ದಿನದ ಸುದ್ದಿ

ಗದಗ | ಚಿಕಿತ್ಸೆಯಲ್ಲಿದ್ದ 44 ವರ್ಷದ ಪುರುಷ ಸಾವು

Published

on

ಸುದ್ದಿದಿನ,ಗದಗ : ಮದುಮೇಹ ಮತ್ತು ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ 44 ವರ್ಷದ ಲಕ್ಕುಂಡಿ ಗ್ರಾಮದ ಪುರುಷ ಗದಗ ಸಿಎಸ್‍ಐ ಆಸ್ಪತ್ರೆಗೆ ಮೇ.27 ರಂದು ದಾಖಲಾಗಿದ್ದರು, ಜೂನ್ 1 ರಂದು ಹೆಚ್ಚಿನ ಚಿಕಿತ್ಸೆಗಾಗಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದರು.

ಅವರು ಬುಧವಾರ ಮೃತರಾಗಿದ್ದು, ಅವರಿಗೆ ಕೊವಿಡ್-19 ಸೊಂಕು ಇರುವುದು ಇಂದು ಬಂದಿರುವ ವರದಿಯಿಂದ ಧೃಡಪಟ್ಟಿದೆ. ಮೃತರ ಅಂತ್ಯ ಸಂಸ್ಕಾರವು ಕೊವಿಡ್-19 ವಿಪತ್ತು ನಿರ್ವಹಣೆ ಮಾರ್ಗ ಸೂಚಿ ರೀತ್ಯ ನಡೆಯಲಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version