ದಿನದ ಸುದ್ದಿ

ಗದಗ | ಒಂಬತ್ತು ಸೋಂಕಿತರು ಗುಣಮುಖ

Published

on

ಸುದ್ದಿದಿನ,ಗದಗ : ಕೋವಿಡ್-19 ಸೋಂಕಿನಿಂದ ಗುಣಮುಖರಾದ ಎಂಟು ವರ್ಷದ ಮಗು ಸೇರಿದಂತೆ ಒಟ್ಟು 9 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ಪಿ. 970, 62 ವರ್ಷದ ಪುರುಷ ಗುಜರಾತದಿಂದ ಹಾಗೂ ಪಿ. 1566 , 32 ವರ್ಷದ ಪುರುಷ ಮುಂಬಯಿದಿಂದ ಮರಳಿದ್ದರು ಅವರಿಬ್ಬರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿ ಸೋಂಕು ದೃಡಪಟ್ಟಿತ್ತು. ಅವರನ್ನು ಕ್ರಮವಾಗಿ ಮೇ.14 ಹಾಗೂ ಮೇ.21 ರಿಂದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಗದಿತ ಕೋವಿಡ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.

ಪಿ-913 ಇವರ ದ್ವೀತಿಯ ಸಂಪರ್ಕಿತರಾಗಿದ್ದ, ಪಿ. 1932, 50 ವರ್ಷದ ಮಹಿಳೆ, ಪಿ. 1933, 19 ವರ್ಷದ ಮಹಿಳೆ, ಪಿ. 1934, 22 ವರ್ಷದ ಮಹಿಳೆ, ಪಿ. 1935, 18 ವರ್ಷದ ಪುರುಷ, ಪಿ. 1936, 48 ವರ್ಷದ ಪುರುಷ, ಪಿ. 1937, 8 ವರ್ಷದ ಮಹಿಳೆ, ಪಿ. 1938, 21 ವರ್ಷದ ಪುರುಷ ಇವರಿಗೆ ಕೊವಿಡ – 19 ಪರೀಕ್ಷೆಗೋಳಪಡಿಸಿ ಸೊಂಕು ಇರುವದೆಂದು ದೃಡಪಟ್ಟಿದ್ದು ಅವರನ್ನು ಮೇ.23 ರಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ ಪ್ರತ್ಯೆಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಿಲಾಗಿತ್ತು.

9 ಜನರನ್ನು ಚಿಕಿತ್ಸೆಯ ನಂತರದಲ್ಲಿ ಜೂ.04 ರಂದು ಜಿಮ್ಸ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿ 9 ಜನರ ಗಂಟಲು ಮಾದರಿಯು ನೆಗಟಿವ್ ಆಗಿದ್ದರಿಂದ ಗುಣಮುಖರಾಗಿದ್ದಾರೆ ಎಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 9 ಜನರಿಗೂ ಸಹ ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕ ನಿಗಾಹದಲ್ಲಿ ಇರಲು ತಿಳಿಸಿದ್ದು ಅವರ ಕುರಿತು ಆರೋಗ್ಯ ಕಾರ್ಯಕರ್ತರು ನಿರಂತರ ನಿಗಾವಹಿಸಲಿದ್ದಾರೆ.

ಅವರುಗಳಿಗೆ ಚಿಕಿತ್ಸೆ ನೀಡಿದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಎಲ್ಲಾ ವೈದ್ಯರಿಗೂ, ಅರೇ ವೈದ್ಯಕೀಯ ಸಿಬ್ಬಂದಿಗಳಿಗೂ ಜಿಲ್ಲೆಯ ಕೊವಿಡ್-19ರ ಸೋಂಕು ಚಿಕಿತ್ಸೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾರ್ಗದರ್ಶನ ನೀಡುತ್ತಿರುವ ಸಚಿವರುಗಳಾದ ಸಿ. ಸಿ. ಪಾಟೀಲ, ಡಾ. ಸುಧಾಕರ, ಶ್ರೀರಾಮುಲು, ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು. ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ನಿರ್ದೇಶಕರಿಗೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಸಹಕಾರ ನೀಡುತ್ತಿರುವ ಇತರ ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಡಾ. ಪಿ.ಎಸ್. ಭೂಸರಡ್ಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version