ಲೈಫ್ ಸ್ಟೈಲ್

ಒಂದು ಚಿಕ್ಕ ಬೆಳ್ಳುಳ್ಳಿ ಶಕ್ತಿ ಎಂತದ್ದು ಗೊತ್ತಾ ?

Published

on

ಬೆಳ್ಳುಳ್ಳಿ ನೋಡದ ವ್ಯಕ್ತಿಗಳಿಲ್ಲ, ತಿನ್ನದ ಜನರಿಲ್ಲ. ಅನೇಕ ಆಹಾರ ಪದಾರ್ಥಗಳಲ್ಲಿ ಆಹ್ವಾದ ಹೆಚ್ಚಸಲು ಬೆಳ್ಳುಳ್ಳಿ ಪ್ರಧಾನವಾಗಿ ಬೇಕು. ಬೆಳ್ಳುಳ್ಳಿ ಸಾರು, ಬೆಳ್ಳುಳ್ಳಿ ಚಟ್ನಿ ಪುಡಿ ಅತ್ಯಂತ ರುಚಿಕರವಾದ ಆಹಾರಗಳಾಗಿವೆ.

ನೆಗಡಿಯಾದಾಗ ಹಿಂದೆ ಹಿರಿಯರ ಕಾಲದಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಒಂದು ಅರಿವೆಯಲ್ಲಿ ಕಟ್ಟಿ ವಾಸನೆ ನೋಡುತ್ತಿದ್ದರು. ಇದರಿಂದ ನೆಗಡಿ ಶಮನವಾಗುತ್ತಿತ್ತು. ಜತೆಗೆ ಬೆಳ್ಳುಳ್ಳಿ ಎಸಳು ಸುಟ್ಟು ಸೇವನೆ ಮಾಡುತ್ತಿದ್ದರು. ಬೆಳ್ಳುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳಿವ. ಜತೆಗೆ ಇದು ಕ್ರಿಮಿ ನಾಶಕದಂತೆ ಕೆಲಸ ಮಾಡುತ್ತದೆ ಕೂಡ.

Read This : ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆ ಬಲ್ಲೀರೇನು: ಇಲ್ಲಿವೆ ನೋಡಿ ಆರೋಗ್ಯದ ಗುಟ್ಟು !

ಬೆಳ್ಳುಳ್ಳಿ ಸೇವೆನೆಯಿಂದ ಆಗುವ ಆರೋಗ್ಯದ ಉಪಯೋಗಗಳು

  • ಬೆಳ್ಳುಳ್ಳಿ ಯನ್ನು ಬೇಯಿಸಿ ಆ ನೀರಿನಿಂದ ಗಾಯ ವನ್ನು ತೊಳೆದರೆ ಗಾಯ ಬೇಗನೆ ವಾಸಿಯಾಗುತ್ತದೆ.
  • ತೂಕ ಹೆಚ್ಚು ಇರುವವರು ಪ್ತಿದಿನ ಆಹಾರದಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.
  • ಬೆಳ್ಳುಳ್ಳಿ ರಸವನ್ನು ಜೇನು ತುಪ್ಪದಲ್ಲಿ ಬೆರಸಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಇರುವ ಜಂತು ಹುಳುಗಳು ಶಮನವಾಗುತ್ತವೆ.
  • ಬೆಣ್ಣೆಯಲ್ಲಿ ಬೆಳ್ಳುಳ್ಳಿ ತೇದು ಗಾಯಗಳಿಗೆ ಹಚ್ಚಿದರೆ ಗಾಯ ವಾಸಿಗಾಯತ್ತವೆ ಎಂದು ಹಿರಿಯರು ಹೇಳುತ್ತಾರೆ.
  • ಬೆಳ್ಳುಳ್ಳಿ ಭಾರತ ಹಾಗೂ ಅನ್ಯ ಪ್ರದೇಶಗಳ ಭೋಜನ ಪದಾರ್ಥಗಳಲ್ಲಿ ಒಂದು ಪ್ರಿಯವಾದ ಪದಾರ್ಥ.
  • ಇತ್ತೀಚಿನ ಸಂಶೋಧನೆಗಳಲ್ಲಿ ಬೆಳ್ಳುಳ್ಳಿಯನ್ನು ಸೊಳ್ಳೆ, ನುಸಿ, ನೊಣ ಹಾಗೂ ಇತರೆ ಕ್ರಿಮಿಗಳ ನಾಶಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

garlic health benefits: Allicin in garlic gives incalculable medical advantages which incorporate battling chilly and hack, bringing down circulatory strain, battling heart infirmities, and counteracting Alzheimer’s. It additionally assuages ear infections, treat intestinal issues, fix wounds, forestall malignancy, and alleviate abundance gas.

Leave a Reply

Your email address will not be published. Required fields are marked *

Trending

Exit mobile version