ದಿನದ ಸುದ್ದಿ

ಎಸ್ಕಾರ್ಟ್ಸ್ ಕನ್‌ಸ್ಟ್ರಕ್ಷನ್ ಎಕ್ವಿಪ್‌ಮೆಂಟ್ ನಿಂದ ಭಾರತದ ಮೊದಲ ಹೈಬ್ರಿಡ್ ಪಿಕ್ ಆಂಡ್ ಕ್ಯಾರಿ ಕ್ರೇನ್ ಮತ್ತು ಮಾನೋ ಚಾಸಿಸ್ ಸೇಫ್ ಕ್ರೇನ್ ಅನಾವರಣ

Published

on

  • ವಿಭಿನ್ನ ಟನ್ನೇಜ್‌ನ ಕ್ರೇನ್‌ಗಳು ಮತ್ತು ಉತ್ಪನ್ನ ಶ್ರೇಣಿಗೆ ಪ್ಲಾಟ್‌ಫಾರಂ ನಿರ್ಮಾಣ ಮಾಡುವ ಗುರಿ ಹೊಂದಿದೆ
  • ನಿರ್ಮಾಣ ಸಲಕರಣೆಗೆ ಹೊಸ ಪ್ರಗತಿಯ ಚಾಲಕವಾಗಿ ಮೂಲಸೌಕರ್ಯದ ಚೋದಕವನ್ನು ಗುರುತಿಸುತ್ತದೆ

ಸುದ್ದಿದಿನ,ಬೆಂಗಳೂರು: ಎಸ್ಕಾರ್ಟ್ಸ್ ಲಿಮಿಟೆಡ್‌ನ ಬ್ಯುಸಿನೆಸ್ ಸೆಗ್ಮೆಂಟ್ ಎಸ್ಕಾರ್ಟ್ಸ್ ಕನ್‌ಸ್ಟçಕ್ಷನ್ ಎಕ್ವಿಪ್‌ಮೆಂಟ್ (ಇಸಿಇ) ಇಂದು ಭಾರತದ ಮೊಟ್ಟ ಮೊದಲ ಹೈಬ್ರಿಡ್ ಪಿಕ್ ಆಂಡ್ ಕ್ಯಾರಿ ಕ್ರೇನ್ ಅನ್ನು ಅನಾವರನಗೊಳಿಸಿದೆ. ಇದು ಡ್ಯೂಯೆಲ್ ಫ್ಯೂಯೆಲ್ (ಡೀಸೆಲ್ ಮತ್ತು ಸಿಎನ್‌ಜಿ) ಮತ್ತು 25T ಲಿಫ್ಟ್ ಸಾಮರ್ಥ್ಯದ ಭಾರತದ ಮೊದಲ ಮಾನೋ ಚಾಸಿಸ್ ಸೇಫ್ ಕ್ರೇನ್ RC2522 ಅನ್ನು ಬೆಂಗಳೂರಿನ ಎಕ್ಸ್ಕಾನ್ 2022ರಲ್ಲಿ ಅನಾವರಣಗೊಳಿಸಿದೆ.

ಪರಿಸರ ಸ್ನೇಹಿ ಉತ್ಪನ್ನಗಳ ಸರಣಿಯಲ್ಲೇ ಮೊದಲನೆಯದಾಗಿರುವ, ಹೊಸದಾಗಿ ಬಿಡುಗಡೆ ಮಾಡಿರುವ 13 ಟನ್ ಕ್ಲಾಸ್‌ನಲ್ಲಿ ಓಘಿಖಿ೧೩ಆಅ ಅಓಉ ಕ್ರೇನ್ 4.5 ಎಚ್‌ಪಿ BSIII ಇಂಜಿನ್ ಅನ್ನು ಹೊಂದಿದ್ದು, ಇದು ಸಿಎನ್‌ಜಿ ಹೊಂದಿದೆ ಮತ್ತು ಬಲಶಾಲಿಯಾದ ಸ್ಟೇಂಟ್ ಆಕ್ಸೆಲ್ ಬ್ಯಾಕೆಂಡ್ ಹೊಂದಿದೆ. ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಅಭಿವೃದ್ಧಿಪಡಿಸಿದ, ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಪೂರಕವಾಗಿರುವ NXD13DC CNG ಕ್ರೇನ್ ಟ್ರಕ್ ರೀತಿಯ ಲುಕ್ ಹೊಂದಿದೆ.

ಪ್ರಮಾಣಿತ ವೈಶಿಷ್ಟ್ಯ ಗಳೊಂದಿಗೆ ಕೇವಲ 6.3 ಮೀ ಟರ್ನಿಂಗ್ ರೇಡಿಯಸ್ ಇದೆ. ಹೈಬ್ರಿಡ್ ಇಂಜಿನ್ ಹೊಂದಿರುವ ಕ್ರೇನ್, ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ಮತ್ತು ಸಾಮಗ್ರಿ ಸಾಗಣೆಗೆ ಮತ್ತು ಒಂದು ಸೈಟ್‌ನಿಂದ ಇನ್ನೊಂದು ಸೈಟ್‌ಗೆ ಜನರನ್ನು ಸಾಗಿಸಲು ಹಿಂಬದಿ ಡೆಕ್ ಯುಟಿಲಿಟಿ ಹೊಂದಿದೆ. ಇದು 3 ಪಾರ್ಟ್ಗಳ ಸಂಪೂರ್ಣ ಪವರ್ಡ್ ಬೂಮ್ ಹೊಂದಿದ್ದು, ಗರಿಷ್ಠ ಎತ್ತರ 13 ಮೀ. ಆಗಿದೆ ಮತ್ತು 14*24 ಹೆವಿ ಡ್ಯೂಟಿ ಹಿಂಬದಿ ಟೈರ್‌ಗಳನ್ನು ಹೊಂದಿದ್ದು, ಮಶಿನ್‌ನ ದೀರ್ಘ ಬಾಳಿಕೆಯನ್ನು ಖಚಿತಪಡಿಸುತ್ತದೆ. ಸುರಕ್ಷತೆಯಲ್ಲಿ ಹೋಲಿಕೆಯೇ ಇಲ್ಲದಂತೆ, ಏರಿಸುವಾಗ ಅಥವಾ ಅಧಿಕ ಎತ್ತರದ ಕೆಲಸದಲ್ಲಿ ಸ್ಥಿರತೆ ಮತ್ತು ಸುಸ್ಥಿರತೆಯ ಮುಂಬದಿ ಔಟ್‌ರಿಗ್ಗರ್‌ಗಳನ್ನು ಕ್ರೇನ್ ಹೊಂದಿದೆ.

ಭಾರತದಲ್ಲಿ ಕ್ರೇನ್ ಬಳಕೆಯ ವಿಧಾನವನ್ನು ಬದಲಿಸುವ ಉದ್ದೇಶವನ್ನು ಹೊಂದಿರುವ, ಹೊಸದಾಗಿ ಅನಾವರಣಗೊಳಿಸಿರುವ RC2522ಮಾನೋ ಚಾಸಿಸ್ ಸೇಫ್ ಕ್ರೇನ್ 25T ಲಿಫ್ಟ್ ಸಾಮರ್ಥ್ಯವನ್ನು ಹೊಂದಿದ್ದು, ಸೈಟ್‌ನಲ್ಲಿ ಹೆಚ್ಚಿನ ಸುರಕ್ಷತೆಯೊಂದಿಗೆ ಬೀಳದಂತಹ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಸಾಂಪ್ರದಾಯಿಕ ಮಶಿನ್‌ಗಳಿಗೆ ಅತ್ಯುತ್ತಮವಾದ ನವೀನ ತಂತ್ರಜ್ಞಾನವನ್ನು ಹೊಂದಿದೆ.

RC2522 ಕ್ರೇನ್ ವರ್ಗದಲ್ಲೇ ಉತ್ತಮ ಬಾಳಿಕೆ, ಅಧಿಕ ಸಾಮರ್ಥ್ಯ, ಸ್ಥಿರತೆ ಮತ್ತು ವೈವಿಧ್ಯತೆ ಕಾರ್ಯಾಚರಣೆಗಳನ್ನು ಒದಗಿಸುತ್ತದೆ. 110HP ಕಿರ್ಲೋಸ್ಕರ್ ಇಂಜಿನ್ ಹೊಂದಿರುವ ಕ್ರೇನ್ ಅಟೊಮ್ಯಾಟಿಕ್ ಟ್ರಾನ್ಸ್ಮಿಶನ್ ಮತ್ತು ಕೇವಲ 6.6 ಮೀ ಕಡಿಮೆ ಟರ್ನಿಂಗ್ ರೇಡಿಯಸ್ ಹೊಂದಿದೆ. ಇದರ ಸುಂದರವಾಗಿ ವಿನ್ಯಾಸ ಮಾಡಿರುವ ಕ್ಯಾಬಿನ್ 2 ವ್ಯಕ್ತಿಗಳಿಗೆ ಸೂಕ್ತವಾಗಿದೆ ಮತ್ತು ಕಡಿದಾದ ಪ್ರದೇಶದಲ್ಲೂ ಫ್ರಂಟ್ ವೀಲ್ ಉತ್ತಮ ಸಾಗಣೆಯನ್ನು ಒದಗಿಸುತ್ತದೆ. ಜಾಗತಿಕ ಲುಕ್ ಹೊಂದಿರುವ ಕ್ರೇನ್ ಅನ್ನು 8T ಗರಿಷ್ಠ ಸಾಮರ್ಥ್ಯದೊಂದಿಗೆ ಟೆಲಿಹ್ಯಾಂಡ್ಲರ್ ರೀತಿ ಬಳಸಬಹುದಾಗಿದೆ. ಬಾಸ್ಕೆಟ್ ಹೊತ್ತೊಯ್ಯುವ ವ್ಯಕ್ತಿ ಮತ್ತು ಮಡಚಬಹುದಾದ ಫ್ಲೆಂ ಜಿಬ್ ಅನ್ನು ಇದು ಹೊಂದಿದೆ. ಈ ಕ್ರೇನ್‌ನ ಬೂಮ್ ಮತ್ತು ಚಾಸಿಸ್ ಅನ್ನು ಅಧಿಕ ಸ್ಟçಕ್ಚರಲ್ ಸಾಮರ್ಥ್ಯದ ಸಾಮಗ್ರಿಯನ್ನು ಬಳಸಿ ಮಾಡಲಾಗಿದೆ.

ಬೆಂಗಳೂರು ಎಕ್ಸ್ಕಾನ್ 2022 ರಲ್ಲಿ ಭಾಗವಹಿಸುತ್ತಿರುವ ಎಸ್ಕಾರ್ಟ್ಸ್, ತನ್ನ ಯೆಲ್ಲೋ ಲೈನ್ ಮತ್ತು ವೈಟ್ ಲೈನ್ ಸಿರೀಸ್‌ನಲ್ಲಿ ಸಾಮಗ್ರಿ ನಿರ್ವಹಣೆ, ಮಣ್ಣು ಕಾಂಪ್ಯಾಕ್ಷನ್ ಮತ್ತು ಅರ್ಥ್ ಮೂವಿಂಗ್ ಎಕ್ವಿಪ್‌ಮೆಂಟ್‌ನಲ್ಲಿ ತನ್ನ ಸುಸ್ಥಿರ ಪೋರ್ಟ್ಫೋಲಿಯೋವನ್ನು ಪ್ರದರ್ಶಿಸಿದೆ. ಯೆಲ್ಲೋ ಲೈನ್ ಸಿರೀಸ್ ಅನ್ನು ಎಲ್ಲ ಪ್ರಮಾಣಿತ ಅಪ್ಲಿಕೇಶನ್‌ಗಳಿಗೆ ವಿನ್ಯಾಸ ಮಾಡಲಾಗಿದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಆಕರ್ಷಿಸುತ್ತದೆ.

ಫ್ಲೀಟ್ ಮಾಲೀಕರು ಮತ್ತು ಕಾರ್ಪೊರೇಟ್ ಗ್ರಾಹಕರ ಅಧಿಕ ಕಾರ್ಯಕ್ಷಮತೆ ಬೇಡಿಕೆಗಳನ್ನು ಪೂರೈಸುವುದಕ್ಕೆ ವೈಟ್ ಲೈನ್ ಸಿರೀಸ್ ಗುರಿ ಹೊಂದಿದೆ.

ಕ್ರೇನ್ ವಿಭಾಗದಲ್ಲಿನ ಪ್ರಾಡಕ್ಟ್ನಲ್ಲಿ ಹೊಸದಾಗಿ ಪರಿಚಯಿಸಿದ
75 HP VECV EA ಅಗಿ ಇಂಜಿನ್ ಸಹಿತ F5 ಫೈಟರ್, ಹೊಸದಾಗಿ ಸೇರಿಸಿದ ಪಿಕ್ ಆಂಡ್ ಕ್ಯಾರಿ ಕ್ರೇನ್, 18 ಟನ್ ಕ್ಲಾಸ್‌ನಲ್ಲಿ ಹೈಡ್ರಾ 18, ಪಿಕ್ ಆಂಡ್ ಕ್ಯಾರಿ ಸೇಫ್ ಸೆಗ್ಮೆಂಟ್‌ನಲ್ಲಿ ಇನ್ನೊಂದು ಹೊಸ ಪರಿಚಯ 35Tಕ್ಲಾಸ್‌ನಲ್ಲಿನ ಈ೩೫ ಕ್ರೇನ್ ಒಳಗೊಂಡಿದೆ.

ಬ್ಯಾಕ್‌ಹೋಯ್ ಸೆಗ್ಮೆಂಟ್‌ನಲ್ಲಿ, ಹೊಸ ಬ್ಯಾಕ್‌ಹೋಯ್ ಲೋಡರ್ ಜಂಗ್ಲಿ ಊಖಿ ಬಿಡುಗಡೆ ಮಾಡಲಾಗಿದ್ದು, ಇದು ವಿಶ್ವಾಸಾರ್ಹ ಟರ್ಬೋಚಾರ್ಜ್ ಮಾಡುವ ಅಧಿಕ ಟಾರ್ಕ್ ಡೀಸೆಲ್ ಇಂಜಿನ್ ಹೊಂದಿದೆ ಮತ್ತು ವಿಶ್ವಾಸಾರ್ಹ ಘಿಖಿ ೧೬೧೦ ಅಧಿಕ ಕಾರ್ಯಕ್ಷಮತೆ ಹೊಂದಿದ್ದು, ದೊಡ್ಡ ಬಕೆಟ್‌ಗಳು ಮತ್ತು ವರ್ಗದಲ್ಲೇ ಉತ್ತಮ ಡಿಗ್ ಡೆಪ್ತ್ ಮತ್ತು ಡಂಪ್ ಹೈಟ್ ಅನ್ನು ಹೊಂದಿದೆ.

ರೋಡ್ ಮಶಿನರಿಯಲ್ಲಿ, ವೈಟ್‌ಲೈನ್ ಸಿರೀಸ್ ಸಾಯಿಲ್ ಕಂಪ್ಯಾಕ್ಟರ್ ೧೧ಟಿ ಕ್ಲಾಸ್‌ನಲ್ಲಿ ೫೦೯೦ ಮತ್ತು ಮಿನಿ ರೋಲರ್ ೫೦೩೦ ಮತ್ತು ೧೦ ಟನ್ ಕ್ಲಾಸ್‌ನಲ್ಲಿ ಹೊಸ ಬಿಡುಗಡೆ ಮೋಟಾರ್ ಗ್ರೇಡರ್ ೫೮೫ ಅನ್ನು ಎಸ್ಕಾರ್ಟ್ಸ್ ಪ್ರದರ್ಶಿಸುತ್ತಿದೆ.

ಉತ್ಪಾದಕತೆ ಮತ್ತು ಕಾರ್ಯನಿರ್ವಹಣೆ ದಕ್ಷತೆಯ ಜೊತೆಗೆ ಸುರಕ್ಷತೆಯು ಪ್ರಮುಖ ಅಂಶವಾಗಿದ್ದು, ಎಸ್ಕಾರ್ಟ್ಸ್ನ ಎಲ್ಲ ನಿರ್ಮಾಣ ಮತ್ತು ಸಾಮಗ್ರಿ ನಿರ್ವಹಣೆ ಸಲಕರಣೆಯು ಆಧರಿಸಿದೆ. ವಿಭಿನ್ನ ಟನ್ನೇಜ್ ಸೆಗ್ಮೆಮಟ್‌ಗಳಲ್ಲಿ ಕ್ರೇನ್‌ಗಳು ಮತ್ತು ಸೂಕ್ತ ಉತ್ಪನ್ನ ಶ್ರೇಣಿಗಳಿಗೆ ಪ್ಲಾಟ್‌ಫಾರಂ ಅನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಇಸಿಇ ಹೊಂದಿದೆ.

ಸಿಇ – ಎಸ್ಕಾರ್ಟ್ಸ್ ಕನ್‌ಸ್ಟçಕ್ಷನ್ ಎಕ್ವಿಪ್‌ಮೆಂಟ್ ಸಂಜೀವ್ ಬಜಾಜ್ ಪ್ರಕಾರ “ಗ್ರಾಹಕರಿಗೆ ಹೆಚ್ಚು ವಾಣಿಜ್ಯಿಕ ನಿರ್ವಹಣೆ ವೆಚ್ಚವನ್ನು ನೀಡುವ ವಿವಿಧ ವೈಶಿಷ್ಟ÷್ಯಗಳು, ಕಡಿಮೆ ಇಂಧನ ಬಳಕೆಯೊಂದಿಗೆ ಪ್ರಾಡಕ್ಟ್ಗಳನ್ನು ಒದಗಿಸುವ ಮೂಲಕ ‘ಸರಿಯಾದ ಗ್ರಾಹಕರಿಗೆ ಸರಿಯಾದ ಉತ್ಪನ್ನಗಳನ್ನು’ ಒದಗಿಸುವುದು ನಮ್ಮ ಧ್ಯೇಯವಾಗಿದೆ. ನಿರ್ಮಾಣ ಮತ್ತು ಸಾಮಗ್ರಿ ನಿರ್ವಹಣೆ ಸಲಕರಣೆ ಉದ್ಯಮದಲ್ಲಿ ಸುಸ್ಥಿರ, ಸುರಕ್ಷಿತ, ಸುಧಾರಿತ ತಂತ್ರಜ್ಞಾನ ಸಲಕರಣೆ ಮತ್ತು ಹೆಚ್ಚು ಉತ್ಪಾದಕ ಪರಿಹಾರಗಳಿಗೆ ಬೇಡಿಕೆಯು ನಿರಂತರವಾಗಿ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮತ್ತು ನಮ್ಮ ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಎಸ್ಕಾರ್ಟ್ಸ್ ಈಗಾಗಲೇ ಸಾಗಿದೆ. ನಾವು ಈಗಾಗಲೇ ಬ್ಯಾಕ್‌ಹೋಯ್ ಲೋಡರ್‌ಗಳು, ಕಾಂಪ್ಯಾಕ್ಟರ್‌ಗಳು ಮತ್ತು ಕ್ರೇನ್‌ಗಳ ವಿಭಾಗದಲ್ಲಿದ್ದೇವೆ ಮತ್ತು ನಮ್ಮ ಕಾಂಪ್ಯಾಕ್ಟರ್ ಸೆಗ್ಮೆಂಟ್ ಅನ್ನು ಪೂರೈಸಲು ಮೋಟಾರ್ ಗ್ರೇಡರ್ ಅನ್ನು ಸೇರಿಸುತ್ತಿದ್ದೇವೆ. ನಮ್ಮ ಪ್ರಾಡಕ್ಟ್ಗಳನ್ನು ಹೆಚ್ಚು ಡಿಜಿಟಲೀಕರಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ವಿಮಾನ ನಿಲ್ದಾಣ ಉನ್ನತೀಕರಣ, ಭಾರತ್ ಮಾಲಾ, ಬುಲೆಟ್ ಟ್ರೇನ್‌ಗಳು, ಬಂದರುಗಳು ಮತ್ತು ಸೇತುವೆಗಳು ಸೇರಿದಂತೆ ಮತ್ತು ಸ್ಟೀಲ್, ಸಿಮೆಂಟ್, ಗಣಿಗಾರಿಕೆ ಮತ್ತು ನೀರಾವರಿ ಇತ್ಯಾದಿ ಉದ್ಯಮಗಳಲ್ಲಿ ಸರ್ಕಾರದ ಜೊತೆಗೆ ಎಸ್ಕಾರ್ಟ್ಸ್ ಹೆಮ್ಮೆಯ ಪಾಲುದಾರನಾಗಿದೆ.

ಅವರು ಮುಂದುವರಿದು ಹೇಳುವುದೇನೆಂದರೆ “ಸುಸ್ಥಿರತೆ, ಸುರಕ್ಷತೆ, ಲಿಫ್ಟಿಂಗ್ ಸಾಮರ್ಥ್ಯಗಳಲ್ಲಿನ ಮಿತಿ, ತಲುಪುವಿಕೆ, ವೈವಿಧ್ಯತೆ ಮತ್ತು ಕ್ರೇನ್ ವಿಭಾಗದಲ್ಲಿ ಅಕ್ಸೆಸರಿ ವಿಚಾರದಲ್ಲಿ ನಮ್ಮ ಗ್ರಾಹಕರ ಕಾಳಜಿಯನ್ನು ಗುರುತಿಸುವ ಮೂಲಕ, ಈ ಸಮಸ್ಯೆಗಳನ್ನು ಪರಿಹರಿಸುವ ಮತ್ತು ವಿನ್ಯಾಸ ಬದಲಾವಣೆಯಿಂದಾಗಿ ಸಮಸ್ಯೆ ಹೆಚ್ಚಳವಾಗದಂಹತ ಕ್ರೇನ್ ಪ್ಲಾಟ್‌ಫಾರಂ ನಿರ್ಮಾಣ ಮಾಡುವ ಉದ್ದೇಶವನ್ನು ಎಸ್ಕಾರ್ಟ್ಸ್ ಹೊಂದಿದೆ.”ಎಕ್ಸ್ಕಾನ್‌ನಲ್ಲಿ ಪ್ರಸ್ತುತ ಉತ್ಪನ್ನಗಳು ಮತ್ತು ಹೊಸ ನವೀನ ಸಲಕರಣೆಯ ಇತ್ತೀಚಿನ ಆವೃತ್ತಿಯನ್ನು ಇಸಿಇ ಪ್ರದರ್ಶಿಸಿದೆ.

ಸಂಪಾದಕರಿಗೆ ಟಿಪ್ಪಣಿ

ಎಸ್ಕಾರ್ಟ್ಸ್ ಗ್ರೂಪ್ ಎಂಬುದು ಕೃಷಿ ಸಲಕರಣೆ, ಸಾಮಗ್ರಿ ನಿರ್ವಹಣೆ, ನಿರ್ಮಾಣ ಸಲಕರಣೆ ಮತ್ತು ರೈಲ್ವೆ ಸಲಕರಣೆಯ ಅಧಿಕ ಪ್ರಗತಿಯ ವಲಯಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಭಾರತದ ಪ್ರಮುಖ ಇಂಜಿನಿಯರಿಂಗ್ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ಸಮೂಹವು ತನ್ನ ಏಳು ದಶಕಗಳ ಅಸ್ತಿತ್ವದಲ್ಲಿ ಉತ್ಪನ್ನ ಮತ್ತು ಪ್ರಕ್ರಿಯೆ ಅನ್ವೇಷಣೆಗಳ ಮೂಲಕ ೫ ಮಿಲಿಯನ್‌ಗೂ ಹೆಚ್ಚು ಗ್ರಾಹಕರ ವಿಶ್ವಾಸವನ್ನು ಗಳಿಸಿದೆ.

ಕೃಷಿ ಯಾಂತ್ರೀಕರಣ, ರೈಲ್ವೆ ತಂತ್ರಜ್ಞಾನದ ಆಧುನೀಕರಣ ಮತ್ತು ಭಾರತೀಯ ನಿರ್ಮಾಣ ಉದ್ಯಮದ ರೂಪಾಂತರದಲ್ಲಿ ಕ್ರಾಂತಿ ಮಾಡುವ ಮೂಲಕ ಗ್ರಾಮೀಣ ಮತ್ತು ನಗರ ಭಾರತದ ಜೀವನವನ್ನು ಬದಲಾವಣೆ ಮಾಡುವ ಧ್ಯೇಯವನ್ನು ಎಸ್ಕಾರ್ಟ್ಸ್ ಹೊಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version