ದಿನದ ಸುದ್ದಿ

ಧಾರ್ಮಿಕ ಪುರುಷ ಶ್ರೀ ಗಾದ್ರಿಪಾಲ ನಾಯಕ ಸಮಾಧಿ ವಿರೂಪಗೊಳಿಸಿದ ಕಿಡಿಗೇಡಿಗಳು : ಕಾನೂನು ಕ್ರಮಕ್ಕೆ ಒತ್ತಾಯಿಸಿ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ತಹಶಿಲ್ದಾರರಿಗೆ ಮನವಿ

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಮಿಂಚೇರಿ ಕಾಯ್ದಿಟ್ಟ ಅರಣ್ಯ ಹಾಗೂ ಗಾದ್ರಿಮಲೆ ಗುಡ್ಡಬೆಟ್ಟದಲ್ಲಿ ನಾಯಕ ಪಂಗಡ ಮ್ಯಾಸ ನಾಯಕ ಮ್ಯಾಸ ಬೇಡರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಪುರುಷನಾದ ಶ್ರೀ ಗಾದ್ರಿಪಾಲ ನಾಯಕ ಸಮಾಧಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿ ಮಾ.15 ಸೋಮವಾರದಂದು ಮ್ಯಾಸ ಬೇಡ( ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ (ರಿ) ಜಗಳೂರು ತಾಲ್ಲೂಕು ಘಟಕದ ವತಿಯಿಂದ ಮಾನ್ಯ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ | ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವವರ ವಿರುದ್ಧ ದೂರು ನೀಡಲು ಈ ನಂಬರ್ ಗೆ ಕಾಲ್ ಮಾಡಿ..!

ಈ ಸಂದರ್ಭದಲ್ಲಿ ಸಮಿತಿ ಸಂಚಾಲಕರಾದ ಟಿ.ಪಿ.ಮಂಜುನಾಥ್, ರಾಜಣ್ಣ ನಿವೃತ್ತ ಉಪನ್ಯಾಸಕರು ಹನುಮಂತಾಪುರ, ತಿಮ್ಮರಾಯಪ್ಪ ಲಿಂಗಣ್ಣನಹಳ್ಳಿ, ಸಂಚಾಲಕರು, ಎಂ.ಕೆ.ಬೋಸಪ್ಪ,ಜೆ.ಟಿ.ರಾಜಣ್ಣ , ಪಾಪಣ್ಣ ಮೀನಿಗರಹಳ್ಳಿ,ತಿಪ್ಪೇಸ್ವಾಮಿ, ಮಂಜುನಾಥ ಗಿಡ್ಡನಕಟ್ಟೆ, ರಮೇಶ್ ಕೆ.ಸಿ, ಅಜ್ಜಯ್ಯ,ಕೆಂಗಪ್ಪ, ಸತ್ಯಪ್ಪ,ಬಸವರಾಜ, ನಾಗರಾಜ,ಗೌಡಗೊಂಡನಹಳ್ಳಿ ಬಸವರಾಜ ಮರಿಕಟ್ಟೆ , ಮಹೇಶಪ್ಪ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version