ದಿನದ ಸುದ್ದಿ

ಗೆದ್ದರೂ-ಸೋತರೂ ಕೆಲಸ ಮಾಡುತ್ತೇನೆ ಎಂದಿದ್ದ ಗಂಗಮ್ಮ ಪಡೆದ ಓಟುಗಳೆಷ್ಟು ಗೊತ್ತಾ..? ಹೋಗಲಿ ಮತವನ್ನಾದರೂ ಚಲಾಯಿಸಿದರಾ..?

Published

on

ಸುದ್ದಿದಿನ,ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದ ಗ್ರಾಮ ಪಂಚಾಯಿತಿ ಅಭ್ಯರ್ಥಿ ಗಂಗಮ್ಮನ ಫಲಿತಾಂಶದ ಬಗ್ಗೆ ಭಾರೀ ಕುತೂಹಲವಿತ್ತು. ಗೆದ್ದರೂ,ಸೋತರೂ ಕೆಲಸಮಾಡುತ್ತೇನೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದರು.

ತುಮಕೂರು ಜಿಲ್ಲೆಯ ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಮ ಪಂಚಾಯಿತಿಯ ಕಲ್ಕರೆ ವಾರ್ಡ್​​ ಮತ್ತು ದೊಡ್ಡಗುಣಿ ಎರಡು ಕ್ಷೇತ್ರದಿಂದ ಗಂಗಮ್ಮ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ತಾನು ಗೆದ್ದರೆ, ಕಲ್ಕೆರೆ ಗ್ರಾಮದಲ್ಲಿ ರಸ್ತೆಗಳನ್ನು ಮಾಡಿಸುತ್ತೇನೆ, ಅರಳಿ ಕಟ್ಟೆಯನ್ನು ಕಟ್ಟಿಸುತ್ತೇನೆ, ಸೋತರೆ, ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿಗಳನ್ನು ರದ್ದು ಮಾಡಿಸುತ್ತೇನೆ, ಸರ್ವೇ ನಂಬರ್ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನವನ್ನು ಮಾಡಿಸುತ್ತೇನೆ ಎಂಬುದರ ಜತೆಗೆ ಹಲವು ಭರವಸೆಗಳನ್ನು ನೀಡಿ ಮತದಾರರಿಗೆ ಶಾಕ್ ನೀಡಿದ್ದರು.

ಕೇವಲ 02 ಮತ್ತು 06 ಮತ

ಜನತೆ ಗಂಗಮ್ಮ ಸೋತರೂ- ಗೆದ್ದರೂ ಕೆಲಸ ಮಾಡಿಯೇ ಮಾಡುತ್ತಾರೆ ಎಂದು ಜನರು ಬಲವಾಗಿ ನಂಬಿದ್ದಾರೆಂದು ಅಚ್ಚರಿ ಅಂಶ. ಆ ಕಾರಣಕ್ಕೆ ಅವರಿಗೆ ಕಲ್ಕಿಣಿಯಲ್ಲಿ 02, ದೊಡ್ಡಗುಣಿಯಲ್ಲಿ 06  ಮತ ನೀಡಿ ಹೀನಾಯವಾಗಿ ಸೋಲಿಸಿದ್ದಾರೆ.

ಮತಗಳ ವಿವರ

ಮತದಾನದಿಂದ ದೂರ

ವಿಚಿತ್ರದ ಸಂಗತಿ ಎಂದರೆ, ಸ್ವತಃ ಗಂಗಮ್ಮ ನವರೇ ಮತದಾನದ ದಿನ ವೋಟ್​ ಮಾಡಿಲ್ಲ. ಮತದಾನದಿಂದ ದೂರ ಉಳಿದ ಗಂಗಮ್ಮ ಸೋತಿದ್ದರೂ ಅವರು ಕೊಟ್ಟ ಭರವಸೆಯನ್ನು ಈಡೇರುವ ಬಗ್ಗೆ ಮತದಾರರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version