ದಿನದ ಸುದ್ದಿ
ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ ; ಕನಸು ನನಸಾದ ಸಂಭ್ರಮಕ್ಕೆ ಕಾರಣವಾದ ಸರಕಾರಕ್ಕೆ ಅಭಿನಂದನೆ : ಎಂ.ಜಿ.ಶಶಿಕಲಾಮೂರ್ತಿ
ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ ಕುರಿತು ಅಧಿಕೃತ ಆದೇಶ ಹೊರಡಿಸಿದ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರಿಗೆ ಗಾನಯೋಗಿ ಸಂಗೀತ ಪರಿಷತ್ ಗದಗ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಕಲಾ ವಿಕಾಸ ಪರಿಷತ್ ಗದಗ ಹಾಗೂ ಸರ್ವ ಪದಾಧಿಕಾರಿಗಳ ಪರವಾಗಿ ಹಾರ್ದಿಕ ಅಭಿನಂದನೆಗಳು.
ಮಾನ್ಯ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ 14-03-2000ನೇ ಇಸ್ವಿಯಲ್ಲಿ ಕಲಾ ವಿಕಾಸ ಪರಿಷತ್ ನ ಕಾರ್ಯಾಧ್ಯಕ್ಷನಾಗಿ ಮನವಿ ಸಲ್ಲಿಸಿದ್ದೇವು ನೆನೆಗುದಿಗೆ ಬಿದ್ದ ನಮ್ಮ ಬೇಡಿಕೆಗೆ ನಾವು ಖುದ್ದಾಗಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ದಿನವೇ 20ವರ್ಷದ ಬೇಡಿಕೆಗೆ ಕೇವಲ 20 ನಿಮಿಷದಲ್ಲಿ ಪ್ರಶಸ್ತಿ ಸ್ಥಾಪನೆಗೆ ಚಾಲನೆ ನೀಡಿದ್ದಕ್ಕೆ ಮತ್ತು ಈ ಪ್ರಶಸ್ತಿ ಅಸ್ತಿತ್ವಕ್ಕೆ ಕ್ರಮ ಕೈಗೊಳ್ಳಲು ಮತ್ತು ಪ್ರಾಸ್ತಾವನೆ ಮಂಡಿಸಲು ಸೂಚಿಸಿ ಪ್ರಶಸ್ತಿ ಸ್ಥಾಪನೆಗೆ ಮುನ್ನುಡಿ ಬರೆದ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರಿಗೆ ಮೊಟ್ಟಮೊದಲು ಅಭಿನಂದಿಸಲೇಬೇಕು.
ನಮ್ಮ ಆಶಯದಂತೆ 10 ಲಕ್ಷ ನಗದು ಸ್ಮರಣಿಕೆ ನೀಡಿ ರಾಷ್ಟ್ರೀಯ ಮಟ್ಟದ ಉತ್ತರಾಧಿ ಮತ್ತು ದಕ್ಷಿಣಾದಿ ಗಾಯಕರಿಗೆ ಈ ಪ್ರಶಸ್ತಿ ನೀಡಲು ಕೇಳಿಕೊಳ್ಳಲಾಗಿತ್ತು. ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಉಭಯ ಗಾಯನದ ಮೇಲೆ ಸಮಾನ ಪ್ರಭುತ್ವ ಹೊಂದಿದ್ದರು ಈ ಕಾರಣಕ್ಕೆ ಒಂದು ಬಾರಿ ಉತ್ತರಾದಿ ಸಂಗೀತ ಕಲಾವಿದರಿಗೆ ಒಂದು ಬಾರಿ ದಕ್ಷಿಣಾದಿ ಸಂಗೀತ ಕಲಾವಿದರಿಗೆ ನೀಡಲು ಮನವಿ ಮಾಡಿಕೊಳ್ಳಲಾಗಿತ್ತು. ಮರೆತು ಹೋದ ವಿಷಯಕ್ಕೆ 31-12-2020 ರಂದು ಮನವಿ ಪತ್ರ ಅಂಚೆಯ ಮೂಲಕ ಮುಖ್ಯ ಮಣತ್ರಿಯವರಿಗೆ ಕಳಿಸಿಕೊಟ್ಟು ಅಂದಿನ ಗೃಹ ಸಚಿವರಾಗಿದ್ದ ಮಾನ್ಯ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಪತ್ರದ ಪ್ರತಿ ನೀಡಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಮನ ಒಲಿಸಲು ವಿನಂತಿಸಿಕೊಂಡು ಹೋರಾಟಕ್ಕೆ ಚಾಲನೆ ನೀಡಲಾಯಿತು.
ನಮ್ಮ ಜೊತೆ ಗುರು ಬಂಧು ಕಲಾವಿದ ಸದಾಶಿವ ಪಾಟೀಲ ಕೊಪ್ಪಳ, ಪ್ರೊ. ಚಂದ್ರಶೇಖರ ವಸ್ತ್ರದ, ಮೊದಲಾದವರೊಂದಿಗೆ ಈ ಹೋರಾಟಕ್ಕೆ ನಿರಂತರವಾಗಿ ಬೆಂಬಲಕ್ಕೆ ನಿಂತವರು ಬಹುಜನರಾಗಿದ್ದರೂ ಕೂಡಾ, ಆತ್ಮೀಯರಾದ ಸಹೋದರ ಹೇಮರಾಜ ಶಾಸ್ತ್ರಿ ಹೇಡಿಗ್ಗೊಂಡ ಹುಬ್ಬಳ್ಳಿ, ಕೆಂಭಾವಿ ಶ್ರೀಗಳು, ಎಂ. ಜಿ. ಶಶಿಕಲಾ ಮೂರ್ತಿ ದಾವಣಗೆರೆ, ಮಂಜುಶ್ರೀ ಹಾವಣ್ಣವರ ಬೆಳಗಾವಿ ಇವರೆಲ್ಲರೂ ತಮ್ಮದೇ ಯಾದ ಸೇವೆ ಸಲ್ಲಿಸಿದ್ದಾರೆ. ನಮ್ಮ ಹೋರಾಟಕ್ಕೆ ಆಶೀರ್ವದಿಸಿ ಪೂಜ್ಯ ಕಲ್ಲಯ್ಯ ಅಜ್ಜನವರಿಗೆ, ಸಾಣೇಹಳ್ಳಿ ಶ್ರೀಗಳಾದಿಯಾಗಿ ಅನೇಕ ಸ್ವಾಮಿಜೀಗಳು ಅನೇಕ ಸಂದರ್ಭದಲ್ಲಿ ನಮ್ಮ ಬೇಡಿಕೆಗಳಿಗೆ ಬೆಂಬಲಿಸಿ ಸರಕಾರಕ್ಕೆ ಒತ್ತಾಯಿಸಿದ್ದಾರೆ ಅವರಿಗೂ ನಾವು ಪ್ರಣಾಮಗಳು ಸಲ್ಲಿಸುತ್ತಿದ್ದೇವೆ.
ಈ ಪ್ರಶಸ್ತಿಗೆ ಮೊದಲು ಮನವಿಸಲ್ಲಿಸಿದ್ದ ಕಲಾವಿಕಾಸ ಪರಿಷತ್ ಗದಗ, ಗಾನಯೋಗಿ ಸಂಗೀತ ಪರಿಷತ್ ಗದಗ ಮತ್ತು ಪುಟ್ಟರಾಜ ಸೇವಾ ಸಮಿತಿ ಗದಗನ ತಾಲೂಕಾ ಜಿಲ್ಲಾ ಘಟಕಗಳ ಪದಾಧಿಕಾರಿಗಳಿಗೆ ಮತ್ತು ಪರೋಕ್ಷವಾಗಿ ಅಪರೋಕ್ಷವಾಗಿ ಬೆಂಬಲಿಸಿದ ಸಂಘ ಸಂಸ್ಥೆಗಳಿಗೆ ಮತ್ತು ವೀರೇಶ್ವರ ಪುಣ್ಯಾಶ್ರಮದ ಗುರು ಬಂಧುಗಳಿಗೆ ಧನ್ಯವಾದಗಳು. ನಾವು ಸಲ್ಲಿಸಿದ ಮನವಿಗಳ ಕುರಿತು ಸಾರ್ವಜನಿಕರಿಗೆ ತಲುಪಿಸಿದ ರಾಜ್ಯದ ಎಲ್ಲಾ ಪತ್ರಿಕೆಗಳಿಗೆ ಧನ್ಯವಾದ ಹೇಳುತ್ತೇವೆ.
ಇದೆ ಮನವಿಯೊಂದಿಗೆ ಶಿವಯೋಗಿ ಪುಟ್ಟರಾಜ ಗುರುಗಳ ಹುಟ್ಟು ಹಬ್ಬವನ್ನು ಸರಕಾರವೇ ಆಚರಿಸ ಬೇಕು ಮತ್ತು ಗುರು ಕುಮಾರ ಪಂಚಾಕ್ಷರಿ ಟ್ರಸ್ಟ್ ಸ್ಥಾಪನೆ ಕುರಿತು ಕೂಡಾ ಮನವಿ ಮಾಡಲಾಗಿತ್ತು. ಆದರೆ ಅವುಗಳ ಕುರಿತು ಮಾಹಿತಿ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಿನಾಂಕ 10-08-2021ರಂದು (ಪತ್ರ ಸಂಖ್ಯೆ ಡಿಕೆಸಿ-11031/7/2021) ರಚಿಸಿ ಸರಕಾರಕ್ಕೆ ಸಲ್ಲಿಸಿದ ಮಾರ್ಗ ಸೂಚಿಯಲ್ಲಿ ಶಿವಯೋಗಿ ಪುಟ್ಟರಾಜರ ಜಯಂತಿ ಕುರಿತು ಪ್ರಸ್ತಾಪಿಸಲಾಗಿದೆ ಆದರೆ ಅಧಿಕೃತ ಘೋಷಣೆ ಮಾಡಿರುವುದಿಲ್ಲ ಇದಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ.
| ಎಂ.ಜಿ. ಶಶಿಕಲಾಮೂರ್ತಿ ನಲ್ಕುದುರೆ: 9740207007
ರಾಜ್ಯ ಸಂಚಾಲಕಿ
ಗಾನಯೋಗಿ ಸಂಗೀತ ಪರಿಷತ್ ಗದಗ
ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಗದಗ ಮತ್ತು ಕಲಾ ವಿಕಾಸ ಪರಿಷತ್ ಗದಗ
ಸುದ್ದಿದಿನ.ಕಾಂ|ವಾಟ್ಸಾಪ್|9980346243