ಕ್ರೀಡೆ
ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಕುಸ್ತಿಪಟುಗಳಿಗೆ 1 ಕೋಟಿ 28 ಲಕ್ಷ ರೂಪಾಯಿ ಬಿಡುಗಡೆ
ಸುದ್ದಿಗಳು ಡೆಸ್ಕ್ : ಮಂಗೋಲಿಯಾದಲ್ಲಿ ನಾಳೆಯಿಂದ ಆರಂಭವಾಗಲಿರುವ ಹಿರಿಯರ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿರುವ 30 ಕುಸ್ತಿಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ 1 ಕೋಟಿ 28 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.
ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ವಿಭಾಗದಲ್ಲಿ 20ಮಂದಿ ಪುರುಷರ ತಂಡ ಪಾಲ್ಗೊಳ್ಳುತ್ತಿದ್ದು, 10 ಮಂದಿ ಮಹಿಳೆಯರು ಟೀಮ್ ಇವೆಂಟ್ನಲ್ಲಿ ಭಾಗವಹಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ನಲ್ಲಿ ಪದಕ ಗೆದ್ದ ರವಿ ದಹಿಯಾ ಹಾಗೂ ಭಜರಂಗ್ ಪುನಿಯಾ ಅವರೂ ಸಹ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
.@Media_SAI sanctions Rs 1.28 Crore for the participation of 30 Wrestlers at Sr. Asian Championship in Mongolia
Read here: https://t.co/znLANcjq52
— PIB India (@PIB_India) April 18, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243