ್ನೋ ಎರಡಕ್ಷರದ ಪದದಲ್ಲಿ ಇಡೀ ಭೂಮಂಡಲದಷ್ಟು ಪ್ರೀತಿ-ವಿಶ್ವಾಸ-ಆನಂದ ಅಡಗಿದೆ. ನೋವು-ನಲಿವು-ಸಿಹಿ-ಕಹಿಗಳ ಸಮಾಗಮ ಸ್ನೇಹ. ಇಂತಹ ಸ್ನೇಹ ಸಂಬಂಧದ ಪ್ರತೀಕವಾಗಿ ಆಗಸ್ಟ್ ತಿಂಗಳ ಮೊದಲ ಭಾನುವಾರ ಸ್ನೇಹಿತರ ದಿನಾಚರಣೆ ಆಚರಿಸಲಾಗುತ್ತದೆ.
ಸ್ನೇಹಿತ ರ ದಿನಾಚರಣೆ ಗೆ ಕೆಲವೇ ದಿನಗಳು ಉಳಿದಿದ್ದು, ಈ ದಿನದಂದು ತಮ್ಮ ಪ್ರಾಣ ಸ್ನೇಹಿತರಿಗೆ ವಿಶೇಷ ವಾಗಿ ವಿಶ್ ಮಾಡುವ ಕಾತುರದಲ್ಲಿರುವ ಸಮಸ್ತ ಹೆಂಗಳೆಯರಿಗೆ, ಇದೋ ಇಲ್ಲಿದೆ ನೋಡಿ ವಿಶಿಷ್ಟ ಬಗೆಯ “ಫ್ರೆಂಡ್ ಷಿಪ್ ಡೇ ನೈಲ್ ಆರ್ಟ್” .
ನಿಮ್ಮ ಪ್ರಾಣ ಸ್ನೇಹಿತರಿಗೆ ವಿಶೇಷ ವಾಗಿ ವಿಶ್ ಮಾಡುವ ಪ್ಲಾನ್ ಇದ್ದಲ್ಲಿ.. ಗ್ರೀಟಿಂಗ್ ಕಾರ್ಡ್,ರೋಜಾ, ಟೆಡ್ಡಿ ಬೇರ್ ಕೊಟ್ಟು ಬೋರ್ ಆಗಿದ್ದಲ್ಲಿ..ಈ ಫ್ರಂಶಿಪ್ ಡೇ ನಿಮ್ಮ ಕೈ ಉಗುರುಗಳ ಮೇಲೆ ನಿಮ್ಮ ಬೆಸ್ಟ್ ಫ್ರೆಂಡ್ ಗೆ ಸ್ನೇಹಿತರ ದಿನಾಚರಣೆ ಯ ಶುಭಾಶಯ ಗಳನ್ನು ಕೋರಿ ಸರ್ಪ್ರೈಸ್ ನೀಡಿ.
ಫ್ರೆಂಡ್ ಷಿಪ್ ನೈಲ್ ಆರ್ಟ್
ಕೈ ಉಗುರಿನ ಮೇಲೆ ನೈಲ್ ಪಾಲಿಷ್ ಬಳಸಿ ಸ್ನೇಹ ಸಂಬಂಧ ಸಾಯುವ ಚಿತ್ರ, ವಾಕ್ಯ ಗಳನ್ನು ಕಲಾತ್ಮಕವಾಗಿ ಚಲಿಸುವ ಕಲೆಯ ಫ್ರಂಶಿಪ್ ಡೇ ನೈಲ್ ಆರ್ಟ್. ಸದಾ ಡಿಫರೆಂಟ್ ಆಗಿರಲು ಬಯಸುವ ಹೆಣ್ಣುಮಕ್ಕಳು ಈ ಬಾರಿಯ ಫ್ರೆಂಷಿಪ್ ಡೇ ನಿಮ್ಮ ಗೆಳೆಯರ ಹೆಸರನ್ನು ಉಗುರುಗಳ ಮೇಲೆ ಬಿಡಿಸಿ ನಿಮ್ಮ ಸ್ನೇಹ ಸೇತುವೆಯ ಗಟ್ಟಿಗೊಳಿಸಬಹು.
ಟಾಮ್-ಜೆರಿ ನೈಲ್ ಆರ್ಟ್, ಬೆಸ್ಟ್ ಫ್ರೆಂಡ್ ನೈಲ್ ಆರ್ಟ್, ಫೋಟೋ ನೈಲ್ ಆರ್ಟ್, ಹೀಗೆ ಹಲವಾರು ವೆರೈಟಿಗಳಲ್ಲಿ ಫ್ರೆಂಡ್ಸ್ ಡೇ ನೈಲ್ ಆರ್ಟ್ ಸಿದ್ಧ ಗೊಂಡಿದೆ. ನೀವೂ ಒಮ್ಮೆ ಟ್ರೈ ಮಾಡಿ ನಿಮ್ಮ ಸ್ನೇಹಿತ ರನ್ನು ಸರ್ಪೈಸ್ ಮಾಡಿ.