ದಿನದ ಸುದ್ದಿ
ತೆಂಗಿನಕಾಯಿಯಲ್ಲಿ ಮೊಳಕೆಯೊಡೆದ ಗಣಪ..!
ಸುದ್ದಿದಿನ ಡೆಸ್ಕ್ : ಇಂದು ಗಣೇಶನ ಹಬ್ಬ ದೇಶದಾದ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಭಕ್ತ ಸಮೂಹ ಈಗಾಗಲೇ ಗಣೇಶನನ್ನು ಪ್ರತಿಷ್ಠಾಪಿಸಿ ಸಂತಸದ ಭಾವದಲ್ಲಿದ್ದಾರೆ. ಆದರೆ ಗಣೇಶನ ಹಬ್ಬಕ್ಕೆ ಇಲ್ಲೊಂದು ಸಂಗತಿ ಅಚ್ಚರಿ ಮೂಡಿಸಿದೆ.
ಪೂಜೆಗಿಟ್ಟಿದ್ದ ತೆಂಗಿನಕಾಯಿಯಲ್ಲಿ ಗಣಪನ ಮೂರ್ತಿ ಮೊಳಕೆಯಾಕೃತಿಯಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರಿನ ನ್ಯಾಯಾಂಗ ಬಡಾವಣೆ ನಿವಾಸಿ ವೆಂಕಟೇಶ್ ಎಂಬುವರ ಮನೆಯಲ್ಲಿ ಮೊಳಕೆಯಾಕೃತಿಯ ಗಣಪ ಕಂಡಿದ್ದಾನೆ.