ದಿನದ ಸುದ್ದಿ
ಗಾಂಧಿ ಜಯಂತಿ | ನಗರಗೆರೆಯಲ್ಲಿ ಗ್ರಾಮ ಪಂಚಾಯತ್ ಅದಾಲತ್ ಗೆ ಚಾಲನೆ
ಸುದ್ದಿದಿನ, ಮದ್ದೂರು : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಇಂದು ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯತ್ ಅದಾಲತ್ ಹಾಗೂ ಸಾರ್ವಜನಿಕರ ತಕರಾರು ವ್ಯಾಜ್ಯಗಳ ರಾಜಿ ಇತ್ಯರ್ಥ ಕಾರ್ಯಕ್ರಮದ ಚಾಲನೆ ನೀಡಲಾಯಿತು.ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಹುಲಿಗೆರೆಪುರ ಮಹದೇವು ಮಾತನಾಡಿ ಗ್ರಾಮ ಪಂಚಾಯಿತಿಯ ವತಿಯಿಂದ ಗ್ರಾಮ ಪಂಚಾಯಿತಿ ಅದಾಲತನ್ನು ಏರ್ಪಡಿಸಿರುವುದಾಗಿ ತಿಳಿಸಿದರು.
ರೈತರ ಹೊಲ ಗದ್ದೆಗಳಿಗೆ ರಸ್ತೆ ಕಲ್ಪಿಸುವ ವ್ಯವಸ್ಥೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಿವೇಶನ ಮನೆ ಕಟ್ಟಡಗಳ ವಿಚಾರವಾಗಿ ತಕರಾರು ವ್ಯಾಜ್ಯಗಳಿದ್ದು ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿರುವ ಇನ್ನೂ ಇತ್ಯರ್ಥವಾಗದ ಸಮಸ್ಯೆಗಳನ್ನು ಆಯಾ ಗ್ರಾಮದಲ್ಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡಂತೆ ಮತ್ತು ಆಯಾ ಗ್ರಾಮದ ಹಿರಿಯರು ಯಜಮಾನರುಗಳ ಸಲಹೆ ಪಡೆದು ಉಭಯ ಪಾರ್ಟಿಗಳ ತಕರಾರುಗಳನ್ನು ಕೇಳಿ ಗ್ರಾಮದಲ್ಲಿ ರಾಜೀ ಸಂಧಾನ ಮಾಡಲು ಅದಾಲತ್ ನಡೆಸುತ್ತಿರುವುದಾಗಿ ತಿಳಿಸಿದರು.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಹಾಗೂ ಪರಿಷ್ಟ ಜಾತಿ ಪರಿಷ್ಟ ಪಂಗಡದ ಜನಾಂಗದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ
ಉಪಾಧ್ಯಕ್ಷರಾದ ರೇಣುಕಮ್ಮ ಸದಸ್ಯರಾದ ಶಿವಚರಣ್ ರುದ್ರಯ್ಯ ಸಿದ್ದರಾಜು ಗೌರಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಕುಮಾರ್ ಸಂತೋಷ್ ಕುಮಾರ್ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರಾದ ಶ್ರೀ ನ.ಲಿ. ಕೃಷ್ಣ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401