ದಿನದ ಸುದ್ದಿ
ಗಣಪತಿ ಕೂರಿಸಿದ್ದ ಮಂಟಪಕ್ಕೆ ಬೆಂಕಿ..!
ಸುದ್ದಿದಿನ ಡೆಸ್ಕ್ : ಗಣೇಶನ ಪ್ರತಿಷ್ಠಾಪಿಸಿದ್ದ ಮಂಟಪಕ್ಕೆ ಬೆಂಕಿ ಬಿದ್ದಿರುವ ಘಟನೆ ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ.
ಶ್ರೀ ವಿನಾಯಕ ಭಕ್ತ ಮಂಡಳಿಯವರಿ ಈ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಗಣೇಶನಿಗೆ ಪೂಜೆ ಮಾಡಿ ಆರತಿ ಬೆಳಗುವಾಗ ಆಕಸ್ಮಿಕವಾಗಿ ಬಿದ್ದ ಬೆಂಕಿಯ ಕಿಡಿಗಳಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮಂಟಪಕ್ಕೆ ಬೆಂಕಿ ಬಿದ್ದಿದೆ.
ಬೆಂಕಿಯ ಕೆನ್ನಾಲಿಗೆ ಗಣೇಶನ ಮೂರ್ತಿ, ಹಿಂಭಾಗದಲ್ಲಿ ಮಾಡಿದ್ದ ಅಲಂಕಾರ ಬೆಂಕಿಗೆ ಆಹುತಿಯಾಗಿದ್ದು, ಸ್ಥಳೀಯರಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಗಣೇಶನ ಪ್ರತಿಷ್ಠಾಪಿಸಿದ್ದ ಪೆಂಡಾಲ್ ಕೂಡಾ ಬೆಂಕಿಗೆ ಆಹುತಿಯಾಗಿದೆ.
ಶ್ರೀ ವಿನಾಯಕ ಭಕ್ತ ಮಂಡಳಿಯವ ಕಳೆದ 25 ವರ್ಷಗಳಿಂದ ಗಣೇಶ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401