ಲೈಫ್ ಸ್ಟೈಲ್
ರೆಸಿಪಿ | ಗಸಿ ಗಸಿ ಬೆಳ್ಳುಳ್ಳಿ ಉಪ್ಪಿನಕಾಯಿ
ಬೆಳ್ಲುಳ್ಲಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು
• 200 ಗ್ರಾಂ ಬೆಳ್ಳುಳ್ಳಿ ಗಡ್ಡೆಯನ್ನು ಸಿಪ್ಪೆ ತೆಗೆದು ಬಿಡಿಸಿಟ್ಟುಕೊಳ್ಳುಬೇಕು . ಇದು ದೇಸಿ ಬೆಳ್ಳುಳ್ಲಿ. ನೀವು ದಪ್ಪ ಬೆಳ್ಳುಳ್ಳಿಯನ್ನು ಬಳಸಬಹುದು.
• 2-3 ಟೀಸ್ಪೂನ್ ಉಪ್ಪು
• 1-2 ಸ್ಪೂನ್ ಅಚ್ಚಖಾರದ ಪುಡಿ
•ಮೆಣಸಿನ ಕಾಯಿ ಫ್ಲೇಕ್ಸ್
ಉಪ್ಪಿನಕಾಯಿ ಮಸಾಲೆ ಮಾಡೋದಕ್ಕೆ
ಸೊಂಪು 3 ಚಮಚ
• ಒಂದು ಚಿಕ್ಕ ಚಮಚ ಮೆಂತ್ಯೆ
• 3 ಸ್ಪೂನ್ ರಾಗಿ
• 2 ಸ್ಪೂನ್ ವಿನೇಗರ್ ಇಲ್ಲವಾದ್ರೆ 2-3 ಚಮಚ ನಿಂಬೆ ರಸ ಸೇರಿಸಿ
• ಎಳ್ಳೆಣ್ಣೆ ಅರ್ಧಕಪ್ ಅಥವಾ ಒಂದು ಕಪ್
ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ
- ಮೊದಲು ಕಾಲು ಚಮಚ ಮೆಂತ್ಯೆನ್ನು ಡ್ರೈ ರೋಸ್ಟ್ ಮಾಡಿಕೊಲ್ಳಿ. ಇದಕ್ಕೆ 3 ಸ್ಪೂನ್ ರಾಗಿ ಸೇರಿಸಿ ಫ್ರೈ ಮಾಡಿಕೊಳ್ಲಿ. ಸೊಂಪು 3 ಚಮಚ ಸೇರಿಸಿ ಮಿಕ್ಸ್ ಮಾಡಿಕೊಳ್ಲಿ.
- ಬಿಸಿಯಾಗುವವರೆಗೆ ಫ್ರೈ ಮಾಡಿಕೊಳ್ಳಿ.
ಇದನ್ನು ಕೂಲ್ ಆಗಲು ಬಿಡಿ
ಈಗ ಒಂದು ಬಾಣಲಿಗೆ ಅರ್ಧ ಕಪ್ ಎಳ್ಳೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಗ್ಯಾಸ್ ಆಫ್ ಮಾಡಿ. - ಈಗ ನಾವು ಉರಿದುಕೊಂಡ ಮಸಾಲೆಯನ್ನು ಮಿಕ್ಸಿ ಮಾಡಿ ಪುಡಿ ಮಾಡಿಕೊಳ್ಳಿ.
ಈಗ ಬೆಳ್ಳುಳ್ಲಿಯನ್ನು ಎಣ್ಣೆ ಸಹಿತವಾಗಿ ಒಂದು ಬೌಲ್ಗೆ ಶೀಫ್ಟ್ ಮಾಡಿಕೊಳ್ಳಿ. ಬೆಳ್ಲುಳ್ಳಿ ಎಣ್ಣೆಯಲ್ಲಿ ತೇಲುವಷ್ಟು ಇರಬೇಕು. ಇದರಿಂದ ಉಪ್ಪಿನಕಾಯಿ ಬಹಳ ದಿನ ಬರುತ್ತೆ. - ಇದಕ್ಕೆ ಒಂದು ವರೆ ಟೀ ಸ್ಪೂನ್ ಉಪ್ಪು ಸೇರಿಸಿ, 1 ಟೀ ಸ್ಪೂನ್ ಅರಿಶಿಣ, 1 ಟೇಬಲ್ ಸ್ಪೂನ್ ಅಚ್ಚಖಾರದ ಪುಡಿ, ಮೆಣಸಿನ ಫ್ಳೆಕ್ಸ್, 4 ಸ್ಪೂನ್ ಉರಿದುಕೊಂಡ ಮಸಾಲೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಜೊತೆಗೆ ಉಳಿದುಕೊಂಡ ಮಸಾಲೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
- ನಂತರ ಉಪ್ಪಿನ ಹದ ನೋಡಿಕೊಳ್ಲಿ. ಅಗತ್ಯವಿದ್ರೆ ಉಪ್ಪು ಆಡ್ ಮಾಡಿ. ಇದು ಉಪ್ಪಿನಕಾಯಿಯನ್ನು ರಕ್ಷಿಸುತ್ತದೆ.
- ನಂತರ 2 ಸ್ಪೂನ್ ವಿನೇಗರ್ ಬಳಸಿಕೊಳ್ಲಿ.
ಇದನ್ನು ಬಾಟಲ್ಗೆ ಹಾಕಿ, ಬಟ್ಟೆಯಿಂದ ಭದ್ರವಾಗಿ ಬಾಟೆಲಿನ ಮುಚ್ಚಳವನ್ನು ಮುಚ್ಚಿದ್ರೆ 3 ದಿನ ಬಿಸಿಲಿನಲ್ಲಿಟ್ಟರೇ ಬೆಳ್ಳುಳ್ಳಿ ಉಪ್ಪಿನಕಾಯಿ ಸವಿಯೋದಕ್ಕೆ ಸಿದ್ಧ.
ಸುದ್ದಿದಿನ.ಕಾಂ|ವಾಟ್ಸಾಪ್|9986715401