ಲೈಫ್ ಸ್ಟೈಲ್
ಗಣೇಶ ಬಂದ ನೈಲ್ ಆರ್ಟ್ ಅಲ್ಲೂ ಕ್ರಿಯೇಟಿವಿಟಿ ಕಂಡ..!
ಗಣೇಶ ಹಬ್ಬದ ಸಡಗರದಲ್ಲಿ ಮೈಮರೆತಿರರುವ ಹೆಂಗಳೆಯರ ಸಂಭ್ರಮ ಕ್ಕೆ ಸಾಥ್ ನೀಡಲು ಈ ಬಾರಿ ವಿಶೇಷ ನೈಲ್ ಆರ್ಟ್ ಒಂದು ಗರಿಗೆದರಿದೆ. ಗಣೇಶ ಹಬ್ಬದ ಸಂಭ್ರಮಾಚರಣೆ ಮತ್ತಷ್ಟು ರಂಗು ತುಂಬಲು”ಗಣೇಶ ನೈಲ್ ಆರ್ಟ್” ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.
ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಹೊಸ ಟ್ರೆಂಡ್ ಸೃಷ್ಟಿಸುವ ನೈಲ್ ಆರ್ಟ್ ತಗ್ಙರು, ಗಣೇಶ ಸ್ಟಿಕರ್ ಬಳಸಿ ಹೊಸಾ ನೈಲ್ ಆರ್ಟ್ ಟ್ರೆಂಡ್ ಮಾಡಿದ್ದಾರೆ.
ಮಕ್ಕಳು, ಕಾಲೇಜು ಕನ್ಯೆಯರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಒಪ್ಪುವಂತಿದ್ದು, ಮಾರುಕಟ್ಟೆಯಲ್ಲಿ ಈ ಗಣೇಶ ನೈಲ್ ಆರ್ಟ್ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ನಿಮ್ಮ ಫೇವರಿಟ್ ನೈಲ್ ಕಲರ್ಗೆ ಮ್ಯಾಚ್ ಆಗುವ ಗಣೇಶ ಸ್ಟಿಕರ್ ಬಳಸಿ ಗಣೇಶ ಚತುರ್ಥಿ ಸಂಭ್ರಮ ಕ್ಕೆ ನಿಮ್ಮ ಕ್ರಿಯಾತ್ಮಕತೆಯ ಲೇಪನ ನೀಡಿ.
ಕೇವಲ ಸ್ಟಿಕರ್ಗಷ್ಟೇ ಸೀಮಿತವಾಗಿರದೆ, ನೈಲ್ ಆರ್ಟ್ ಪೆನ್ ಮೂಲಕ, ವಿಫ್ನ ನಿವಾರಕ ಗಣೇಶನ ಹಲವಾರು ಭಂಗಿಗಳಲನ್ನು ಕಣ್ಣು ಕೋರೈಸುವ ರೀತಿಯಲ್ಲಿ ರಚಿಸಲಾಗಿದೆ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243