ಲೈಫ್ ಸ್ಟೈಲ್

ಸ್ನೇಹದ ನೆನಪಿನಂಗಳದಲ್ಲಿನ ಸವಿನೆನಪುಗಳು..!

Published

on

  • ಹುಸೇನಸಾಬ ವಣಗೇರ,ಉಪನ್ಯಾಸಕರು

ಜೀವನದಲ್ಲಿ ಕಷ್ಟ ಸುಖ, ನೋವುನಲಿವುಗಳ ಮದ್ಯೆ, ಸದಾ ನಮ್ಮ ಏಳಿಗೆಯನ್ನು ಬಯಸುವುದು ಸ್ನೇಹ. ರಕ್ತ ಸಂಬಂದಕ್ಕಿಂತಲೂ ಮಿಗಿಲಾದ ಸಂಬಂದವಿದೆ ಎನ್ನುವುದಾದರೆ ಅದುವೇ ಈ ಸಂಬಂಧ. ಯಾವುದೇ ಜಾತಿ, ಧರ್ಮದ ಭೇದಭಾವವಿರದ ನಿಶ್ವಾರ್ಥ ಪವಿತ್ರವಾದ ಅನುಬಂಧವಿದ್ದಾಗ ಕೈಹಿಡಿದು ಗೆದ್ದಾಗ ಬೆನ್ನುತಟ್ಟಿ ಮುನ್ನಡೆಸುವ ಈ ಸೇಹವೇ ನನ್ನ ಪಾಲಿನ ಆಸ್ತಿ ಸದಾ ಕಾಳಜಿ, ಪ್ರೀತಿ, ವಾತ್ಸಲ್ಯ, ವಿಶ್ವಾಸದ ಈ ಸ್ನೇಹದ ಮುಂದೆಉಪಯೋಗಕ್ಕೆ ಬಾರದ ಆಸ್ತಿ, ಅಂತಸ್ತುಎಲ್ಲವೂ ಶೂನ್ಯ.

ನನಗೂ ಒಬ್ಬಆತ್ಮೀಯ ಸ್ನೇಹಿತನಿದ್ದಾನೆ, ಬಾಲ್ಯದಿಂದಲೂ ನನಗೆ ಜೊತೆಗಾರನಾಗಿ ಶಾಲೆಯಲ್ಲಿಸಹಪಾಠಿಯಾಗಿ ಸೋಲು ಗೆಲುವುಗಳಿಗೆಆಸರೆಯಾಗಿ ಸದಾತನ್ನ ಹಾಸ್ಯ ಮಾತುಗಾರಿಕೆಯಿಂದಜೀವನದಜಂಜಾಟದಲ್ಲಿನ ನೋವುಗಳನ್ನು ದೂರಮಾಡಿ ನೋವಿನಲ್ಲೂ ನಲಿಯುವಂತೆ ಮಾಡುವ ಮನುಜ.ಲೋಕ ಜ್ಞಾನವನ್ನು ಅರಿಯದ ಬಾಲ್ಯದ ಆ ದಿನಗಳಲ್ಲಿ ಪರಿಚಯ ಸ್ನೇಹವಾಗಿ ಬೆಳೆಯಿತು ಅದುವೇ ನಮ್ಮ ಸ್ನೇಹಕ್ಕೆ ಬದ್ರಬುನಾದಿಯನ್ನು ಹಾಕಿ, ಕೇವಲ ಆಟದಲ್ಲಿಜೊತೆಗಾರನಾಗಿರದೇಇಂದು ಸ್ನೇಹದಲ್ಲಿಉತ್ತುಂಗ ಸ್ಥಾನಕ್ಕೇರಿ ಸದಾ ನನ್ನೊಡನೆ ನಡೆಯುತ್ತಿದಾನೆ.

ಬಾಲ್ಯದಿಂದಲೇಜೊತೆಗಾರರಾದ ನಾವು ಪ್ರಾಥಮಿಕ ಶಿಕ್ಷಣ, ಪ್ರೌಡಶಿಕ್ಷಣ,ಪದವಿಪೂರ್ವ, ಪದವಿಶಿಕ್ಷಣವನ್ನು ಜೊತೆಯಲ್ಲೆ ಕಲಿತೆವು ಅಷ್ಟೆ ಅಲ್ಲದೆ ಒಬ್ಬರಿಗೊಬ್ಬರು ಬಿಟ್ಟಿರಲು ಅಸಾದ್ಯವೆಂಬುವುದನ್ನು ಅರಿತು ಸ್ನಾತಕೋತ್ತರ ಪದವಿಯನ್ನು ಇಬ್ಬರೂ ಒಂದೇ ವಿಷಯದಲ್ಲಿ ಒಂದೇಡೆಗೆಕಲಿತಿರುವುದು ಹೆಮ್ಮೆಯ ವಿಷಯ.ಜೀವನದ ಏಳು ಬಿಳುಗಳಲ್ಲಿ ಆಸರೆಯಾಗಿ ಮಾತಿಗೆ ಬಾರದ ಭಾವನೆಗಳನ್ನು ಅರ್ಥೈಸಿಕೊಂಡು ಅಳುವಾಗ ಅತ್ತು ನಗುವಾಗ ನಕ್ಕುನಲಿಯುವ ಈ ಸ್ನೇಹ ನನ್ನಜೀವನದಲ್ಲಿ ಹಾಸು ಹೊಕ್ಕಾಗಿದೆ.ಬಡತನದ ಬವಣಿಯಲಿ ಬೆಂದುಕಲಿಕೆಯ ಈ ಜೀವನದಲ್ಲಿಜೀವನದ ಪರಿಪಾಠವನ್ನು ತಿಳಿಯಲು ಸಾಧ್ಯವಾಗಿದೆ.

ದಿನ ಕಳೆದಂತೆ ಸ್ನೇಹಿತರ ಸಂಖ್ಯೆ ಹೆಚ್ಚಿದಂತೆಲ್ಲಾಆತ್ಮವಿಸ್ವಾದಜೋತೆಗೆ ಸರಿ ತಪ್ಪುಗಳನು ತಿಳಿಸಿ ತಿದ್ದಿಬುದ್ದಿ ಹೇಳಿ ಹಸಿದಾಗ ಊಟ ಕೊಡಿಸಿ ನೊಂದಾಗಕರುಣೆತೋರಿ ಪ್ರೀತಿ ವಾತ್ಸಲ್ಯತೋರಿದ ನನ್ನೆಲ್ಲಾ ಸ್ನೇಹಿತರಿಗೂ ನಾ ಚಿರಋಣಿಯಾಗಿರುವೆ
ನಿತ್ಯಜೀವನದ ನೋವು ನಲಿವುಗಳಲ್ಲಿ ನನ್ನೆಲ್ಲಾ ಸ್ನೇಹಿತರ ನೆನಪುಗಳು ಕಾಡುತ್ತಿವೆ. ನನ್ನ ನೋವುಗಳಿಗೆ ಸ್ನೇಹಿತರ ನೆನಪುಗಳೆ ಮದ್ದು ಹಿಂದಿನ ಆ ದಿನಗಳನ್ನು ನೆನಸಿಕೊಂಡರೆ ನೋವಿನಲ್ಲಿ ನಲಿಯುವಂತೆ ಮಾಡುವ ಆ ನೆನಪಿನಂಗಳದ ಸವಿನೆನಪುಗಳು ಪುನಃ ಬರಬಾರದೇ ಎಂಬ ಹಗಲುಗನಸಿನಲ್ಲೆ ಜೀವನ ಸಾಗುತ್ತಿದೆ.

ಖುಷಿ ಸಂತೋಷದಿಂದ ಕಳೆದ ದಿನಗಳನ್ನು ಮರೆಯಲು ಸಾಧ್ಯವೇಯಿಲ್ಲ ನನ್ನೆಲ್ಲಾ ಗೆಳೆಯರು ವಿದ್ಯಾಭ್ಯಾಸ ಮುಗಿಸಿ ವೃತ್ತಿಜೀವನಕ್ಕೆ‌ ಕಾಲಿಟ್ಟಾಯಿತು. ಇನ್ನು ಕೆಲವರುಉನ್ನತ ಹುದ್ದೆಯ ಕನಸು ಕಟ್ಟಿ ಹಗಲು ರಾತ್ರಿಎನ್ನದೇ ಓದಿನಲ್ಲಿತೊಡಗಿಕೊಂಡು ಶ್ರಮಿಸುತ್ತಿದ್ದಾರೆ. ಸದ್ದಿಲ್ಲದೇ ಸಾಗುವ ಅವರ ಪರಿಶ್ರಮ ಅವರನ್ನು ಉನ್ನತಸ್ಥಾನಕ್ಕೆ‌ ಕೊಂಡೊಯುತ್ತದೆ. ಎನ್ನುವ ಬರವಸೆಯ ಬೆಳಕು ಮೂಡಿರುವುದು ಅವರಲ್ಲಿನ‌ ಆತ್ಮವಿಶ್ವಾಸದಿಂದ ಕಂಡುಕೊಂಡಿದ್ದು. ನನ್ನೆಲ್ಲಾ ಸ್ನೇಹಿತರುಉನ್ನತ ಹುದ್ದೆಪಡೆದು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತನೀಡಿ ಸಮಾಜಸುಧಾರಣೆಯಲಿ ಸಣ್ಣದೊಂದು ಪ್ರಯತ್ನಮಾಡುವ ನಮ್ಮಕನಸೊಂದು ನನಸಾಗುವ ದಿನ ಹತ್ತಿರವಾಗುತ್ತಿದೆ.

ಆತ್ಮೀಯ ಮಿತ್ರರೆಅದೆಕೋ ನಾ ಕಾಣೆ ನಿಮ್ಮೆಲ್ಲರ ನೆನಪುಗಳು ನನ್ನನ್ನುಕಾಡುತ್ತಿದೆಆಟ ಪಾಠಗಳ ಜೋತೆಗೆ ಮಾಡಿದ ಕೀಟಲೆಗಳು ಕಣ್ಣಮುಂದೆ ಸುಳಿದಾಡುತ್ತಿವೆ. ಸದ್ಯದ ಸಮಯದಲ್ಲಿ ನಾವೆಲ್ಲರು ದೂರವಿರಬಹುದು ಆದರೆಅದು ಮನಸ್ಸಿನಿಂದಲ್ಲ ಎಂಬ ನಂಬಿಕೆಯೊಂದರಿಂದ ನಿತ್ಯಜೀವನದ ಬದುಕಿನ ಬಂಡಿ ಸಾಗುತ್ತಿದೆ. ನೆನಪಿನಂಗಳದ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಬರಿದಾದ ಬದುಕಿನಲಿ ಭರವಸೆಯಛಾಯೆ ಮೂಡಿದೆ.ಕರೆಗೂ ನಿಲುಕದನಿಮ್ಮೆಲ್ಲರ ನೆನಪುಗಳು ಬಾಳಬುತ್ತಿಯಲಿ ಸಿಹಿಯಾಗಿರಲಿ ನಿಮ್ಮಜೀವನದಲ್ಲಿಯಶಸ್ಸು ಫಲಿಸಲಿ ಎಂದು ಬಯಸುವ ನಿಮ್ಮ ಪ್ರೀತಿಯ ಸ್ನೇಹಿತ.

(ಹುಸೇನಸಾಬ ವಣಗೇರ
ಉಪನ್ಯಾಸಕರು
ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರ
ಮಹಿಳಾ ವಿದ್ಯಾಪೀಠ
ಹುಬ್ಬಳ್ಳಿ
ಮೊಬೈಲ್ : 7829606194)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version