/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾವಣಗೆರೆ | ಗಣೇಶ ವಿಸರ್ಜನೆಗೆ ಸ್ಥಳ ನಿಗದಿ ಹಾಗೂ ಟ್ರಾಕ್ಟರ್ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ : ಸೆಪ್ಟಂಬರ್ 02, 04 ಮತ್ತು 06 ರಂದು ಶ್ರೀ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲು ತಾತ್ಕಾಲಿಕವಾಗಿ ಕೆಳಕಂಡ ಸ್ಥಳಗಳಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಿಂದಟ್ರ್ಯಾಕ್ಟರ್ ಟ್ರೇಲರ್‍ಗಳನ್ನುನಿಲುಗಡೆಗೊಳಿಸಲಾಗುವುದು.

ಬಾತಿ ಕೆರೆ ಹಾಗೂ ಹದಡಿ ರಸ್ತೆ, ಭದ್ರಾ ಚಾನಲ್ ಬಳಿ ಕೃತಕ ಹೊಂಡಗಳನ್ನು ನಿರ್ಮಿಸಿರಲಾಗಿರುತ್ತದೆ. ಈ ಸ್ಥಳಗಳಲ್ಲಿ ಮಾತ್ರ ಶ್ರೀ ಗಣೇಶ ಮೂರ್ತಿಗಳನ್ನು ವಿಸರ್ಜಿಸಿ ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯ ತಡೆಯುವಲ್ಲಿ ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ತಿಳಿಸಲಾಗಿದೆ.

ಟ್ರ್ಯಾಕ್ಟರ್ ಟ್ರೇಲರ್‍ಗಳನ್ನು ನಿಲುಗಡೆಗೊಳಿಸುವ ಸ್ಥಳಗಳು

ವೆಂಕಟೇಶ್ವರ ವೃತ್ತ, ಬೇತೂರು ರಸ್ತೆ, ಬಂಬೂ ಬಜಾರ್ (ಗಣೇಶ ಹೋಟೆಲ್ ಹತ್ತಿರ), ಹಗೆದಿಬ್ಬ ವೃತ್ತ, ದುರ್ಗಾಂಬಿಕ ದೇವಸ್ಥಾನ (ಶಿವಾಜಿ ವೃತ್ತ), ಹೊಂಡದ ವೃತ್ತ, ಬಸವೇಶ್ವರ ವೃತ್ತ ಕಾಯಿಪೇಟೆ, ಕುರುಬರ ಕೇರಿ, ಡಾಂಗೆ ಪಾರ್ಕ್, ರಾಮ್ ಅಂಡ್ ಕೋ ಸರ್ಕಲ್(ಗಣೇಶ ದೇವಸ್ಥಾನ ಹತ್ತಿರ) ಬಾಪೂಜಿ ಶಾಲೆ, ಆಂಜನೇಯ ದೇವಸ್ಥಾನ, ಆಂಜನೇಯ ಬಡಾವಣೆ, ಈಶ್ವರ ಪಾರ್ವತಿ ದೇವಸ್ಥಾನ, ವಿದ್ಯಾನಗರ, 3ನೇ ಮುಖ್ಯ ರಸ್ತೆ, ವಿನೋಬನಗರ, ವಿಠ್ಠಲ ಮಂದಿರ, ಮಹಾರಾಜ ಪೇಟೆ, ಅವರಗೆರೆ, ಗುಂಡಿ ಮಹಾದೇವಪ್ಪ ಸರ್ಕಲ್, ದುರ್ಗಾಂಬಿಕ ದೇವಸ್ಥಾನ, ನಿಟುವಳ್ಳಿ, ಹೆಚ್.ಕೆ.ಆರ್. ಸರ್ಕಲ್, ಸಂಜೀವಿನಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತ, ಮೈಲಾರಲಿಂಗೇಶ್ವರ ದೇವಸ್ಥಾನ, ಕೊಂಡಜ್ಜಿ ರಸ್ತೆ (ಶಿಬಾರ), ಬನ್ನಿಮರದ ಹತ್ತಿರ ರಿಂಗ್ ರಸ್ತೆ, ಎಸ್.ಎಸ್ ಲೇಔಟ್, ಜಯದೇವ ವೃತ್ತ, ಗಣೇಶ ದೇವಸ್ಥಾನ ಹತ್ತಿರ, ಬಕ್ಕೇಶ್ವರ ಸ್ಕೂಲ್ ಮುಂಭಾಗ, ಎಂ.ಸಿ.ಸಿ ಎ ಬ್ಲಾಕ್, ಪಂಚಮುಖಿ ಆಂಜನೇಯ ದೇವಸ್ಥಾನ, ಸರಸ್ವತಿ ಬಡಾವಣೆ, ಕೋರ್ಟ್ ಹಿಂಭಾಗ, ದೇವರಾಜ ಅರಸ್ ಬಡಾವಣೆ, ಬಾಪೂಜಿ ಬ್ಯಾಂಕ್ ಹತ್ತಿರ, ಆಂಜನೇಯ ಬಡಾವಣೆ ಬಿ.ಐ.ಇ.ಟಿ ರಸ್ತೆ, ಡಿ.ಸಿ.ಎಂ ಲೇಔಟ್ ಸರ್ಕಲ್ ಹತ್ತಿರ, ಹಳೇ ಕುಂದುವಾಡ, ಹಾಸಬಾವಿ ವೃತ್ತ, ಶ್ಯಾಮನೂರು ಈ ಸ್ಥಳಗಳಲ್ಲಿ ಗಣೇಶ ವಿಸರ್ಜನೆಗೆ ಟ್ಯಾಕ್ಟ್ರರ್ ಟ್ರೇಲರ್‍ಗಳನ್ನು ನಿಲುಗಡೆಗೊಳಿಸಲಾಗುವುದು.

ಸಾರ್ವಜನಿಕ/ ಖಾಸಗಿ ಬಾವಿ/ ಕೆರೆ/ ಕಾಲುವೆ/ ಹಳ್ಳ/ ಕೊಳ್ಳಗಳಲ್ಲಿ ಯಾವುದೇ ಕಾರಣಕ್ಕೂ ವಿಸರ್ಜನೆ ಮಾಡುವಂತಿಲ್ಲ ಇಂತಹ ಪ್ರಕರಣಗಳು ಕಂಡಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version