ದಿನದ ಸುದ್ದಿ

ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ನೀರಿನ ಟ್ಯಾಂಕರ್‍ಗಳ ವ್ಯವಸ್ಥೆ

Published

on

ಸುದ್ದಿದಿನ,ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆ. 22ರಂದು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ಸಂಚಾರಿ ನೀರಿನ ಟ್ಯಾಂಕರ್‍ಗಳ ವ್ಯವಸ್ಥೆ ಹಾಗೂ ಕೃತಕ ಕೆರೆ ನಿರ್ಮಿಸಲಾಗಿದೆ.

ನೀರಿನ ಸಂಚಾರಿ ಟ್ಯಾಂಕರ್‍ಗಳನ್ನು ಹೊಸಮನೆ 5ನೇ ತಿರುವು ಗಣಪತಿ ದೇವಸ್ಥಾನದ ಹತ್ತಿರ- ಸಂಜೆ 6.00 ರಿಂದ 6.30, ಗೋಪಾಳ ಬಸ್‍ಸ್ಟ್ಯಾಂಡ್ – ರಾತ್ರಿ 6.45 ರಿಂದ 7.15, ಗೋಪಾಲಗೌಡ ಬಡಾವಣೆ, ಇನ್‍ಕಂ ಟ್ಯಾಕ್ಸ್ ಕಚೇರಿ ಹತ್ತಿರ – ರಾತ್ರಿ 7.30 ರಿಂದ 8.00, ಕರಿಯಣ್ಣ ಬಿಲ್ಡಿಂಗ್ ವಿನೋಬನಗರ- ರಾತ್ರಿ 8.15 ರಿಂದ 8.45, ಕಾಶೀಪುರ ಬಸ್‍ಸ್ಟ್ಯಾಂಡ್ – ರಾತ್ರಿ 9.00 ರಿಂದ 9.15, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ – ರಾತ್ರಿ 9.30 ರಿಂದ 10.00 ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಈ ಎಲ್ಲಾ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಪರಿಸರ ಅಧಿಕಾರಿಗಳು ಕರೆ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಮೊ.ಸಂ.: 9845411908 ನ್ನು ಸಂಪರ್ಕಿಸುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version