/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಮಂಡ್ಯ : ‘ಗಾಂಧಿ ಗ್ರಾಮ ಪುರಸ್ಕಾರ’ ಸ್ವೀಕರಿಸಿದ ಮುತ್ತೇಗೆರೆ ಗ್ರಾಮ ಪಂಚಾಯತಿ

Published

on

ಸುದ್ದಿದಿನ,ಮಂಡ್ಯ : ಜಿಲ್ಲೆಯ ಬಸರಾಳು ಹೋಬಳಿಯ ಮುತ್ತೇಗೆರೆ ಗ್ರಾಮ ಪಂಚಾಯಿತಿಯು 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು( ಅ.2ರಂದು)ನಿನ್ನೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುತ್ತೇಗೆರೆ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಸರಕಾರಿ ಅನುದಾನಗಳ ಸಮರ್ಪಕ ಬಳಕೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನೈರ್ಮಲ್ಯಕ್ಕೆ ಮೊದಲ ಆದ್ಯತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಧಿಸಿದ ಪ್ರಗತಿ ಜಲ ಮರುಪೂರಣಕ್ಕೆ ಆದ್ಯತೆ ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.

ಶೇಕಡ 90ರಷ್ಟು ತೆರಿಗೆ ವಸೂಲಾತಿ ನೀರಿನ ಬಿಲ್ ವಸೂಲಾತಿ ಹಂತ ಹಂತವಾಗಿ ಸಮರ್ಪಕವಾಗಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹನ್ನೆರಡು ತಿಂಗಳು ನಿಯಮಾನುಸಾರ ಸಾಮಾನ್ಯ ಸಭೆಗಳನ್ನು ನಡೆಸಿ ಪಂಚತಂತ್ರಕ್ಕೆ ಅಳವಡಿಕೆ ಗ್ರಾಮ ಸಭೆ ಸ್ಥಾಯಿ ಸಮಿತಿ ಸಭೆ ಇತರೆ ಸಮಿತಿ ಸಭೆ ಶುಚಿತ್ವದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಮಹಿಳಾ ಗ್ರಾಮ ಸಭೆ ಸಾರ್ವಜನಿಕ ರ್ಯಾಲಿಗಳನ್ನು ನಡೆಸುವ ಮೂಲಕ ಪರಿಣಾಮಕಾರಿಯಾಗಿ ಮಾಡಲಾಗಿದೆ ಪ್ರತಿ ತಿಂಗಳು ಗ್ರಾಮದ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು ಸಮಾಲೋಚನಾ ಸಭೆಗಳನ್ನು ನಡೆಸುತ್ತಿರುವುದು ಗ್ರಾಮದ ಅಂಗವಿಕಲರಿಗೆ ಮಾಹಿತಿ ಗ್ರಾಮ ಪಂಚಾಯಿತಿ ಅನುದಾನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂಗವಿಕಲರಿಗೆ ಪ್ರತಿ ವರ್ಷ ವಿತರಿಸುವ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ.

ವಿವಿಧ ಕೌಶಲ್ಯಗಳಾದ ಜೇನು ಕೃಷಿ ತೋಟಗಾರಿಕೆ ಬಯೋಗ್ಯಾಸ್ ಮಾಹಿತಿ ಕಾನೂನು ಅರಿವು ಶಿಬಿರ ಹೈನುಗಾರಿಕೆ ಮಾಹಿತಿ ನೀರು ಮತ್ತು ನೈರ್ಮಲ್ಯ ಮಾಹಿತಿ ಕಟ್ಟಡ ಕಾರ್ಮಿಕರಿಗೆ ಮಾಹಿತಿ ಮತ್ತು ನೋಂದಣಿ ಕಾರ್ಡ್ ಇತರೆ ಯೋಜನೆಗಳ ಮಾಹಿತಿ ಮತ್ತು ಗುರುತಿನ ಚೀಟಿ ವಿತರಣೆ ಬಾಪೂಜಿ ನೂರು ಸೇವೆಗಳ ಅಡಿಯಲ್ಲಿ ಸಾರ್ವಜನಿಕರಿಗೆ ವಿವಿಧ ಸೇವೆಗಳು ನಾಗರಿಕ ಸನ್ನದು ಸಮರ್ಪಕವಾಗಿ ಅನುಷ್ಠಾನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮಾಹಿತಿ ಮಳೆಗಾಲದ ಮೊದಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳ ದುರಸ್ತಿ ಪೈಪ್ ಕಾಂಪೋಸ್ಟ್ ಅಳವಡಿಕೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಜನೋಪಯೋಗಿ ಪಂಚಾಯಿತಿ ಆಗಿ ಮೂಡಿ ಬಂದ ಹಿನ್ನೆಲೆಯಲ್ಲಿ ತಜ್ಞರ ಆಯ್ಕೆ ಸಮಿತಿ ಮುತ್ತೇಗೆರೆ ಗ್ರಾಮ ಪಂಚಾಯಿತಿಯನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಜಲ ಮರುಪೂರಣ ನೈರ್ಮಲ್ಯದ ಕುರಿತು ವಿವಿಧ ಕಾಮಗಾರಿಗಳ ಅನುಷ್ಠಾನ ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳ ಅಳವಡಿಕೆ ಮಾದರಿ ಸ್ಮಶಾನ ಅಭಿವೃದ್ಧಿ ಜೈವಿಕ ಇಂಧನ ನೆಡುತೋಪು ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ವಸತಿ ಯೋಜನೆಗಳ ಸಮರ್ಪಕ ಅನುಷ್ಠಾನ ಯುವಕ ಯುವತಿಯರಿಗೆ ಸ್ವ ಉದ್ಯೋಗದ ಬಗ್ಗೆ ತರಬೇತಿ ಪ್ರೋತ್ಸಾಹ ಹದಿನಾಲ್ಕು ನೇ ಹಣಕಾಸು ಅನುದಾನದ ಸಂಪೂರ್ಣ ವಿನಿಯೋಗ ಮಾಡಿಕೊಳ್ಳಲಾಗಿದೆ ಎಂದರು.

ಗ್ರಾಮಸ್ಥರ ಸಹಕಾರ ಸಂಘ ಸಂಸ್ಥೆಗಳ ಉತ್ತಮ ಸಹಕಾರ ಹಾಗೂ ಬೆಂಬಲ ಆಡಳಿತ ಮಂಡಳಿಯ ಉತ್ತಮ ಕಾರ್ಯದಿಂದಾಗಿ ಈ ಪ್ರಶಸ್ತಿ ಲಭಿಸಲು ಸಹಕಾರಿಯಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎಸ್.ರಾಮಕೃಷ್ಣ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version