ದಿನದ ಸುದ್ದಿ
ರೆಸಿಪಿ | ಬಾಯಿ ಚಪ್ಪರಿಸುವ ‘ಬೆಳ್ಳುಳ್ಳಿ ಭೇಲ್’ ಮಾಡೋದು ಹೀಗೆ ನೋಡಿ..!
- ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು
- ಕಡ್ಲೆಪುರಿ
- ತೆಂಗಿನತುರಿ – 1 ಬಟ್ಟಲು
- ಬೆಳ್ಳುಳ್ಳಿ – 4 ಎಸಳು
- ಹಸಿ ಮೆಣಸಿನಕಾಯಿ – 2
- ಎಣ್ಣೆ – 2 ಚಮಚ
- ನಿಂಬೆ ರಸ – 2 ಚಮಚ
- ಕೊತ್ತಂಬರಿ ಸೊಪ್ಪು – 2 ಚಮಚ
- ಉಪ್ಪು ರುಚಿಗೆ
ಮಾಡುವ ವಿಧಾನ
ಮಿಕ್ಸಿ ಜಾರಿಗೆ ತೆಂಗಿನಕಾಯಿತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಹಾಕಿ ರುಬ್ಬಿ.
ಒಂದು ದೊಡ್ಡ ಪಾತ್ರೆಗೆ ಕಡ್ಲೆಪುರಿ, ಎಣ್ಣೆ, ರುಬ್ಬಿದ ಮಿಶ್ರಣ, ಕೊತ್ತಂಬರಿಸೊಪ್ಪು,ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243