ದಿನದ ಸುದ್ದಿ
ಕಾಲು ಜಾರಿದರೆ ಅಪಾಯ ಗ್ಯಾರಂಟಿ: ಇದು ಗಂಗೋಡ ಜನರ ನಿತ್ಯದ ಕಥೆ !
ಸುದ್ದಿದಿನ ಡೆಸ್ಕ್: ನೀವು ಈ ಗ್ರಾಮದ ರಸ್ತೆ ನೋಡಿದರೆ ಅಚ್ಚರಿ ಹಾಗೂ ಭಯ ವ್ಯಕ್ತ ಪಡಿಸುತ್ತೀರಿ. ಆದರೆ ಉತ್ತರಕನ್ನಡ ಜಿಲ್ಲೆ ಗಂಗೋಡ ಗ್ರಾಮದ ( gangoda village ) ಜನರಿಗೆ ಮಾತ್ರ ಅದು ಸಾಮಾನ್ಯ !
ಹಲವು ವರ್ಷಗಳಿಂದ ಇಲ್ಲಿನ ಜನರಿಗೆ ಸೇತುವೆ ಆಗಿರುವುದು ಮುರಿದು ಬಿದ್ದಿರುವ ಮರ. ಹೌದು, ಗ್ರಾಮಸ್ಥರು ಪರ ಸ್ಥಳಗಳಿಗೆ ಹೋಗಬೇಕೆಂದರೆ ಸೇತುವೆ ಮೂಲಕ ಹೋಗಬೇಕು. ಆದರೆ ಆ ಸೇತುವೆಗೆ ಆಧಾರವಾಗಿರುವುದು ಮುರಿದುಬಿದ್ದ ಮರ. ಅದರ ಸಹಾಯದಿಂದ ಮಹಿಳೆಯರು, ಮಕ್ಕಳು ತೆರಳಬೇಕು. ಈ ವೇಳೆ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ.
ಎರಡು ಮನೆಯ ಗ್ರಾಮ ಗಂಗೋಡ
ಉತ್ತರಕನ್ನಡ ಜಿಲ್ಲೆ ಗಂಗೋಡ ಗ್ರಾಮದಲ್ಲಿ ಕೇವಲ ಎರಡು ಮನೆಗಳಿವೆ. ಇವರು ನಗರ ಪ್ರದೇಶಕ್ಕೆ ಬರಲು ಸೇತುವೆ ಆಧಾರವಾಗಿದೆ. ಆದರೆ ಅಲ್ಲಿನ ಅಧಿಕಾರ ಮಾತ್ರ ಆ ಜನರಿಗೆ ಕನಿಷ್ಠ ಸಮರ್ಪಕ ರೀತಿಯಲ್ಲಿ ಸೇತುವೆ ನಿರ್ಮಾಣ ಮಾಡಿಲ್ಲ.